ಡಾಲಿಯ 'ಹೆಡ್‌ಬುಷ್' ಚಿತ್ರಕ್ಕೆ ಎಂಟ್ರಿ ಕೊಟ್ಟ ಮತ್ತೊಬ್ಬ ಖ್ಯಾತ ನಟ

'ಡಾಲಿ' ಧನಂಜಯ್ ನಟಿಸುತ್ತಿರುವ 'ಹೆಡ್‌ಬುಷ್' ಸಿನಿಮಾ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಬೆಂಗಳೂರಿನ ಮಾಜಿ ಡಾನ್ ಎಂಪಿ ಜಯರಾಜ್ ಜೀವನ ಆಧರಿಸಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಡಾಲಿ, ಜಯರಾಜ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ಹೆಚ್ಚು ಮೇಕಿಂಗ್ ಹಂತದಲ್ಲೇ ಭಾರಿ ಸದ್ದು ಮಾಡ್ತಿದೆ.

ನೈಜ ಘಟನೆ ಆಧರಿಸಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಸ್ಟಾರ್ ಕಲಾವಿದರು ಎಂಟ್ರಿಯಾಗುತ್ತಿದೆ. ಒಬ್ಬರ ನಂತರ ಮತ್ತೊಬ್ಬರು ಎನ್ನುವಂತೆ ಹೊಸ ಹೊಸ ಕಲಾವಿದರು ಡಾಲಿ ಜೊತೆ ಕೈ ಜೋಡಿಸುತ್ತಿದ್ದಾರೆ. ಈಗ ಹೆಡ್‌ಬುಷ್ ಚಿತ್ರಕ್ಕೆ ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ಎಂಟ್ರಿಯಾಗಿದ್ದಾರೆ. ಬಾಲು ನಾಗೇಂದ್ರರ ಪಾತ್ರ ಏನು ಎನ್ನುವುದು ಸದ್ಯಕ್ಕೆ ಕುತೂಹಲ ಮೂಡಿಸಿದರೂ, ಹುಲಿರಾಯ ನಟನ ಪ್ರವೇಶ ಸಹಜವಾಗಿ ಥ್ರಿಲ್ ಹೆಚ್ಚಿಸಿದೆ.

2017ರಲ್ಲಿ ಬಿಡುಗಡೆಯಾದ 'ಹುಲಿರಾಯ' ಚಿತ್ರದ ಮೂಲಕ ಬಾಲು ನಾಗೇಂದ್ರ ಗುರುತಿಸಿಕೊಂಡರು. ಅದಕ್ಕೂ ಮುಂಚೆ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದರು. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡಗ ಈ ಚಿತ್ರದಲ್ಲಿ ನಾಯಕಿಯಾಗಿದ್ದರು. ಇದಾದ ಬಳಿಕ 2019ರಲ್ಲಿ 'ಕಪಟ ನಾಟಕ ಪಾತ್ರಧಾರಿ' ಸಿನಿಮಾದಲ್ಲಿ ಬಾಲು ನಾಗೇಂದ್ರ ನಾಯಕನಟನಾಗಿ ಅಭಿನಯಿಸಿದ್ದರು. ಈಗ ಡಾಲಿ ಜೊತೆ 'ಹೆಬ್‌ಬುಷ್' ಆಡಲು ಬಂದಿದ್ದಾರೆ. ಮುಂದೆ ಓದಿ....

ಶ್ರುತಿ ಹರಿಹರನ್ ಕಂಬ್ಯಾಕ್

ಶ್ರುತಿ ಹರಿಹರನ್ ಕಂಬ್ಯಾಕ್

ಶ್ರುತಿ ಹರಹರನ್ ಸಹ 'ಹೆಡ್‌ಬುಷ್' ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ. ವೈವಾಹಿಕ ಬದುಕಿಗೆ ಕಾಲಿಟ್ಟ ನಂತರ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದ ನಟಿ ಹಲವು ದಿನಗಳ ನಂತರ ಹೆಡ್‌ಬುಷ್ ಚಿತ್ರದೊಂದಿಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಶ್ರುತಿ ಪಾತ್ರ ಏನು ಎನ್ನುವುದು ಬಹಿರಂಗವಾಗಿಲ್ಲ.

ಡಾಲಿ ಜೊತೆ ಸೇರಿದ ವಸಿಷ್ಠಿ ಸಿಂಹ

ಡಾಲಿ ಜೊತೆ ಸೇರಿದ ವಸಿಷ್ಠಿ ಸಿಂಹ

'ಟಗರು' ಸಿನಿಮಾದಲ್ಲಿ ಧನಂಜಯ್ ಮತ್ತು ವಸಿಷ್ಠ ಸಿಂಹ ಜೋಡಿ ಮೋಡಿ ಮಾಡಿತ್ತು. ಈಗ ವಸಿಷ್ಠ ಸಿಂಹ ಸಹ ಹೆಡ್‌ಬುಷ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದಕ್ಕೂ ಮುಂಚೆ ಲೂಸ್ ಮಾದ ಯೋಗೇಶ್ ಸಹ ಹೆಡ್‌ಬುಷ್ ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಅಧಿಕೃತವಾಗಿತ್ತು. ಈ ಮೂಲಕ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಯುವ ನಟರೆಲ್ಲರೂ ಅಂಡರ್‌ವರ್ಲ್ಡ್‌ ಚಿತ್ರಕ್ಕಾಗಿ ಒಂದಾಗುತ್ತಿರುವುದು ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ.

ಪಾಯಲ್ ರಜಪೂತ್ ನಾಯಕಿ

ಪಾಯಲ್ ರಜಪೂತ್ ನಾಯಕಿ

'ಹೆಡ್‌ಬುಷ್' ಸಿನಿಮಾದ ನಾಯಕಿ ಪಾತ್ರಕ್ಕೆ ತೆಲುಗಿನ ಖ್ಯಾತ ನಟಿ ಪಾಯಲ್ ರಜಪೂತ್ ಆಯ್ಕೆಯಾಗಿದ್ದಾರೆ. 2018ರಲ್ಲಿ ತೆಲುಗಿನಲ್ಲಿ ಬಂದ 'ಆರ್‌ಎಕ್ಸ್‌100' ಚಿತ್ರದ ಮೂಲಕ ಹೆಚ್ಚು ಸದ್ದು ಮಾಡಿದ ನಟಿ ಈಗ ಸ್ಯಾಂಡಲ್‌ವುಡ್‌ಗೆ ಪ್ರವೇಶ ಪಡೆದಿದ್ದಾರೆ. ಇದುವರೆಗೂ ಎನ್‌ಟಿಆರ್ ಕಥಾನಾಯಕಡು, ಸಿತಾ, ಆರ್‌ಡಿಎಕ್ಸ್ ಲವ್, ವೆಂಕಿಮಾಮ, ಡಿಸ್ಕೋ ರಾಜ ಅಂತಹ ಸಿನಿಮಾಗಳಲ್ಲಿ ಪಾಯಲ್ ನಟಿಸಿದ್ದಾರೆ. 'ಹೆಡ್‌ಬುಷ್' ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ ಬರೆದಿದ್ದು, ಚೊಚ್ಚಲ ನಿರ್ದೇಶಕ ಶೂನ್ಯ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿದ್ದು, ಎರಡು ಭಾಗದಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಲಾಗಿದೆ. ಇನ್ನು ಚರಣ್ ರಾಜ್ ಸಂಗೀತ ಸಂಯೋಜನೆ ಇದೆ.

ಡಾಲಿ ಮುಂದಿನ ಸಿನಿಮಾಗಳು

ಡಾಲಿ ಮುಂದಿನ ಸಿನಿಮಾಗಳು

'ಹೆಡ್‌ಬುಷ್' ಸಿನಿಮಾ ಹೊರತುಪಡಿಸಿ ಹಲವು ಪ್ರಾಜೆಕ್ಟ್‌ಗಳಲ್ಲಿ ಧನಂಜಯ್ ನಟಿಸುತ್ತಿದ್ದಾರೆ. 'ಐಕಾನ್ ಸ್ಟಾರ್' ಅಲ್ಲು ಅರ್ಜುನ್ ನಟಿಸಿರುವ 'ಪುಷ್ಪ' ಸಿನಿಮಾದಲ್ಲಿ ಧನಂಜಯ್ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಸುಕುಮಾರ್ ಈ ಚಿತ್ರ ನಿರ್ದೇಶಿಸಿದ್ದು, ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ ತಿಂಗಳಲ್ಲಿ 'ಪುಷ್ಪ ಭಾಗ-1' ರಿಲೀಸ್ ಆಗುತ್ತಿದೆ. ದುನಿಯಾ ವಿಜಯ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶಿಸಿರುವ 'ಸಲಗ' ಚಿತ್ರದಲ್ಲಿ ಧನಂಜಯ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ರೋಹಿತ್ ಪದಕಿಯ ರತ್ನನ್ ಪ್ರಪಂಚ, ಶಿವಣ್ಣನ 'ಬೈರಾಗಿ,' ಬಡವ ರಾಸ್ಕಲ್, ಜಗ್ಗೇಶ್ ಜೊತೆ ತೋತಾಪುರಿ, ಡಾಲಿ ಸಿನಿಮಾ, ಆರ್ಕೆಸ್ಟ್ರಾ ಮೈಸೂರು ಅಂತಹ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Huliraya Fame Balu Nagendra on Board For Dhananjaya's Head Bush movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X