For Quick Alerts
  ALLOW NOTIFICATIONS  
  For Daily Alerts

  ಸಿನಿಮಾದಲ್ಲಿ ನಟನೆ ಶುರು ಮಾಡಿದ ಹುಲಿಕಲ್ ನಟರಾಜ್

  By Naveen
  |

  ಹುಳಿಕಲ್ ನಟರಾಜ್ ತುಂಬ ಜನರಿಗೆ ಚಿರಪರಿಚಿತರು. ಯಾವಾಗಲೂ ಪವಾಡಗಳನ್ನು ಬಯಲು ಮಾಡುವ ಇವರು ಸಾಕಷ್ಟು ಬಾರಿ ಟಿವಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈಗ ಹುಳಿಕಲ್ ನಟರಾಜ್ ಸಿನಿಮಾದಲ್ಲಿ ಕೂಡ ನಟನೆ ಮಾಡಿದ್ದಾರೆ.

  'ನವಿಲ ಕಿನ್ನರಿ' ಎಂಬ ಸಿನಿಮಾದಲ್ಲಿ ಹುಳಿಕಲ್ ನಟರಾಜ್ ನಟಿಸಿದ್ದಾರೆ. ಹುಲಿಕಲ್ ಎಂಟರ್‌ಟೈನ್ ಮೆಂಟ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಈ ಚಿತ್ರ ನಿರ್ಮಾಣ ಆಗಿದೆ. ಈ ನಿರ್ಮಾಣ ಸಂಸ್ಥೆಯ ಮೊದಲ ಸಿನಿಮಾ ಇದಾಗಿದೆ. ಈ ಚಿತ್ರವನ್ನು ವೆಂಕಿ ಚಲ್ಲಾ ಎಂಬುವವರು ನಿರ್ದೇಶನ ಮಾಡಿದ್ದಾರೆ.

  ಹುಲಿಕಲ್ ನಟರಾಜ್ ಕೈಯಲ್ಲಿ ಪವಾಡಗಳೆಲ್ಲ ಬಯಲು

  ಹುಳಿಕಲ್ ನಟರಾಜ್ ಸಿನಿಮಾದಲ್ಲಿ ಒಂದು ವಿಭಿನ್ನ ರೀತಿಯ ಪಾತ್ರವನ್ನು ಮಾಡಿದ್ದಾರಂತೆ. ಹುಳಿಕಲ್ ನಟರಾಜ್ ಅವರ ಜೊತೆಗೆ ಹಿಮಾನ್ಸೀ ಚೌಧುರಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಿಮಾನ್ಸೀ ಚೌಧುರಿ ಕೂಚಿಪುಡಿ ನೃತ್ಯಪಟು ಆಗಿದ್ದಾರೆ. ವಿ ಎಲ್ ಪ್ರಕಾಶ್ ಕಥೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ. ಸುಭಾಷ್ ಆನಂದ್ ಸಂಗೀತ ಮತ್ತು ಶ್ರೀನಿವಾಸ ವಿನ್ನಕೋಟ ಛಾಯಾಗ್ರಹಣ ಚಿತ್ರಕ್ಕಿದೆ. 'ನವಿಲ ಕಿನ್ನರಿ' ಸಿನಿಮಾ ಇಂದು ಬಿಡುಗಡೆಯಾಗಿದೆ.

  English summary
  Hulikal Nataraj played lead role in kannada movie Navila Kinnari.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X