»   » ಅಕ್ಟೋಬರ್ 6ಕ್ಕೆ ಗಾಂಧಿನಗರಕ್ಕೆ ಬರ್ತಾನೆ 'ಹುಲಿರಾಯ'

ಅಕ್ಟೋಬರ್ 6ಕ್ಕೆ ಗಾಂಧಿನಗರಕ್ಕೆ ಬರ್ತಾನೆ 'ಹುಲಿರಾಯ'

Written By:
Subscribe to Filmibeat Kannada

ಈಗಾಗಲೇ ತನ್ನ ವಿಭಿನ್ನತೆ ಮೂಲಕ ಸ್ಯಾಂಡಲ್ ವುಡ್ ತುಂಬ ಸುದ್ದಿ ಮಾಡಿರುವ ಸಿನಿಮಾ 'ಹುಲಿರಾಯ'. ಇಷ್ಟು ದಿನ ಟ್ರೇಲರ್ ಮೂಲಕ ಕುತೂಹಲ ಹುಟ್ಟಿಸಿದ್ದ ಈ ಸಿನಿಮಾ ಮುಂದಿನ ವಾರ ಅಂದರೆ ಅಕ್ಟೋಬರ್ 6ಕ್ಕೆ ಬಿಡುಗಡೆಯಾಗಲಿದೆ.

ಈ ಹಿಂದೆ 'ನಮ್ ಏರಿಯಾಲ್ ಒಂದಿನಾ', 'ತುಘಲಕ್' ಸಿನಿಮಾ ಮಾಡಿದ್ದ ಅರವಿಂದ್ ಕೌಶಿಕ್ ಈಗ 'ಹುಲಿರಾಯ' ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 'ಕಡ್ಡಿಪುಡಿ' ಸೇರಿದಂತೆ ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ್ದ ಬಾಲು ಇಲ್ಲಿ 'ಹುಲಿರಾಯ'ನಾಗಿ ಅಬ್ಬರಿಸಿದ್ದಾರೆ. ಈ ಹುಲಿಯ ಜೋಡಿಯಾಗಿ ಜಿಂಕೆಯಂತೆ ನಾಯಕಿಯಾಗಿ ದಿವ್ಯ ಕಾಣಿಸಿಕೊಂಡಿದ್ದಾರೆ.

'Huliraya' is all set to release on october 6th.

ಈಗಾಗಲೇ ಈ ಚಿತ್ರದ ಟ್ರೇಲರ್ ನೋಡಿ ಅನೇಕ ನಟ ನಟಿಯರು ಮೆಚ್ಚುಗೆ ಸೂಚಿಸಿದ್ದಾರೆ. ಸಾಕಷ್ಟು ಜನ ಸಿನಿಮಾದ ಕಥೆ ಏನಿರಬಹುದು ಎಂಬ ನಿರೀಕ್ಷೆ ಹೊಂದಿದ್ದಾರೆ. ಚಿತ್ರಕ್ಕೆ ಅರ್ಜುನ್ ರಾಮು ಸಂಗೀತ ನೀಡಿದ್ದು, ಒಂದು ಹಾಡನ್ನು ನಂದಿನಿ ನಂಜಪ್ಪ ಬರೆದಿದ್ದಾರೆ.

English summary
Kannada movie 'Huliraya' is all set to release on october 6th.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada