Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಸಿಷ್ಠ ಸಿಂಹ ಹೊಸ ಸಿನಿಮಾಕ್ಕೆ ಕೋಟಿ ಬಜೆಟ್‌ನ ಮನೆ ನಿರ್ಮಾಣ! ಅಂಥಹದ್ದೇನಿದೆ ಮನೆಯಲ್ಲಿ?
ಹರಿಪ್ರಿಯಾ ಜೊತೆ ನಿಶ್ಚಿತಾರ್ಥದ ಬಳಿಕ ಸಖತ್ ಲವ್ ಮೂಡ್‌ನಲ್ಲಿರುವ ನಟ ವಸಿಷ್ಠ ಸಿಂಹ 'ಲವ್ಲಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿದೇಶಿ ಹಾಟ್ ಸ್ಪಾಟ್ ಬೀಚ್‌ಗಳಿಗೆ ಸರಿಸಮನಾದ ಉಡುಪಿ ಸಮೀಪದ ಪಡುಕೆರೆ ಕಡಲ ತೀರದಲ್ಲಿ ಲವ್ಲಿ ಚಿತ್ರಕ್ಕೆ ಬಂದು ಕೋಟಿ ವೆಚ್ಚದ ಅದ್ದೂರಿ ಸೆಟ್ ಹಾಕಲಾಗಿದೆ! ದಕ್ಷಿಣ ಭಾರತದ ಮಟ್ಟಿಗೆ ಇದೊಂದು ಅಪರೂಪದ ಮತ್ತು ಮೊದಲ ಪ್ರಯತ್ನ ಎನ್ನುತ್ತಿದೆ ಚಿತ್ರತಂಡ.
ಗಡಸು ಧ್ವನಿಯ ನಾಯಕ ನಟ ವಸಿಷ್ಟ ಸಿಂಹ ಉತ್ತರ ಭಾರತದ ಚಾರ್ಮಿಂಗ್ ನಟಿ ಸ್ಟೆಫಿ ಪಟೇಲ್ಇವರ ಜೊತೆ ಸಿ ಫೇಸ್ ಸೈಟ್‌ನಲ್ಲಿ ಸೆಟ್ ಹಾಕಿಕೊಂಡು, ಅಬುವನಸ ಕ್ರಿಯೆಷನ್ಸ್ ಚಿತ್ರ ತಂಡ, ಕಳೆದ ಎರಡು ವಾರಗಳಿಂದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದೆ. ಬಹುನಿರೀಕ್ಷಿಯ 'ಲವ್ಲಿ' ಚಿತ್ರಕ್ಕಾಗಿ ಮಲ್ಪೆ ಸಮೀಪದ ಪಡುಕೆರೆ ಬೀಚಿನಲ್ಲಿ ಈ ಅದ್ದೂರಿ ಸೆಟ್ ಹಾಕಲಾಗಿದೆ. ಲವ್-ಫ್ಯಾಮಿಲಿ-ಸೆಂಟಿಮೆಂಟ್ ಹಾಗೂ ರೌಡಿಸಂ ಎಳೆ ಹೊಂದಿರುವ ಚಿತ್ರದಲ್ಲಿ ಈ ಮನೆ ಕೂಡ ಒಂದು ಮಹತ್ವದ ಪಾತ್ರ ವಹಿಸುತ್ತೆ ಅಂತಿದೆ ಚಿತ್ರತಂಡ.
''ಬದುಕಿದರೆ
ದರ್ಶನ್
ಸರ್
ಥರ
ಬದುಕಬೇಕು''-
ವಸಿಷ್ಟ
ಸಿಂಹ
ಈ ಮನೆಯ ಸುತ್ತಲೇ ಕಥೆ ನಡೆಯುವದರಿಂದ, ನಿರ್ಮಾಪಕರು ಹಿಂದೂ ಮುಂದು ನೋಡದೆ ಒಂದು ಕೋಟಿಗೂ ಅಧಿಕ ವೆಚ್ಚದಲ್ಲಿ ಅದ್ಧೂರಿ ಮನೆಯ ಸೆಟ್ ನಿರ್ಮಿಸಿದ್ದಾರೆ. ಕಲಾ ನಿರ್ದೇಶಕ ಪ್ರತಾಪ್ 16 ಜನರ ತಂಡದೊಂದಿಗೆ ಹರಸಾಹಸಪಟ್ಟು ಈ ಸೆಟ್ ತಯಾರಿಸಿದ್ದಾರೆ. ಈ ಸೆಟ್ಟಿನ ಒಳಗೊಂದು ಸುತ್ತು ಹಾಕಿದ್ರೆ ಸಿನಿಮಾದ ಕಥೆ ಬಗ್ಗೆ ಕುತೂಹಲ ಮೂಡುತ್ತದೆ. ಪ್ರತಿಯೊಂದು ವಸ್ತುವನ್ನು ಅತ್ಯಂತ ಕಾಳಜಿಯಿಂದ ಜೋಡಿಸಿದ್ದು, ಈ ಎಲ್ಲ ಮೆಟೀರಿಯಲ್ಸ್ ಪಾತ್ರಗಳ ರೀತಿಯಲ್ಲಿ ಚಿತ್ರಕ್ಕೆ ಕಾಂಟ್ರಿಬ್ಯುಟ್ ಮಾಡುತ್ತೆ ಅಂತಾರೆ ನಿರ್ದೇಶಕ ಚೇತನ್ ಕೇಶವ್. 'ಮಫ್ತಿ' ಚಿತ್ರದಲ್ಲಿ ಸಹಾಯಕರಾಗಿದ್ದ ಚೇತನ್, ಅವತ್ತಿಂದಲೇ ವಶಿಷ್ಠ ಜೊತೆ ಸಹೋದರತ್ವ ಬೆಳೆಸಿಕೊಂಡಿದ್ದರು. ಇವರನ್ನು ತಮ್ಮ ಅಂತಾನೇ ಕರೆಯುವ ವಶಿಷ್ಠ ಸಿಂಹ ಚೇತನ್ ಕೇಶವ್ ಅವರ ಮೊದಲ ಪ್ರಯತ್ನಕ್ಕೆ ಸಾತ್ ನೀಡಿದ್ದಾರೆ. ಲವ್ಲಿ ಚಿತ್ರದಲ್ಲಿ ನಾಯಕ ನಟನಾಗಿ ಹೊಸ ಫೀಲ್ ಕೊಡಲಿದ್ದಾರೆ.

'ಕೆಜಿಎಫ್ 2' ಚಿತ್ರೀಕರಣವೂ ನಡೆದಿತ್ತು
ಉಡುಪಿಯ ಮಲ್ಪೆ ಸಮೀಪ ಇರುವ ಪಡುಕೆರೆ ಬೀಚ್‌ಗೆ, ಫಾರಿನ್ ಲೊಕೇಶನ್‌ನ ಫೀಲ್ ಇದೆ. ಈಗಾಗಲೇ ಕೆಜಿಎಫ್ 2 ಚಿತ್ರತಂಡ ಇಲ್ಲಿನ ಒಂದು ಅದ್ಭುತ ಸೀಕ್ವೆನ್ಸ್ ತೋರಿಸಿದೆ. ಸಮುದ್ರಕ್ಕೆ ಮುಖ ಮಾಡಿ ಅದ್ದೂರಿ ಸೆಟ್ಟ್ ಹಾಕಿರುವುದರಿಂದ, ಕ್ಯಾಮೆರಾ ಫ್ರೇಮ್ ನೊಳಗೆ ಯಾವುದೋ ವಿದೇಶದ ಲೊಕೇಶನ್ ತರ ಈ ಸ್ಥಳ ಕಾಣುತ್ತೆ.

ಬೀಚ್‌ಗೆ ಹತ್ತಿರದಲ್ಲೇ ಹಾಕಲಾಗಿದೆ ಸೆಟ್
ಐದಾರು ಅಡಿ ಆಳಕ್ಕೆ ಹೋದರೆ ನೀರು ಸಿಗೋ ಜಾಗದಲ್ಲಿ ಹರಸಾಹಸ ಪಟ್ಟು ಪಿಲ್ಲರ್ ಮೇಲೆ ಯಥಾವತ್ ಮನೆಯಲ್ಲೇ ನಿರ್ಮಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಮಳೆ ಗಾಳಿ ಬರುತ್ತಿರುವುದರಿಂದ ಚಿತ್ರತಂಡ ಹರಸಹಸಪಟ್ಟು ಶೂಟಿಂಗ್‌ನಲ್ಲಿ ನಿರತವಾಗಿದೆ. ಬೆಳಗಿನ ಜಾವ ಮೂರು ಗಂಟೆವರೆಗೂ ಶೂಟಿಂಗ್ ನಡೆಯುವುದುಂಟು, ಹಾಗಾಗಿ ಈ ಯಪ್ಪನ ಜೊತೆ ಸಾಕಾಯ್ತಪ್ಪ. ಎಂದು ವಶಿಷ್ಠ ಸಿಂಹ ನಿರ್ದೇಶಕ ಚೇತನ್ ಕೇಶವ್ ಅವರ ಬಗ್ಗೆ ಪ್ರೀತಿಯಿಂದಲೇ ದೂರಿದ್ದಾರೆ.

ಶೂಟಿಂಗ್ ಲೊಕೇಶನ್‌ಗೆ ಬಂದಿದ್ದ ಹರಿಪ್ರಿಯಾ
ಸಕ್ಕತ್ ಲವ್ ಮೂಡ್‌ನಲ್ಲೆ ವಸಿಷ್ಟ ಸಿಂಹ 'ಲವ್ಲಿ' ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡರೂ, ಗೆಳತಿ ಹರಿಪ್ರಿಯಾ ಜೊತೆ ಇವರಿಗೆ ಸಮಯ ಕಳೆಯಲು ಸಾಧ್ಯವಾಗಿಲ್ಲವಂತೆ. ಹಾಗಾಗಿ ಸ್ವತಃ ಹರಿಪ್ರಿಯಾನೇ ಶೂಟಿಂಗ್ ಸೆಟ್‌ಗೆ ಬಂದು ಸರ್ಪ್ರೈಸ್ ಕೊಟ್ಟಿದ್ದಾರೆ. ಸ್ಯಾಂಡಲ್‌ವುಡ್‌ನ ಈ ಪ್ರೇಮಿಗಳು ಕಡಲ ತೀರದ ಬೀಚ್, ಮಠ, ಮಂಗಳೂರು ಅಂತ ಬಹಳಷ್ಟು ಸುತ್ತಾಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಮಂಗಳೂರಿನ ಸ್ಟುಡಿಯೋ ಒಂದರಲ್ಲಿ ಜೊತೆಯಾಗಿ ಡ್ಯುಯೆಟ್ ಹಾಡೊಂದನ್ನು ಹಾಡಿದ್ದಾರೆ. ಈ ಎಲ್ಲಾ ಬೆಳವಣಿಗೆ ವಸಿಷ್ಠ ಸಿಂಹಗೆ ಸಖತ್ ಥ್ರಿಲ್ ಕೊಟ್ಟಂತಿದೆ.

ಲಂಡನ್‌ಗೆ ಶಿಫ್ಟ್ ಆಗಲಿದೆ ತಂಡ
ಇನ್ನು ನಾಲ್ಕೈದು ದಿನ ಪಡುಕೆರೆಯಲ್ಲಿ ಶೂಟಿಂಗ್ ನಡೆಯಲಿದೆ, ನಂತರ ಕೆಲ ದಿನಗಳ ಕಾಲ ಚಿತ್ರತಂಡ ಲಂಡನ್‌ಗೆ ಶಿಫ್ಟ್ ಆಗಲಿದೆ. ಸದ್ಯ ಸ್ಯಾಂಡಲ್‌ವುಡ್‌ನ ಲವರ್ ಬಾಯ್ ವಸಿಷ್ಠ ಸಿಂಹ 'ಲವ್ಲಿ' ಚಿತ್ರದ ಮೂಲಕ ನಾಯಕ ನಟನಾಗಿ ಮುದು ಕೊಡಲು ಸಿದ್ಧರಾಗಿದ್ದಾರೆ. ಸಿನಿಮಾದಲ್ಲಿ ಯಶಸ್ಸಿನ ಮೇಲೆ ಯಶಸ್ಸು ಕಾಣುತ್ತಿರುವ ವಸಿಷ್ಠ ಸಿಂಹ ಕೆಲವೇ ದಿನಗಳಲ್ಲಿ ಮದುವೆ ಸಹ ಆಗಲಿದ್ದಾರೆ.