ಯಂಗ್ ಯಂಗೋ ಆಡಲು ಬರ್ತಿದ್ದಾರೆ 'ಹುಚ್ಚುಡುಗ್ರು'

By Rajendra

ಯುವ ತಂಡದ ಹುಚ್ಚುಡುಗ್ರು' ಸಿನೆಮಾ ಇದೀಗ ಮಾತುಗಳನ್ನು ಜೋಡಿಸಿಕೊಂಡು ಅಶ್ವಿನಿ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ಹಂತ ತಲುಪಿದೆ. ಫೆಬ್ರವರಿ 2014ರ ಮೊದಲ ವಾರದಲ್ಲಿ ಸಿನಿಮಾ ನೋಡುಗರಿಗೆ ಲಭ್ಯವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

'ಭಗವತಿ ಪಿಕ್ಚರ್ಸ್' ಲಾಂಛನದ 'ಹುಚ್ಚುಡುಗ್ರು' ಚಿತ್ರದಲ್ಲಿ ನಾಲ್ಕು ನಾಯಕರುಗಳಿಗೆ ಶಿವನ ಪರ್ಯಾಯ ಹೆಸರುಗಳನ್ನು ಇಟ್ಟಿರುವುದರ ಜೊತೆಗೆ ಚಿತ್ರೀಕರಣ ಸಹ ಮೈಸೂರು, ನಂಜನಗೂಡಿನ ಸುತ್ತ ಮುತ್ತ ಮಾಡಲಾಗಿದೆ. ವೇದಮೂರ್ತಿ ಹಾಗೂ ರೋಹಿಣಿ ಅವರು ಈ ಚಿತ್ರದ ನಿರ್ಮಾಪಕರುಗಳು. [ಶಿವ ಶಿವ ಪೋಲಿ ಹುಡುಗ್ರಲ್ಲ ಕನ್ನಡದ 'ಹುಚ್ಚುಡುಗ್ರು']

ರೇಡಿಯೊ ಜಾಕಿ ಪ್ರದೀಪ್ ಈ 'ಹುಚ್ಚುಡುಗರು' ಮೂಲಕ ನಿರ್ದೇಶನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಯಂಗ್ ಹುಡುಗರು ಯಂಗ್ ಯೆಂಗೋ ಆಡುವುದು ಈ ಚಿತ್ರದ ಕಥೆ. ನಿರ್ದೇಶಕ ಪ್ರೇಮ್ ಅವರ ಬಳಿ 'ಕರಿಯ' ಸಿನೆಮದಿಂದ ರಾಜ್ ದಿ ಶೋಮನ್' ವರೆಗೆ ಸಹಾಯಕರಗಿ ದುಡಿದ ರಘು ಹಾಸನ್ ಅವರು ಚಿತ್ರದ ಕಥೆ, ಚಿತ್ರಕಥೆ, ನಿರ್ಮಾಣದ ಕೆಲಸವನ್ನು ನೋಡಿಕೊಳ್ಳುತ್ತಿದ್ದಾರೆ.

ಗೀತೆಗಳ ಸಾಹಿತ್ಯ ಆನಂದಪ್ರಿಯ, ಕಲ್ಯಾಣ್ ಹಾಗೂ ಸುದರ್ಶನ್ ಅವರು ನೀಡುತ್ತಿದ್ದಾರೆ. ಸಂಭಾಷಣೆಯನ್ನು ಸುದರ್ಶನ್, ಛಾಯಾಗ್ರಹಣ ಶಮನ್ ಮಿತೃ ಅವರು ಚಿತ್ರಕ್ಕೆ ಒದಗಿಸಿದ್ದಾರೆ. 'ಹುಚ್ಚುಡುಗರು' ಚಿತ್ರದ ಶೀರ್ಷಿಕೆ ಗೀತೆ ನಿರ್ದೇಶಕ ಪ್ರೇಮ್ ಹೇಳಿದ್ದಾರೆ?

"ಹರಕಲು ಅಂಗಿ, ತ್ಯಾಪೆ ಚಡ್ಡಿ, ಕುರುಚಲು ಗಡ್ಡ, ಲೂಸು ತಲೆ ಹುಚ್ಚ್ ಹುಡುಗರೋ..."ಎಂಬುವ ಹಾಡನ್ನು ಸಂಗೀತ ನಿರ್ದೇಶಕ ಜೋಷುವ ಶ್ರೀಧರ್ ಅವರು ಧ್ವನಿ ಮುದ್ರಿಸಿ ಕೊಂಡಿದ್ದಾರೆ. ಚಿತ್ರದ ತಾರಾಗಣದಲ್ಲಿ ಚೇತನ್ ಚಂದ್ರ, ಅಮಿತ್, ಪ್ರತಾಪ್, ದೇವ, ಅದಿತಿ ರಾವು, ರವಿಶಂಕರ್ ಹಾಗೂ ಇತರರು ಇದ್ದಾರೆ. ಜೋಶ್ವ ಶ್ರೀಧರ್ ಸಂಗೀತ ಒದಗಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

More from Filmibeat

English summary
Radio Jockey Pradeepa's debut directional realistic Kannada movie 'Huchchudugru' scheduled for release in February 2014 first week. The movie is all about 4 guys belongs to a small town near Nanjangud.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X