For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ದರ್ಶನಕ್ಕೆ ಟೊರೆಂಟೋದಲ್ಲಿ ಕ್ಯೂ: ವೀರೇಶ್ ಥಿಯೇಟರ್‌ನಲ್ಲಿ ಎಷ್ಟು ಸಾವಿರ ಜನ ಸಿನಿಮಾ ನೋಡಿದ್ದಾರೆ ಗೊತ್ತಾ?

  |

  ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ' ಸಿನಿಮಾ ಯಶಸ್ವಿಯಾಗಿ 25ನೇ ದಿನಕ್ಕೆ ಕಾಲಿಟ್ಟಿದೆ. ವಿಶ್ವದಾದ್ಯಂತ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಪರಭಾಷೆಗಳಿಗೂ ಡಬ್ ಆಗಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿದೇಶಗಳಲ್ಲಿ ಸಿನಿಮಾ ನೋಡಲು ಪ್ರೇಕ್ಷಕರು ಕ್ಯೂ ನಿಂತಿದ್ದಾರೆ ಅಂದರೆ 'ಕಾಂತಾರ' ಹವಾ ಹೇಗಿದೆ ಎನ್ನುವುದು ಅರ್ಥವಾಗುತ್ತದೆ. ರಿಪೀಟ್ ಆಡಿಯನ್ಸ್ ಹೆಚ್ಚಾಗುತ್ತಿರುವುದರಿಂದ ಸದ್ಯಕ್ಕೆ ಸಿನಿಮಾ ಸದ್ದು ಕಮ್ಮಿ ಆಗುವ ಸುಳಿವು ಸಿಗುತ್ತಿಲ್ಲ.

  'ಕಾಂತಾರ' ಚಿತ್ರವನ್ನು ಪ್ರೇಕ್ಷಕರು ಬಾಚಿ ತಬ್ಬಿಕೊಂಡಿದ್ದಾರೆ. ಕನ್ನಡ ಸಿನಿಮಾಗಳು ರಿಲೀಸ್ ಆಗದೇ ಇದ್ದ ದೇಶಗಳಲ್ಲಿ ಊರುಗಳಲ್ಲಿ 'ಕಾಂತಾರ' ಸಿನಿಮಾ ತೆರೆಗಪ್ಪಳಿಸಿದೆ. ಪರಭಾಷಿಕರು ಕೂಡ ಸಿನಿಮಾ ನೋಡಿ ಹುಬ್ಬೇರಿಸಿದ್ದಾರೆ. ಕರಾವಳಿಯ ಆಚರಣೆ, ಸಂಸ್ಕೃತಿ ಅದನ್ನು ತೆರೆಗೆ ತಂದಿರುವ ಪರಿಗೆ ಬಹುಪರಾಕ್ ಹೇಳುತ್ತಿದ್ದಾರೆ. 3ನೇ ವೀಕೆಂಡ್‌ನಲ್ಲೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ದೀಪಾವಳಿ ರಜಾ ದಿನಗಳಲ್ಲಿ ಮತ್ತಷ್ಟು ಗಳಿಕೆ ನಿರೀಕ್ಷೆ ಮಾಡಲಾಗುತ್ತಿದೆ. ಬೇರೆ ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್ ಆಗದೇ ಇರುವುದು ಕೂಡ 'ಕಾಂತಾರ' ಚಿತ್ರಕ್ಕೆ ಪ್ಲಸ್ ಆಗಲಿದೆ.

  'ಕಾಂತಾರ' ಸೃಷ್ಟಿಸಿರುವ ಈ ದಾಖಲೆಯನ್ನು ಬೇರೆ ಚಿತ್ರಗಳು ಮುರಿಯುವುದು ಕನಸು!'ಕಾಂತಾರ' ಸೃಷ್ಟಿಸಿರುವ ಈ ದಾಖಲೆಯನ್ನು ಬೇರೆ ಚಿತ್ರಗಳು ಮುರಿಯುವುದು ಕನಸು!

  ಸೆಪ್ಟೆಂಬರ್ 30ರಂದು 'ಕಾಂತಾರ' ಸಿನಿಮಾ ಇಂಗ್ಲೀಷ್ ಸಬ್‌ಟೈಟಲ್ಸ್ ಜೊತೆಗೆ ಕನ್ನಡದಲ್ಲೇ ಜಗತ್ತಿನೆಲ್ಲೆಡೆ ರಿಲೀಸ್ ಆಗಿತ್ತು. ಬೇರೆ ಭಾಷೆಗಳಿಗೆ ಡಬ್ ಮಾಡುವಂತೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಚಿತ್ರತಂಡ ಆ ಪ್ರಯತ್ನಕ್ಕೆ ಕೈ ಹಾಕಿತ್ತು. ಅಕ್ಟೋಬರ್ 14ರಂದು ಹಿಂದಿ, 15ರಂದು ತಮಿಳು, ತೆಲುಗು ಹಾಗೂ 20ರಂದು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಎಲ್ಲಾ ಕಡೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು.

   ಟೊರೆಂಟೋದಲ್ಲಿ 'ಕಾಂತಾರ' ದರ್ಶನಕ್ಕೆ ಕ್ಯೂ

  ಟೊರೆಂಟೋದಲ್ಲಿ 'ಕಾಂತಾರ' ದರ್ಶನಕ್ಕೆ ಕ್ಯೂ

  ನಿಜಕ್ಕೂ 'ಕಾಂತಾರ' ಕ್ರೇಜ್ ನಾವು ನೀವು ಊಹಿಸಿದ್ದಕ್ಕಿಂತ ಹೆಚ್ಚಾಗಿದೆ. ವಿದೇಶಗಳಲ್ಲಿ ಕನ್ನಡ ಸಿನಿಮಾಗಳು ಬಿಡುಗಡೆ ಆಗುವುದೇ ಕಷ್ಟ ಎನ್ನುವ ಕಾಲವೊಂದಿತ್ತು. ಬಿಡುಗಡೆ ಆದರೂ ದೊಡ್ಡಮಟ್ಟದಲ್ಲಿ ಶೋಗಳು ಸಿಗುವುದು, ಪ್ರೇಕ್ಷಕರು ಥಿಯೇಟರ್‌ಗೆ ಬರೋದು ಕನಸಿನ ಮಾತಾಗಿತ್ತು. ಆದರೆ 'ಕಾಂತಾರ' ತೆಲುಗು ವರ್ಷನ್ ನೋಡಲು ದೂರದ ಟೊರೊಂಟೋದಲ್ಲಿ ಪ್ರೇಕ್ಷಕರು ಥಿಯೇಟರ್ ಮುಂದೆ ಸಾಲುಗಟ್ಟಿದ್ದಾರೆ. ಟೊರೊಂಟೋದ ರಾಯಲ್ ಸಿನಿಮಾಸ್ ಮುಂದೆ ಈ ದೃಶ್ಯ ಕಂಡುಬಂದಿದೆ.

  ಅಂತೂ ಬಂತು 'ಕಾಂತಾರ'ಕ್ಕೆ ಪೈಪೋಟಿ ಕೊಡುವ ಚಿತ್ರ; ಬಿಡುಗಡೆಗೂ ಮುನ್ನವೇ ಕಾಂತಾರ ಹಿಂದಿಕ್ಕಿದ ಗಂಧದಗುಡಿ!ಅಂತೂ ಬಂತು 'ಕಾಂತಾರ'ಕ್ಕೆ ಪೈಪೋಟಿ ಕೊಡುವ ಚಿತ್ರ; ಬಿಡುಗಡೆಗೂ ಮುನ್ನವೇ ಕಾಂತಾರ ಹಿಂದಿಕ್ಕಿದ ಗಂಧದಗುಡಿ!

   ವೀರೇಶ್‌ನಲ್ಲಿ 1,00,900 ಜನ ಸಿನಿಮಾ ವೀಕ್ಷಣೆ

  ವೀರೇಶ್‌ನಲ್ಲಿ 1,00,900 ಜನ ಸಿನಿಮಾ ವೀಕ್ಷಣೆ

  ನಗರದ ಹಲವು ಥಿಯೇಟರ್‌ಗಳಲ್ಲಿ 'ಕಾಂತಾರ' ಸಿನಿಮಾ 25 ದಿನ ಪೂರೈಸಿದೆ. ಮಾಗಡಿ ರಸ್ತೆಯ ವೀರೇಶ್ ಥಿಯೇಟರ್‌ನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಈವರೆಗೆ ಸಿನಿಮಾ ಕಣ್ತುಂಬಿಕೊಂಡಿದ್ದಾರೆ. 24 ದಿನಕ್ಕೆ 1,00,900 ಜನ ಸಿನಿಮಾ ನೋಡಿದ್ದಾರೆ ಎಂದು ಥಿಯೇಟರ್ ಮಾಲೀಕರು ಲೆಕ್ಕ ನೀಡಿದ್ದಾರೆ. ಹಲವೆಡೆ ಸಿನಿಮಾ ಇನ್ನು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ದೀಪಾವಳಿ ಸಂಭ್ರಮದಲ್ಲಿ ಮತ್ತಷ್ಟು ಜನ ಥಿಯೇಟರ್‌ಗೆ ಬರಲಿದ್ದಾರೆ.

   ಕೇರಳದಲ್ಲೂ 'ಕಾಂತಾರ' ಹೌಸ್‌ಫುಲ್

  ಕೇರಳದಲ್ಲೂ 'ಕಾಂತಾರ' ಹೌಸ್‌ಫುಲ್

  ಅಕ್ಟೋಬರ್ 20ರಂದು ಬಿಡುಗಡೆಯಾದ 'ಕಾಂತಾರ' ಮಲಯಾಳಂ ವರ್ಷನ್‌ಗೂ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಕೆಲವೆಡೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಮಲಯಾಳಂನ ಬೇರೆ ಸಿನಿಮಾಗಳಿಗೆ ಪೈಪೋಟಿ ಕೊಡುತ್ತಿದ್ದು, 370 ಕ್ಕೂ ಹೆಚ್ಚು ಶೋಗಳು ಸಿಕ್ಕಿದೆ. ಪೃಥ್ವಿರಾಜ್ ಸುಕುಮಾರನ್ ಚಿತ್ರದ ಮಲಯಾಳಂ ವರ್ಷನ್ ವಿತರಣೆ ಹಕ್ಕನ್ನು ಖರೀದಿದ್ದರು. ಫಸ್ಟ್ ವೀಕೆಂಡ್‌ನಲ್ಲಿ 'ಕಾಂತಾರ' ಮಲಯಾಳಂ 3 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ.

   ಶೀಘ್ರದಲ್ಲೇ 200 ಕೋಟಿ ಕ್ಲಬ್‌ಗೆ 'ಕಾಂತಾರ'

  ಶೀಘ್ರದಲ್ಲೇ 200 ಕೋಟಿ ಕ್ಲಬ್‌ಗೆ 'ಕಾಂತಾರ'

  24 ದಿನಗಳಲ್ಲಿ ಸಿನಿಮಾ 150 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಶೀಘ್ರದಲ್ಲೆ ಸಿನಿಮಾ 200 ಕೋಟಿ ಕ್ಲಬ್ ಸೇರುವ ಸಾಧ್ಯತೆಯಿದೆ. ಕೆಲವೆಡೆ 'KGF' ಸರಣಿ ಸಿನಿಮಾಗಳ ದಾಖಲೆಯನ್ನು ಅಳಿಸಿ 'ಕಾಂತಾರ' ಸಿನಿಮಾ ಸದ್ದು ಮಾಡ್ತಿದೆ. ಮೀಡಿಯಂ ಬಜೆಟ್ ಸಿನಿಮಾವೊಂದು ನೂರಾರು ಕೋಟಿ ಬಜೆಟ್ ಸಿನಿಮಾಗಳು ಮಾಡದ ದಾಖಲೆ ಮಾಡ್ತಿದೆ. ಬಹಳ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪಿದೆ.

  English summary
  Huge Line Up of audience for Kantara Telugu shows at RoyalCinemas Toronto Canada. The film that has clocked 1 lakh footfalls in Bengaluru Veeresh Theater Alone. Know More.
  Monday, October 24, 2022, 9:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X