twitter
    For Quick Alerts
    ALLOW NOTIFICATIONS  
    For Daily Alerts

    ಶಿವ ಶಿವ ಪೋಲಿ ಹುಡುಗ್ರಲ್ಲ ಕನ್ನಡದ 'ಹುಚ್ಚುಡುಗ್ರು'

    By Rajendra
    |

    ರೇಡಿಯೋ ಜಾಕಿ ಆಗಿ ಚಟಪಟನೆ ಮಾತನಾಡುತ್ತಾ ಟೆಕ್ಕಿಗಳಿಂದ ಹಿಡಿದು ಹೂವು, ಹಣ್ಣು, ತರಕಾರಿ ಮಾರುವವರೆಗೂ ಮಾತಿನಲ್ಲೇ ಮನಕದ್ದಿರುವ ಪ್ರದೀಪ್ ಮೊಟ್ಟ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ 'ಹುಚ್ಚುಡುಗ್ರು'. ಹೊಸಬರ ಚಿತ್ರದ ಬಗ್ಗೆ ಮುಖ್ಯವಾಗಿ ಯುವ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಅವರ ನಿರೀಕ್ಷೆಗಳಿಗೆ ತಕ್ಕಂತೆ ಚಿತ್ರ ಮೂಡಿಬಂದಿದೆ ಎಂಬುದು 'ಹುಚ್ಚುಡುಗ್ರು' ಅಭಿಮತ.

    ತಮ್ಮ ಚಿತ್ರದ ಬಗ್ಗೆ ಮಾತನಾಡಲು, ಅನುಭವಗಳನ್ನು ಹಂಚಿಕೊಳ್ಳಲು 'ಹುಚ್ಚುಡುಗ್ರು' ತಂಡ ನಮ್ಮ ಒನ್ಇಂಡಿಯಾ ಕಚೇರಿಗೆ ಭೇಟಿ ನೀಡಿತು. ತಮ್ಮ ಚಿತ್ರದ ಬಗ್ಗೆ ಗಂಟೆಗಟ್ಟಲೆ ಮಾತನಾಡಿದರು. ಅವರ ಮಾತುಗಳಲ್ಲಿ, ಕಣ್ಣುಗಳಲ್ಲಿ, ಹಾವಭಾವಗಳಲ್ಲಿ ಸಣ್ಣ ಕಿಡಿ ಪ್ರಜ್ವಲಿಸುತ್ತಿತ್ತು.

    ಈಗಾಗಲೆ 'ಹುಚ್ಚುಡುಗ್ರು' ಚಿತ್ರದ ಹಾಡುಗಳಿಗೆ, ಪ್ರೊಮೋಗಳಿಗೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಗಿದೆ. ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ ಕನ್ನಡಿಗರು ಎಲ್ಲೆಲ್ಲಿದ್ದಾರೋ ಅಲ್ಲೆಲ್ಲಾ 'ಹುಚ್ಚುಡುಗ್ರು' ಬಗ್ಗೆ ಒಳ್ಳೆಯ ಅಭಿಪ್ರಾಯವೇ ಇದೆ.

    ಚೇತನ್ ಚಂದ್ರ, ದೇವಾ, ಅಮಿತ್ ಹಾಗೂ ಪ್ರತಾಪ್ ಚಿತ್ರದಲ್ಲಿನ 'ಹುಚ್ಚುಡುಗ್ರು'. ಈ ನಾಲ್ಕು ಮಂದಿ 'ಹುಚ್ಚುಡುಗ್ರ' ಜೊತೆ ಅದಿತಿ ರಾವ್ ನಾಯಕಿಯಾಗಿ ಅಭಿನಯಿಸಿದ್ದಾರೆ. "ಫುಲ್ ಊಟ ಬೀಡಿ ಬೆಂಕಿಪೊಟ್ಣ" ಎಂಬುದು ಚಿತ್ರದ ಅಡಿಬರಹ.

    ಶಿವ,ನಂಜುಂಡ,ಶಂಕರ,ಮಾದೇಶ ...ನಂಜನಗೂಡಿನ ಸಮೀಪದ ಹಳ್ಳಿಗೆ ಸೇರಿದ 4 ಹುಡುಗರು. ಇವರು ಬೆಂಗಳೂರಿಗೆ ಬಂದ್ದಿದ್ಯಾಕೆ? ಇಲ್ಲಿ ಮಾಡಿದ್ದಾದರು ಏನು? ಸರ್ಕಾರವನ್ನೇ ನಡುಗಿಸಿದ ಆ ವಿಷ್ಯ ಏನು? ನಾಲ್ಕು ಹುಡುಗರ ಜೊತೆ Villain ರವಿಶಂಕರ್ ಅವವರ ವ್ಯಥೆ...ಚಂದದ ಹುಡುಗಿ ಪಾರುವಿನ ಪ್ರೀತಿಯ ಕಥೆ... Comedy, Music, Drama, Sentiment, Action, Romance, Feelings, Dance ಎಲ್ಲಾದಕ್ಕು ಮಿಗಿಲಾಗಿ ನಮ್ಮ ಸಿನಿಮಾದಲ್ಲಿ ಇದೆ ಕಥೆ and thrilling ಆಗಿರೊ ಚಿತ್ರಕಥೆ ಎನ್ನುತ್ತದೆ ಚಿತ್ರತಂಡ ಸ್ಲೈಡ್ ಗಳಲ್ಲಿ ಮುಂದೆ ಓದುತ್ತಾ ಹೋಗಿ ಹುಚ್ಚುಡುಗ್ರ ಬಿಚ್ಚು ಮಾತುಗಳು...

    ರೇಡಿಯೋಗಿಂತಲೂ ನಿರ್ದೇಶನ ಸವಾಲಿನ ಕೆಲಸ

    ರೇಡಿಯೋಗಿಂತಲೂ ನಿರ್ದೇಶನ ಸವಾಲಿನ ಕೆಲಸ

    ನನ್ನ ಮಟ್ಟಿಗೆ ರೇಡಿಯೋಗಿಂತಲೂ ನಿರ್ದೇಶನ ಸವಾಲಿನ ಕೆಲಸ ಎಂದೇ ಮಾತಿಗಿಳಿದ ಪ್ರದೀಪ್, ತಮಗೆ ಮೂರು ವರ್ಷಗಳ ಹಿಂದೆಯೇ ಚಿತ್ರ ನಿರ್ದೇಶನಕ್ಕೆ ಅವಕಾಶ ಬಂತು. ಆದರೆ ಆಗ ಸಾಕಷ್ಟು ಸಿದ್ಧತೆಗಳಿಲ್ಲದ ಕಾರಣ ನಿರ್ದೇಶನಕ್ಕೆ ಕೈಹಾಕಲಿಲ್ಲ.

    ಫುಲ್ ಊಟ ಬೀಡಿ ಬೆಂಕಿ ಪೊಟ್ಣ

    ಫುಲ್ ಊಟ ಬೀಡಿ ಬೆಂಕಿ ಪೊಟ್ಣ

    ರಘು ಹಾಸನ್ ಅವರು ಈ ಚಿತ್ರದ ಕಥೆ ಚಿತ್ರಕಥೆಯನ್ನು ಬರೆದಿದ್ದಾರೆ. ಹಾಸನದ ಕಡೆ ಭಾಷೆಯ ಪ್ರಭಾವ ಚಿತ್ರದಲ್ಲಿದೆ. ಮೈಸೂರಿನ ಕಡೆ ಕೂಳೆ ಎಂಬ ಪದ ಬಳಸುತ್ತಾರೆ. ಎಲ್ಲರೂ ಕೂಳೆ ಮಾಡಿಕೊಂಡು ಇರೋಣ ಅಂತಿರ್ತಾರೆ. ಅದೇ ರೀತಿ ಹಾಸನದ ಕಡೆ ಫುಲ್ ಊಟ ಬೆಂಕಿ ಪೊಟ್ಣ ಎಂಬ ಮಾತು ಚಾಲ್ತಿಯಲ್ಲಿದೆ. ಇದಿಷ್ಟು ಸಿಕ್ಕಿದರೆ ಸಾಕು ಲೈಫ್ ಸೆಟ್ಲ್ ಆದಂತೆ ಎಂಬರ್ಥದಲ್ಲಿ ಬಳಸುತ್ತಾರೆ. ಈ ನಮ್ಮ ಕಥೆಗೆ ಇದೇ ಸೂಕ್ತ ಅನ್ನಿಸಿ ಫುಲ್ ಊಟ ಬೆಂಕಿಪೊಟ್ಣ ಎಂಬ ಅಡಿಬರಹ ಇಟ್ಟೆವು. ತೋಟಗಳಲ್ಲಿ ಕೆಲಸ ಮಾಡುವವರಿಗೆ ಫುಲ್ ಊಟ ಹಾಕಿ ಬೀಡಿ ಬೆಂಕಿಪಟ್ಣ ಕೊಡ್ತಾರೆ. ಅಲ್ಲಿಗೆ ಆ ದಿನ ಆರಾಮವಾಗಿ ಕಳೆಯಿತು ಎಂಬರ್ಥದಲ್ಲಿ ಈ ಮಾತು.

    ನಂಜನಗೂಡಿನ ಹಿನ್ನೆಲೆಯಲ್ಲಿ ಸಾಗುವ ಕಥೆ

    ನಂಜನಗೂಡಿನ ಹಿನ್ನೆಲೆಯಲ್ಲಿ ಸಾಗುವ ಕಥೆ

    ಕಥೆ ಚಿತ್ರಕಥೆ ಬರೆದಿರುವುದು ರಘು ಹಾಸನ್. ಆ ಕಡೆಯವರು ಆದಕಾರಣ ಹಾಸನದ ಕಡೆಯ ಭಾಷೆ ಹೆಚ್ಚಾಗಿ ಬಳಕೆಯಾಗಿದೆ. ಆದರೆ ಕಥೆ ನಂಜನಗೂಡಿನ ಹಿನ್ನೆಲೆಯಲ್ಲಿ ಶುರುವಾಗುತ್ತದೆ. ನಂಜನಗೂಡಿನ ಪಕ್ಕದಲ್ಲೇ ಇರುವ ಒಂದು ಹಳ್ಳಿಯಿಂದ ಕಥೆ ಆರಂಭವಾಗುತ್ತದೆ. ಇದೊಂದು ಜರ್ನಿಂಗ್ ಸ್ಟೋರಿ. ಅಲ್ಲಿಂದ ಮೈಸೂರು, ಶ್ರೀರಂಗಪಟ್ಟಣ, ಮಂಡ್ಯ...ಹೀಗೆ ಬೆಂಗಳೂರು ತಲುಪುತ್ತದೆ ಕಥೆ.

    ಏನಿದು ಹುಚ್ಚುಡುಗ್ರ ಕಥೆ?

    ಏನಿದು ಹುಚ್ಚುಡುಗ್ರ ಕಥೆ?

    ಪುನೀತ್ ರಾಜ್ ಕುಮಾರ್ ಅವರ 'ಹುಡುಗರು' ಚಿತ್ರಕ್ಕೂ ತಮ್ಮ 'ಹುಚ್ಚುಡುಗ್ರು' ಚಿತ್ರಕ್ಕೂ ಯಾವುದೇ ರೀತಿಯ ಹೋಲಿಕೆ ಬೇಡ. ಹುಡುಗರು ಎಂಬುದು ಜನರಲ್ ಸಬ್ಜೆಕ್ಟ್. ಹುಚ್ಚುಡುಗ್ರು ಯಾಕೆಂದರೆ ಆ ಒಂದು ವಯೋಮಾನದ ಹುಡುಗರು ತೆಗೆದುಕೊಳ್ಳುವ ನಿರ್ಧಾರಗಳು ಬಹಳ ಮುಖ್ಯವಾಗುತ್ತವೆ. ತಮ್ಮ ಮುಂದಿನ ಭವಿಷ್ಯ ಅವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿಸಿರುತ್ತದೆ. ತೀರಾ ಹುಡುಗುತನವೂ ಅಲ್ಲ, ಯುವಕರೂ ಅಲ್ಲದ ವಯಸ್ಸು. ಲವ್ವಲ್ಲಿನ ಹುಚ್ಚುತನ ಇರಬಹುದು, ವೃತ್ತಿಬದುಕಿನಲ್ಲಿ ಹುಚ್ಚುತನ ಇರಬಹುದು ಅದೇನು ಎಂಬುದೇ ಚಿತ್ರದ ಕಥೆ.

    ಚೇತನ್ ಚಂದ್ರ ಏನು ಹೇಳುತ್ತಾರೆ?

    ಚೇತನ್ ಚಂದ್ರ ಏನು ಹೇಳುತ್ತಾರೆ?

    ನನಗೆ ಇಲ್ಲಿಯವರೆಗೂ ಯಾವುದೇ ಬ್ರೇಕ್ ಸಿಕ್ಕಿಲ್ಲ. ಇದರಲ್ಲಿ ನನಗೆ ಖಂಡಿತವಾಗಿಯೂ ಬ್ರೇಕ್ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ತಮಗಿದೆ. ಹುಚ್ಚುಡುಗ್ರು ಟೀಂ ಬಹಳ ಸ್ಟ್ರಾಂಗ್ ಆಗಿದೆ. ಮುಖ್ಯವಾಗಿ ಪ್ರದೀಪ್, ರಘುಹಾಸನ್ ಹಾಗೂ ನಮ್ಮ ನಿರ್ಮಾಪಕರು ವೇದಾ. ಇವರೆಲ್ಲಾ ಹುಚ್ಚುಡುಗ್ರು ಚಿತ್ರದ ಮೂರು ಆಧಾರಸ್ತಂಭಗಳು.

    ಇಲ್ಲಿ ಕಥೆಯೇ ಹೀರೋ: ಚೇತನ್ ಚಂದ್ರ

    ಇಲ್ಲಿ ಕಥೆಯೇ ಹೀರೋ: ಚೇತನ್ ಚಂದ್ರ

    ಇಲ್ಲಿ ಟೀಂ ವರ್ಕ್ ತುಂಬಾ ಚೆನ್ನಾಗಿದೆ. ಇದು ನನ್ನ ಚಿತ್ರ ಎಂದು ಪ್ರತಿಯೊಬ್ಬರೂ ಕೆಲಸ ಮಾಡಿದ್ದಾರೆ. ಕಥೆ ತುಂಬಾ ಚೆನ್ನಾಗಿದೆ. ಇಲ್ಲಿ ಕಥೆಯೇ ಹೀರೋ. ಆರ್ ಜೆ ಪ್ರದೀಪ್ ಇಷ್ಟೆಲ್ಲಾ ಚೆನ್ನಾಗಿ ಡೈರೆಕ್ಷನ್ ಮಾಡಿದ್ದಾರೆ ಎಂಬುದನ್ನು, ಮುಖ್ಯವಾಗಿ ಯಾರು ಊಹಿಸುವುದಕ್ಕೇ ಸಾಧ್ಯವಿಲ್ಲ.

    ಶಮನ್ ಅವರ ಛಾಯಾಗ್ರಹಣವೂ ಸೂಪರ್

    ಶಮನ್ ಅವರ ಛಾಯಾಗ್ರಹಣವೂ ಸೂಪರ್

    ಶಮನ್ ಮಿತ್ರು ಅವರ ಛಾಯಾಗ್ರಹಣವೂ ಸೂಪರ್. ನಾವು ನಾಲ್ಕು ಜನರೂ ಅದ್ಭುತವಾಗಿ ಮಾಡಿದ್ದೇವೆ. ಅಮಿತ್ ಸಹ ಅಷ್ಟೇ ಸೊಗಸಾಗಿ ಮಾಡಿದ್ದಾರೆ. ಮಂಡ್ಯದ ಪ್ರತಾಪ್ ಅವರೂ ಅಷ್ಟೇ. ಇನ್ನು ದೇವ್ ಅವರು ಎಷ್ಟು ಸೈಲೆಂಟಾಗಿ ಕಾಣಿಸುತ್ತಿದ್ದಾರೋ ಚಿತ್ರದಲ್ಲಿ ಅಷ್ಟೇ ವಯಲೆಂಟ್. ಒಟ್ಟಾರೆ ಚಿಂದಿ ಚಿತ್ರಾನ್ನ ಉಡಾಯಿಸಿದ್ದೀವಿ.

    ಅದಿತಿ ರಾವ್ ಅವರಿಗೆ ಇದು ಎರಡನೇ ಚಿತ್ರ

    ಅದಿತಿ ರಾವ್ ಅವರಿಗೆ ಇದು ಎರಡನೇ ಚಿತ್ರ

    ಅದಿತಿ ರಾವ್ ಅವರಿಗೆ ಇದು ಎರಡನೇ ಚಿತ್ರ. ಡಬ್ ಬಳಿಕ ಅವರು ಹುಚ್ಚುಡುಗ್ರು ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಡವ್ ಇನ್ನೂ ಬಿಡುಗಡೆಯಾಗಿಲ್ಲ. ಅದಕ್ಕಿಂತಲೂ ಮುಂಚಿತವಾಗಿ ತಮ್ಮ ಚಿತ್ರವೇ ಬಿಡುಗಡೆಯಾಗಲೂ ಬಹುದು. ಈ ಚಿತ್ರ ಪ್ರತಿಯೊಬ್ಬರಿಗೂ ಬ್ರೇಕ್ ಕೊಡುತ್ತದೆ.

    ಈ ಚಿತ್ರ ಪ್ರತಿಯೊಬ್ಬರಿಗೂ ಬ್ರೇಕ್ ಕೊಡುತ್ತದೆ

    ಈ ಚಿತ್ರ ಪ್ರತಿಯೊಬ್ಬರಿಗೂ ಬ್ರೇಕ್ ಕೊಡುತ್ತದೆ

    ಮುಂಗಾರು ಮಳೆ ಬಂದಾಗ ಎಲ್ಲರಿಗೂ ಹೇಗೆ ಬ್ರೇಕ್ ಸಿಕ್ತೋ ಅದೇ ರೀತಿ ನಮ್ಮ ಹುಚ್ಚುಡುಗ್ರು ಚಿತ್ರತಂಡಕ್ಕೂ ಒಳ್ಳೆಯ ಬ್ರೇಕ್ ನೀಡುತ್ತದೆ. ಆರಂಭದಲ್ಲಿ ನಾವು ಕೇವಲ ಕೆಲವರಷ್ಟೇ ಇದ್ದೆವು. ಈಗ ಎಲ್ಲರೂ ಹುಚ್ಚುಡುಗ್ರು ಟೀಂಗೆ ಸೇರ್ಪಡೆಯಾಗುತ್ತಿದ್ದಾರೆ.

    ಆಡಿಯೋಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಕ್ಕಿದೆ

    ಆಡಿಯೋಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಕ್ಕಿದೆ

    ಆಡಿಯೋ ರಿಲೀಸ್ ಫಂಕ್ಷನ್ ಗೆ ಈ ರೀತಿ ರೆಸ್ಪಾನ್ಸ್ ಸಿಗುತ್ತದೆ ಎಂದು ನಾವು ಊಹಿಸಿರಲಿಲ್ಲ. ನಗರದಿಂದ ಅಷ್ಟು ದೂರ ಆಡಿಯೋ ರಿಲೀಸ್ ಫಂಕ್ಷನ್ ಇಟ್ಟರೂ ಜನಜಂಗುಳಿ ಸಿಕ್ಕಾಪಟ್ಟೆ ಆಗಮಿಸಿತ್ತು.

    ಎರಡು ತಿಂಗಳ ಕಾಲ ಚಿತ್ರೀಕರಣ ಮಾಡಿದ್ದೇವೆ

    ಎರಡು ತಿಂಗಳ ಕಾಲ ಚಿತ್ರೀಕರಣ ಮಾಡಿದ್ದೇವೆ

    ಚಿತ್ರೀಕರಣವನ್ನು ಎರಡು ತಿಂಗಳ ಕಾಲ ಮಾಡಿದ್ದೇವೆ. ಎಲ್ಲಾ ಪ್ಲಾನ್ ಪ್ರಕಾರವೇ ನಡೆಯಿತು. ಆ ಎರಡು ತಿಂಗಳು ಪ್ಲಾನ್ ಮಾಡಲಿಕ್ಕೆ ನಮಗೆ ಎಂಟು ತಿಂಗಳು ಸಮಯ ಬೇಕಾಯಿತು. ಪಕ್ಕಾ ಹೋಂ ವರ್ಕ್ಸ್ ಮಾಡಿಕೊಂಡು ತೆಗೆದಂತಹ ಚಿತ್ರ. ಪೋಸ್ಟರ್ ಗಳ ವಿನ್ಯಾಸ ಇರಬಹುದು, ಬಣ್ಣಗಳ ಆಯ್ಕೆ,ಥೀಮ್ ಸೆಲೆಕ್ಷನ್ ಇರಬಹುದು ಪ್ರತಿಯೊಂದರಲ್ಲೂ ಕೇರ್ ತಗೊಂಡಿದ್ದೇವೆ.

    ಎಲ್ಲವೂ ಪ್ಲಾನ್ ಪ್ರಕಾರವೇ ನಡೆಯಿತು

    ಎಲ್ಲವೂ ಪ್ಲಾನ್ ಪ್ರಕಾರವೇ ನಡೆಯಿತು

    ಇದೆಲ್ಲವನ್ನೂ ಮೊದಲ ಸಿದ್ಧಪಡಿಸಿಕೊಂಡಿದ್ದೆವು. ಎರಡು ತಿಂಗಳಲ್ಲಿ ಮುಗಿಸಬೇಕೆಂದು ಪ್ಲಾನ್ ಹಾಕಿದ್ದೆವು. ಒಂದಷ್ಟು ದಿನ ಮಳೆಯಿಂದ ಸಮಸ್ಯೆಯಾಯಿತು ಎಂಬುದನ್ನು ಬಿಟ್ಟರೆ ಉಳಿದಂತೆ ನಮ್ಮ ಪಕ್ಕಾ ಪ್ಲಾನ್ ಪ್ರಕಾರವೇ ನಡೆಯಿತು.

    ಅಮಿತ್ ಹೀರೋ ಆಗಿ ಪರಿಚಿತರಾಗುತ್ತಿದ್ದಾರೆ

    ಅಮಿತ್ ಹೀರೋ ಆಗಿ ಪರಿಚಿತರಾಗುತ್ತಿದ್ದಾರೆ

    ಅಮಿತ್ (ಆಟೋರಾಜ) ಇದುವರೆಗೂ ಹೆಚ್ಚಾಗಿ ಕಾಮಿಡಿ ಮಾಡಿದ್ದಾರೆ. ರಾಜ್ ಮ್ಯೂಸಿಕ್ ನಲ್ಲಿ ಅವರ ಕಾರ್ಯಕ್ರಮ ನೋಡುತ್ತಿದ್ದರೆ ಎಮೋಷನ್ಸ್, ಆಕ್ಷನ್, ಸೆಂಟಿಮೆಂಟ್ ಗಳನ್ನು ಅವರಲ್ಲಿ ತರಬಹುದು ಅನ್ನಿಸಿತು. ಇದರಲ್ಲಿ ಹೀರೋ ಆಗಿ ಪರಿಚಯವಾಗುತ್ತಿದ್ದಾರೆ.

    ಇದು ಹೀರೋಯಿಸಂ ತೋರಿಸುವ ಚಿತ್ರವಲ್ಲ

    ಇದು ಹೀರೋಯಿಸಂ ತೋರಿಸುವ ಚಿತ್ರವಲ್ಲ

    ತಮ್ಮ ಚಿತ್ರಕ್ಕೆ ಆದಷ್ಟು ಹೊಸಬರೇ ಬೇಕಾಗಿತ್ತು. ಇದು ಹೀರೋಯಿಸಂ ತೋರಿಸುವ ಚಿತ್ರವಲ್ಲ. ನಾನೂ (ಪ್ರದೀಪ್) ಸಹ ಹೊಸನಾದ ಕಾರಣ ಹೊಸಬರೊಂದಿಗೆ ಚಿತ್ರ ಮಾಡಿದ್ದು ಕಥೆಗೆ ಸಂಪೂರ್ಣ ನ್ಯಾಯ ಒದಗಿಸಲು ಸಾಧ್ಯವಾಯಿತು.

    ಬೇಬಿ ಶ್ಯಾಮಿಲಿ ಕಾಲ್ ಶೀಟ್ ಗೆ ತುಂಬಾ ಪ್ರಯತ್ನಿಸಿದೆವು

    ಬೇಬಿ ಶ್ಯಾಮಿಲಿ ಕಾಲ್ ಶೀಟ್ ಗೆ ತುಂಬಾ ಪ್ರಯತ್ನಿಸಿದೆವು

    ಈ ಚಿತ್ರಕ್ಕೆ ನಾಯಕಿಯಾಗಿ ಕರೆತರಲು ಬೇಬಿ ಶ್ಯಾಮಿಲಿ ಅವರ ಕಾಲ್ ಶೀಟ್ ಗೆ ತುಂಬಾ ಪ್ರಯತ್ನ ಪಟ್ಟೆವು. ಆದರೆ ಅವರು ನಟನೆ ಸದ್ಯಕ್ಕೆ ತಾನು ಮಾಡಲ್ಲ. ನಿರ್ದೇಶನ ಮಾಡುತ್ತಿದ್ದೇನೆ ಎಂದು ಬೇಬಿ ಶ್ಯಾಮಿಲಿ ಹೇಳಿದರು. ಹಾಗಾಗಿ ಅವರನ್ನು ಕರೆತರಲು ಸಾಧ್ಯವಾಗಲಿಲ್ಲ.

    ಹೊಸ ಮುಖ, ಹೊಸ ಪ್ರತಿಭೆ ಅದಿತಿ ರಾವ್

    ಹೊಸ ಮುಖ, ಹೊಸ ಪ್ರತಿಭೆ ಅದಿತಿ ರಾವ್

    ಬಹುಶಃ ಅದಿತಿ ಅವರಿಗೇ ಈ ಪಾತ್ರ ಕಾದಿತ್ತು ಅನ್ನಿಸುತ್ತದೆ. ಆ ಟೈಮಲ್ಲಿ ಅವರು ಡೌವ್ ಚಿತ್ರ ಮಾಡುತ್ತಿದ್ದರು. ಹೊಸ ಮುಖ, ಹೊಸ ಪ್ರತಿಭೆ ಅನ್ನಿಸಿತು. ಕಡೆಗೆ ಅದಿತಿ ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಿದೆವು.

    ಪಕ್ಕಾ ಮಂಡ್ಯ ಕಡೆಯ ಕಾಸ್ಟ್ಯೂಮ್ಸ್

    ಪಕ್ಕಾ ಮಂಡ್ಯ ಕಡೆಯ ಕಾಸ್ಟ್ಯೂಮ್ಸ್

    ನಮ್ಮ ಚಿತ್ರದ ಪೋಸ್ಟರ್ ಗಳನ್ನು ನೋಡಿದವರು ಎಲ್ಲೋ ತಮಿಳು ಚಿತ್ರದ ಛಾಯೆ ಕಾಣುತ್ತಿದೆ ಎಂದು ಅಭಿಪ್ರಾಯಪಡುತ್ತಿದ್ದಾರೆ. ಆದರೆ ಇದು ಪಕ್ಕಾ ಮಂಡ್ಯ ಕಡೆಯ ಕಾಸ್ಟ್ಯೂಮ್ಸ್. ಒಂದು ಸ್ವಲ್ಪ ಆರೆಂಜ್ ಕಲರ್ ಕೊಟ್ಟುಬಿಟ್ರೆ ತಮಿಳು ಸಿನಿಮಾ ಎಂದುಕೊಳ್ಳುತ್ತಾರೆ.

    ಕಥೆ ಕೇಳಿದ ಕೂಡಲೆ ಒಪ್ಪಿಕೊಂಡೆ: ಅದಿತಿ

    ಕಥೆ ಕೇಳಿದ ಕೂಡಲೆ ಒಪ್ಪಿಕೊಂಡೆ: ಅದಿತಿ

    ಕಥೆ ಕೇಳಿದ ಕೂಡಲೆ ಒಪ್ಪಿಕೊಂಡೆ. ಈ ಪಾತ್ರ ತನಗೆ ಸಿಕ್ಕಿದ್ದಕ್ಕೆ ನಾನು ತುಂಬಾ ಲಕ್ಕಿ ಎಂದು ಹೇಳಬಹುದು. ನಿಜಕ್ಕೂ ಈ ಟೀಂನಲ್ಲಿನ ಸ್ಪಿರಿಟ್ ನೋಡಿದಾಗ ಖುಷಿಯಾಯಿತು. ನಮ್ಮೆಲ್ಲರಿಗೂ ಬ್ರೇಕ್ ಕೊಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಚೇತನ್ ಚಂದ್ರ ನಿಜಜೀವನದಲ್ಲಿ ಹೇಗಿದ್ದಾರೆ ಅದೇ ರೀತಿ ಅವರ ಪಾತ್ರದಲ್ಲೂ ಕಾಣಿಸುತ್ತಾರೆ.

    ಶಿವನ ವಿವಿಧ ಅವತಾರಗಳಲ್ಲಿ ಕಾಣಿಸುವ ಹುಚ್ಚುಡುಗ್ರು

    ಶಿವನ ವಿವಿಧ ಅವತಾರಗಳಲ್ಲಿ ಕಾಣಿಸುವ ಹುಚ್ಚುಡುಗ್ರು

    ಶಿವನ ಬೇರೆ ಬೇರೆ ರೂಪಗಳನ್ನೇ ಚಿತ್ರದ ಪಾತ್ರಗಳಿಗೆ ಇಟ್ಟಿದ್ದೇವೆ. ಅದು ರೊಮ್ಯಾಂಟಿಕ್ ಆಗಿರಬಹುದು, ರೌದ್ರ, ಹಾಸ್ಯ ಹೀಗೆ ವಿವಿಧ ಅವತಾರಗಳಲ್ಲೇ ಈ ಹುಡುಗರು ಕಾಣಿಸಿಕೊಳ್ಳುತ್ತಾರೆ.

    ಡಿಸೆಂಬರ್ ನಲ್ಲಿ ಚಿತ್ರ ತೆರೆಗೆ

    ಡಿಸೆಂಬರ್ ನಲ್ಲಿ ಚಿತ್ರ ತೆರೆಗೆ

    ಕನ್ನಡದಲ್ಲಿ ಈಗ ಪ್ರಯೋಗಾತ್ಮಕ ಚಿತ್ರಗಳ ಕಾಲ. ತಮ್ಮ ಚಿತ್ರವನ್ನೂ ಪ್ರೇಕ್ಷಕರು ಖಂಡಿತ ಒಪ್ಪುತ್ತಾರೆ ಎಂಬ ನಿರೀಕ್ಷೆ ನಮಗಿದೆ. ಇನ್ನು ಒಂದೇ ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ. ಅದಾದ ಬಳಿಕ ಡಿಸೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ತರುತ್ತಿದ್ದೇವೆ.

    ಹಾಡುಗಳಲ್ಲಿ ಕ್ಲಾಸ್ ಫೀಸ್ ಇದೆ.

    ಹಾಡುಗಳಲ್ಲಿ ಕ್ಲಾಸ್ ಫೀಸ್ ಇದೆ.

    'ಹುಚ್ಚುಡುಗ್ರು' ಟೈಟಲ್ ಅಷ್ಟೇ ನಿಮಗೆ ಮಾಸ್ ತರಹ ಕಾಣಿಸುತ್ತದೆ. ಆದರೆ ಹಾಡುಗಳನ್ನು ಕೇಳಿದರೆ ಕ್ಲಾಸ್ ಫೀಲ್ ಸಿಗುತ್ತದೆ. ಚಿತ್ರವೂ ಅಷ್ಟೇ ಕ್ಲಾಸ್ ಆಗಿದೆ. ಎಲ್ಲೂ ಡಬಲ್ ಮೀನಿಂಗ್ ಡೈಲಾಗ್ ಗಳಾಗಲಿ, ಪೋಲಿತನವಾಗಲಿ ಇಲ್ಲ.

    English summary
    Pradeepa, who is famous as a Radio Jockey (RJ), is making his debut as a director in Kannada film industry. The movie is titled as Huchudugaru, which is slated to release in December 2013. Amidst their busy schedule, Huchudugaru team visited Oneindia and shared their experience.
    Wednesday, October 30, 2013, 17:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X