2ನೇ ದಿನ ಕಬ್ಜ ಪ್ರದರ್ಶನಗಳ ಸಂಖ್ಯೆಯಲ್ಲಿ ಭಾರೀ ಏರಿಕೆ; ಈ ವರ್ಷ ಯಾವ ಚಿತ್ರಕ್ಕೂ ಈ ರೆಸ್ಪಾನ್ಸ್ ಸಿಕ್ಕಿಲ್ಲ!
ನಿನ್ನೆ ( ಮಾರ್ಚ್ 17 ) ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಶನ್‌ನ ಬಹು ನಿರೀಕ್ಷಿತ ಸಿನಿಮಾ ಕಬ್ಜ ತೆರೆಗೆ ಬಂದಿದೆ. ಸೆಟ್ಟೇರಿದಾಗಿನಿಂದಲೂ ವಿವಿಧ ಕಾರಣಗಳಿಂದಾಗಿ ಸತತವಾಗಿ ಸದ್ದು ಮಾಡುತ್ತಿದ್ದು ಕಬ್ಜ ಚಿತ್ರವನ್ನು ನೋಡಲೇಬೇಕೆಂದು ಸಿನಿ ರಸಿಕರು ಹಾಗೂ ಉಪೇಂದ್ರ, ಕಿಚ್ಚ ಸುದೀಪ್ ಮತ್ತು ಶಿವ ರಾಜ್‌ಕುಮಾರ್ ಅಭಿಮಾನಿಗಳು ಮುಂಗಡವಾಗಿ ಟಿಕೆಟ್ ಖರೀದಿಸಿ ಮೊದಲ ದಿನ ಚಿತ್ರಮಂದಿರಕ್ಕೆ ಕಾಲಿಟ್ಟಿದ್ದರು.
ದೊಡ್ಡ ಮಟ್ಟದ ಹೈಪ್‌ನೊಂದಿಗೆ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟ ಕಬ್ಜ ಚಿತ್ರ ಭರ್ಜರಿ ಓಪನಿಂಗ್ ಪಡೆದುಕೊಂಡಿತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾದ ಕಬ್ಜ ಚಿತ್ರಕ್ಕೆ ಎಲ್ಲೆಡೆ ಮೊದಲ ದಿನ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ನೋಡಿ ಹೊರಬಂದ ಸಿನಿ ರಸಿಕರು ಚಿತ್ರದ ಮೇಕಿಂಗ್, ಛಾಯಾಗ್ರಹಣ, ಹಿನ್ನೆಲೆ ಸಂಗೀತ ಹಾಗೂ ಸಂಕಲನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್ ಚಂದ್ರು ಶ್ರಮಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ.

ಹೀಗೆ ಮೊದಲ ದಿನ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡ ಕಬ್ಜ ಚಿತ್ರ ಬೆಂಗಳೂರು ನಗರದಲ್ಲಿ ಎರಡನೇ ದಿನ ತನ್ನ ಪ್ರದರ್ಶನಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ. ಹೌದು, ಬಿಡುಗಡೆ ದಿನ ಪಡೆದುಕೊಂಡಿದ್ದ ಪ್ರದರ್ಶನಗಳ ಸಂಖ್ಯೆಗಿಂತ ಎರಡನೇ ದಿನ ಕಬ್ಜ ಚಿತ್ರ ಹೆಚ್ಚು ಪ್ರದರ್ಶನಗಳನ್ನು ಬೆಂಗಳೂರು ನಗರದಲ್ಲಿ ಪಡೆದುಕೊಂಡಿದೆ. ಮೊದಲ ದಿನ ಬೆಂಗಳೂರಿನಲ್ಲಿ 597 ಪ್ರದರ್ಶನಗಳನ್ನು ಪಡೆದುಕೊಂಡಿದ್ದ ಕಬ್ಜ ಚಿತ್ರ ಇಂದು ಎರಡನೇ ದಿನ 623 ಪ್ರದರ್ಶನಗಳನ್ನು ಪಡೆದುಕೊಂಡಿದೆ.
ಈ ರೀತಿ ಈ ವರ್ಷ ತೆರೆಕಂಡ ಯಾವ ಸಿನಿಮಾಗಳೂ ಸಹ ಬೆಂಗಳೂರಿನಲ್ಲಿ ಮೊದಲ ದಿನಕ್ಕಿಂತ ಎರಡನೇ ದಿನ ಹೆಚ್ಚಿನ ಪ್ರದರ್ಶನಗಳನ್ನು ಪಡೆದುಕೊಂಡಿರಲಿಲ್ಲ. ಮೊದಲ ದಿನ ದೊಡ್ಡ ಸಂಖ್ಯೆಯ ಪ್ರದರ್ಶನಗಳನ್ನು ಪಡೆದುಕೊಂಡಿದ್ದ ಚಿತ್ರಗಳು ಎರಡನೇ ದಿನ ಕಡಿಮೆ ಪ್ರದರ್ಶನಗಳನ್ನು ಪಡೆದುಕೊಂಡು ಶೋಗಳನ್ನು ಕಳೆದುಕೊಂಡಿದ್ದವು. ಈ ವರ್ಷ ತೆರೆಕಂಡ ಚಿತ್ರಗಳಲ್ಲಿ ಎರಡನೇ ದಿನ 600ಕ್ಕಿಂತ ಹೆಚ್ಚಿನ ಪ್ರದರ್ಶನಗಳನ್ನು ಬೆಂಗಳೂರಿನಲ್ಲಿ ಪಡೆದುಕೊಂಡ ಏಕೈಕ ಚಿತ್ರ ಎನಿಸಿಕೊಂಡಿದೆ ಕಬ್ಜ.
ಈ ವರ್ಷ ಬಿಡುಗಡೆಯಾದ ಚಿತ್ರಗಳು ಬೆಂಗಳೂರಿನಲ್ಲಿ ಮೊದಲ ದಿನ ಪಡೆದುಕೊಂಡ ಪ್ರದರ್ಶನಗಳ ಸಂಖ್ಯೆ ಈ ಕೆಳಕಂಡಂತಿದೆ..
ಪಠಾಣ್ - 821 ಪ್ರದರ್ಶನಗಳು
ವಾರಿಸು - 757 ಪ್ರದರ್ಶನಗಳು
ಕ್ರಾಂತಿ - 680 ಪ್ರದರ್ಶನಗಳು
ಕಬ್ಜ - 597 ಪ್ರದರ್ಶನಗಳು
ತುನಿವು - 568 ಪ್ರದರ್ಶನಗಳು
ಎರಡನೇ ದಿನ ಈ ಚಿತ್ರಗಳು ಪಡೆದುಕೊಂಡ ಶೋಗಳ ಸಂಖ್ಯೆ
ಪಠಾಣ್ - 563 ಪ್ರದರ್ಶನಗಳು
ವಾರಿಸು - 321 ಪ್ರದರ್ಶನಗಳು
ಕ್ರಾಂತಿ - 583 ಪ್ರದರ್ಶನಗಳು
ಕಬ್ಜ - 623 ಪ್ರದರ್ಶನಗಳು
ತುನಿವು - 300 ಪ್ರದರ್ಶನಗಳು


Click it and Unblock the Notifications











