ಕಿಯಾರಾ ಬಳಿಕ 'ಟಾಕ್ಸಿಕ್' ಚಿತ್ರದಲ್ಲಿ ಹುಮಾ ಖುರೇಷಿ ಪಾತ್ರ ಪರಿಚಯ, ಫಸ್ಟ್ ಲುಕ್ ರಿಲೀಸ್

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಸಿನಿಮಾ ಬಿಡುಗಡೆಗೆ ಯಶ್ ಅಭಿಮಾನಿಗಳು ದಿನಗಣನೆ ಶುರು ಮಾಡಿದ್ದಾರೆ. ಮಾರ್ಚ್ 19ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ. ನಿಧಾನವಾಗಿ 'ಟಾಕ್ಸಿಕ್' ಪ್ರಚಾರ ಆರಂಭಿಸಲಾಗಿದೆ. ತಾರಾಗಣದ ಬಗ್ಗೆ ಅಧಿಕೃತವಾಗಿ ಈಗ ಮಾಹಿತಿ ಲಭ್ಯವಾಗುತ್ತಿದೆ.

ಯಶ್ ನಟನೆಯ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಯನತಾರಾ, ಕಿಯಾರಾ ಅದ್ವಾನಿ, ಹುಮಾ ಖುರೇಷಿ ನಟಿಸಿರುವ ವಿಚಾರ ಈಗಾಗಲೇ ಗೊತ್ತಾಗಿದೆ. ಇದೀಗ ಫಸ್ಟ್ ಲುಕ್ ಪೋಸ್ಟರ್ ಸಮೇತ ಒಬ್ಬೊಬ್ಬರ ಪಾತ್ರ ಪರಿಚಯ ಮಾಡಲಾಗ್ತಿದೆ. ಎಲಿಜಬೆತ್ ಎಂಬ ಪಾತ್ರದಲ್ಲಿ ಹುಮಾ ಖುರೇಷಿ ನಟಿಸಿದ್ದಾರೆ. ಬಹಳ ಪವರ್‌ಫುಲ್ ಪಾತ್ರದಲ್ಲಿ ಆಕೆ ನಟಿಸಿರುವುದು ಗೊತ್ತಾಗುತ್ತಿದೆ.

Huma Qureshi s Powerful First Look from Yash s Toxic Raises Expectations Ahead of March 19 Release

ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಕಪ್ಪು ಬಣ್ಣದ ಗೌನ್ ಧರಿಸಿ ಹುಮಾ ಖುರೇಷಿ ದರ್ಶನ ಕೊಟ್ಟಿದ್ದಾರೆ. ಅಂಬಾಸಿಡರ್ ಕಾರಿನ ಪಕ್ಕ ನಿಂತಿಂತೆ ತೋರಿಸಲಾಗಿದೆ. ಹಿಂಭಾಗದಲ್ಲಿ ಸಮಾಧಿ ಕಲ್ಲು ಮತ್ತು ದೇವದೂತರ ಪ್ರತಿಮೆಯನ್ನು ಹೊಂದಿರುವ ಸ್ಮಶಾನವಿದೆ. ಪೋಸ್ಟರ್ ನೋಡಿ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಹಾಲಿವುಡ್ ಸಿನಿಮಾಗಳನ್ನು ನೆನಪಿಸುವಂತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸಾಕಷ್ಟು ಬಾಲಿವುಡ್ ಸಿನಿಮಾಗಳಲ್ಲಿ ಹುಮಾ ಖುರೇಷಿ ನಟಿಸಿದ್ದಾರೆ. ದೆಹಲಿ ಮೂಲದ ಚೆಲುವೆ 'ಗ್ಯಾಂಗ್ಸ್ ಆಫ್ ವಸ್ಸೆಪ್ಪುರ್' ಸರಣಿ ಸಿನಿಮಾಗಳ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ನಂತರ ಬದ್ಲಾಪುರ್, ಹೈವೇ, ಜಾಲಿ ಎಲ್‌ಎಲ್‌ಬಿ-2, ಬೆಲ್‌ಬಾಟಂ ಸೇರಿ ಒಂದಷ್ಟು ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಈಗಾಗಲೇ ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. 'ಟಾಕ್ಸಿಕ್' ಮೂಲಕ ಕನ್ನಡ ಚಿತ್ರರಂಗಕ್ಕೆ ಬರ್ತಿದ್ದಾರೆ.

ಒಂದಷ್ಟು ಕಿರುತೆರೆ ಕಾರ್ಯಕ್ರಮಗಳಲ್ಲಿ ಕೂಡ ಹುಮಾ ಖುರೇಷಿ ನಟಿಸಿದ್ದಾರೆ. 'ಟಾಕ್ಸಿಕ್' ಚಿತ್ರದಲ್ಲಿ ನಟಿಯರ ಕಾರುಬಾರು ಜೋರಾಗಿದೆ. ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಗೀತು ಮೋಹನ್ ದಾಸ್ ಜೊತೆ ಸೇರಿ ಚಿತ್ರಕ್ಕೆ ಯಶ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಚಿತ್ರಕ್ಕೆ ಹಣ ಹೂಡಿದ್ದಾರೆ.

ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗ್ತಿದೆ. ಬಹುತೇಕ ಚಿತ್ರೀಕರಣ ಮುಗಿದಿದೆ. ಚಿತ್ರಕ್ಕೆ ರಾಜೀವ್ ರವಿ ಛಾಯಾಗ್ರಹಣ ಹಾಗೂ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಸಣ್ಣ ಟೀಸರ್ ಬಂದು ನಿರೀಕ್ಷೆ ಹೆಚ್ಚಿಸಿದೆ. ಮುಂದೆ ಯಶ್ ಹುಟ್ಟುಹಬ್ಬಕ್ಕೆ ಮತ್ತೊಂದು ಜಬರ್ದಸ್ತ್ ಟೀಸರ್ ನಿರೀಕ್ಷಿಸಲಾಗುತ್ತಿದೆ.

ಹಾಲಿವುಡ್ ಕಲಾವಿದರು, ತಂತ್ರಜ್ಞರು 'ಟಾಕ್ಸಿಕ್' ಚಿತ್ರದಲ್ಲಿ ನಟಿಸಿದ್ದಾರೆ. ದೇಶ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಮಾಡಲಾಗ್ತಿದೆ. ಮಾರ್ಚ್ 19ಕ್ಕೆ ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್'-2 ಸಿನಿಮಾ ಕೂಡ ಬಿಡುಗಡೆ ಆಗ್ತಿದೆ. ಹಾಗಾಗಿ ಸಹಜವಾಗಿಯೇ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡಲಿದೆ. ಸದ್ಯ 'ಧುರಂಧರ್' ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಸೀಕ್ವೆಲ್ ಅದಕ್ಕಿಂತ ದೊಡ್ಡಮಟ್ಟದಲ್ಲಿ ಸದ್ದು ಮಾಡುವ ಅಂದಾಜಿದೆ. ಇನ್ನು ಈದ್ ಸಂಭ್ರಮದಲ್ಲೇ ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡ್ತಿದ್ದ ಸಲ್ಮಾನ್ ಖಾನ್ ಈ ಬಾರಿ ಹಿಂದೇಟು ಹಾಕಿದ್ದಾರೆ.

ಮಾರ್ಚ್ 19ಕ್ಕೆ 'ಟಾಕ್ಸಿಕ್' ಹಾಗೂ 'ಧುರಂಧರ್'-2 ಎದುರು 'ಬ್ಯಾಟಲ್ ಆಫ್ ಗಲ್ವಾರ್' ಸಿನಿಮಾ ಬಿಡುಗಡೆ ಮಾಡದಿರಲು ಸಲ್ಮಾನ್ ಖಾನ್ ನಿರ್ಧರಿಸಿದ್ದಾರೆ. ಈದ್ ಸಂಭ್ರಮದಲ್ಲಿ ತೆರೆಗೆ ಬಂದ ಸಲ್ಲು ಸಿನಿಮಾಗಳು ಗೆಲ್ಲುತ್ತಿದ್ದವು. ಆದರೆ ಈ ಬಾರಿ ಆ ಸೆಂಟಿಮೆಂಟ್ ಬಿಟ್ಟು ಬೇರೆ ದಿನ ಸಿನಿಮಾ ಬಿಡುಗಡೆಗೆ ಮನಸ್ಸು ಮಾಡಿದ್ದಾರೆ. ಏಪ್ರಿಲ್ 17ಕ್ಕೆ 'ಬ್ಯಾಟಲ್ ಆಫ್ ಗಲ್ವಾರ್' ಸಿನಿಮಾ ತೆರೆಗಪ್ಪಳಿಸಲಿದೆ.

More from Filmibeat

Read more about: yash toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X