ಅದ್ಭುತ, ಅನನ್ಯ, ಅಸಾಮಾನ್ಯ ; ಟಾಕ್ಸಿಕ್ ಬಗ್ಗೆ ಯಶ್ ಮುಚ್ಚಿಟ್ಟಿದ್ದನ್ನೆಲ್ಲಾ ಹೇಳಿಬಿಟ್ಟ ಬಾಲಿವುಡ್ ನಟಿ

ದಕ್ಷಿಣ ಭಾರತೀಯ ಚಿತ್ರರಂಗದಿಂದ ಕಾಲ ಕಾಲಕ್ಕೆ ಹೊಸದೊಂದು ಅಲೆ ಎದ್ದೇಳುತ್ತಿದೆ. ಹೀಗೆ ಎದ್ದ ಈ ಅಲೆಗೆ ಬಾಕ್ಸಾಫೀಸ್‌ ನಲುಗಿ ಹೋಗುತ್ತಿದೆ. ಆದರೆ .. ಬಾಲಿವುಡ್‌ನವರ ಪಾಲಿಗೆ ಈ ಅಲೆ ಬಲೆಯಂತೆ ಭಾಸವಾಗುತ್ತಿದೆ. ವಿಲ ವಿಲ ಒದ್ದಾಡುತ್ತಿದ್ದಾರೆ. ಯಾಕೆಂದರೆ.. ಹಿಂದೆ ಒಂದು ಕಾಲದಲ್ಲಿ ತಮ್ಮಿಂದನೇ ಚಿತ್ರರಂಗ ಎನ್ನುವ ಧೋರಣೆ ಇವರಲ್ಲಿತ್ತು. ಇವತ್ತು ಸೌತ್ ಚಿತ್ರರಂಗದವರ ಅಬ್ಬರದ ಮುಂದೆ...

ಮಂಕೆದ್ದು ಕುಂತ ಸ್ಟಾರ್‌ಗಳೇ ಹಿಂದೊಮ್ಮೆ ದಕ್ಷಿಣ ಭಾರತೀಯ ಚಿತ್ರರಂಗದ ಕಿಂಡಲ್ ಮಾಡುತ್ತಿದ್ದರು. ಆದರೆ ಈಗ ಜನ ಈ ಬಾಲಿವುಡ್‌ನವರನ್ನೇ ಕಂಡು ನಗಾಡುತ್ತಿದ್ದಾರೆ. ಅದೇ ಹಳಸಿದ ಕಥೆಗಳನ್ನು ಹೇಳುತ್ತಿರುವ ಹಿಂದಿ ಉದ್ಯಮದವರನ್ನು ಮೂಲೆ ಗುಂಪು ಮಾಡುತ್ತಿದ್ಧಾರೆ.

HUMA QURESHI STUNNED by Toxic Calls Yash-Geetu Mohandas Film Exceptional and a Mammoth Production

ಹೀಗಿರುವಾಗ ಇದೀಗ ಹಿಂದಿ ಚಿತ್ರರಂಗದವರೇ ಆದ ಪ್ರಖ್ಯಾತ ನಾಯಕಿ ಹುಮಾ ಖುರೇಶಿ ನಮ್ಮ ಕನ್ನಡದ ಟಾಕ್ಸಿಕ್ ಚಿತ್ರದ ಕುರಿತು ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಯಶ್ ಅವರನ್ನು ಹಾಡಿ ಹೊಗಳಿದ್ದಾರೆ. ''ಟಾಕ್ಸಿಕ್‌'' ಚಿತ್ರದಲ್ಲಿ ತಾವು ಅಭಿನಯಿಸಿರುವ ವಿಚಾರವನ್ನು ಕೂಡ ಈ ಮೂಲಕ ರಿವೀಲ್ ಮಾಡಿ ಬಿಟ್ಟಿದ್ದಾರೆ.

ಹೌದು, ಹುಮಾ ಖುರೇಶಿ.. ಬಾಲಿವುಡ್‌ನ ರೂಪವತಿ. ಅಭಿನಯದ ವಿಚಾರದಲ್ಲಿ ಕೂಡ ಇವರದ್ದು ಎತ್ತಿದ ಕೈ. ''ಗ್ಯಾಂಗ್ಸ್ ಆಫ್ ವಾಸೇಪುರ್''.. ''ಏಕ್ ಥಿ ಡಾಯನ್''... ''ಬದ್ಲಾಪುರ್''.. ''ಮಹಾರಾಣಿ- 1-2 & 3'' ಎಂಬ ವೆಬ್ ಸರಣಿ ಇವರ ಅಭಿನಯ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ.

ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ''ಕಾಲಾ'' ಚಿತ್ರದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಬಂದಿದ್ದ ಹುಮಾ ಖುರೇಶಿ ಸದ್ಯ ತಮ್ಮ ''ಮಹಾರಾಣಿ'' ವೆಬ್ ಸರಣಿಯ 4ನೇ ಭಾಗದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಕಳೆದ ಶುಕ್ರವಾರ ಬಿಡುಗಡೆಯಾದ ''ಸಿಂಗಲ್ ಸಲ್ಮಾ'' ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. ಶೀಘ್ರದಲ್ಲಿಯೇ ಪ್ರಸಾರವಾಗಲು ಸಿದ್ಧವಾದ ಮತ್ತೊಂದು ವೆಬ್ ಸೀರೀಸ್ ''ದೆಹಲಿ ಕ್ರೈಮ್ ಸೀಸನ್ 3''ಯ ಕುರಿತು ಕೂಡ ಉತ್ಸುಕರಾಗಿದ್ದಾರೆ.

ಹೀಗೆ ಒಂದಾದ ಮೇಲೊಂದು ಚಿತ್ರ ಬರುತ್ತಿರುವ ಹಿನ್ನೆಲೆ ತಮ್ಮ ಈ ವೆಬ್ ಸರಣಿ ಮತ್ತು ಚಿತ್ರಗಳ ಕುರಿತು ಪ್ರಚಾರವನ್ನು ಕೂಡ ಹುಮಾ ಮಾಡುತ್ತಿದ್ದು, ಹಲವರಿಗೆ ಸಂದರ್ಶನಗಳನ್ನು ನಿಡುತ್ತಿದ್ದಾರೆ. ಇದೇ ಸಮಯದಲ್ಲಿ ''ಟಾಕ್ಸಿಕ್'' ಚಿತ್ರದ ಕುರಿತು ಕೂಡ ಹುಮಾ ಖುರೇಶಿ ಮಾತನಾಡಿದ್ದಾರೆ. ಅಭಿಮಾನದಿಂದ ಚಿತ್ರದ ಗುಣಗಾನವನ್ನು ಮಾಡಿದ್ದಾರೆ.

HUMA QURESHI STUNNED by Toxic Calls Yash-Geetu Mohandas Film Exceptional and a Mammoth Production

ಈ ಕುರಿತು ''ಹಾಲಿವುಡ್ ರಿಪೋರ್ಟ್‌ರ್‌''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಹುಮಾ ಖುರೇಶಿ, ''ಟಾಕ್ಸಿಕ್'' ನನ್ನ ಮುಂಬರುವ ಬಹುದೊಡ್ಡ ಸಿನಿಮಾ ಎಂದು ಹೇಳಿದ್ದಾರೆ. ಯಶ್ ಅವರಂತಹ ಸೂಪರ್ ಸ್ಟಾರ್.. ಗೀತು ಮೋಹನ್ ದಾಸ್ ಅವರಂತಹ ಸಮರ್ಥ ನಿರ್ದೇಶಕಿಯ ಜೊತೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಪುಣ್ಯ ಎಂದು ಹೇಳಿರುವ ಹುಮಾ ಖುರೇಶಿ ''ಟಾಕ್ಸಿಕ್'' ಅದ್ಭುತ ಅನುಭವವನ್ನು ನನಗೆ ನೀಡಿದ ಸಿನಿಮಾ ಎಂದು ಹೇಳಿದ್ದಾರೆ. ಅಸಾಮಾನ್ಯ.. ಅನನ್ಯವಾದ.. ಲೋಕವನ್ನು ''ಟಾಕ್ಸಿಕ್‌''ನಲ್ಲಿ ಸೃಷ್ಟಿಸಿದ್ದಾರೆ. ಇಷ್ಟು ವರ್ಷ ಕಾದಿದ್ದಕ್ಕೂ ಸಾರ್ಥಕವಾಯ್ತು ಎನ್ನುವ ಭಾವನೆ ಚಿತ್ರ ನೋಡಿದ ನಂತರ ಪ್ರತಿಯೊಬ್ಬರಿಗೆ ಬರುತ್ತೆ ಎಂದು ತುಂಬಾ ಆತ್ಮವಿಶ್ವಾಸದಿಂದ ಹೇಳಿದ್ಧಾರೆ.

ಮುಂದುವರೆದು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನನಗೆ ಅಭಿನಯಿಸಲು ಹೆಚ್ಚಿನ ಆಸಕ್ತಿ ಇದೆ. ಆದರೆ.. ಟಾಕ್ಸಿಕ್ ಹೊರತು ಪಡಿಸಿ ಬೇರೆ ಯಾವ ಚಿತ್ರ ಕೂಡ ನನಗೆ ಆಸಕ್ತಿಕರ ಎಂದು ಅನಿಸಿಲ್ಲ ಎಂದು ಹೇಳಿರುವ ಹುಮಾ ಖುರೇಶಿ ಈ ವರ್ಷ ಹಿಂದಿ ಚಿತ್ರರಂಗದಲ್ಲಿ ಕೇವಲ ಬೆರಳಣಿಕೆಯಷ್ಟು ಮಾತ್ರ ಒಳ್ಳೆಯ ಸಿನಿಮಾಗಳು ಬಂದಿವೆ. ಮಿಕ್ಕಂತೆ ಬಾಲಿವುಡ್‌ ಸದ್ಯ ಸಂಕಷ್ಟದಲ್ಲಿದೆ ಎಂದು ಒಪ್ಪಿಕೊಂಡಿದ್ದಾರೆ.

HUMA QURESHI STUNNED by Toxic Calls Yash-Geetu Mohandas Film Exceptional and a Mammoth Production

ಅಂದ್ಹಾಗೇ ಯಶ್ ಮತ್ತು ಕೆವಿಎನ್ ಸಂಸ್ಥೆ ನಿರ್ಮಾಣದ ''ಟಾಕ್ಸಿಕ್'' ಚಿತ್ರದಲ್ಲಿ ನಯನತಾರಾ.. ತಾರಾ ಸುತಾರಿಯಾ.. ಕಿಯಾರಾ ಅಡ್ವಾಣಿ ಜೊತೆ ಹುಮಾ ಖುರೇಶಿ ಇದ್ದಾರೆ ಎನ್ನುವ ಸುದ್ದಿ ಇತ್ತು. ಅನಿಲ್ ಕಪೂರ್ ಸೇರಿ ಹಲವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ ಎನ್ನುವ ಮಾಹಿತಿ ಇತ್ತು.

ಆದರೆ.. ಇಲ್ಲಿಯವರೆಗೆ ಯಶ್ ಆಗಲಿ.. ಗೀತು ಮೋಹನ್ ದಾಸ್ ಆಗಲಿ.. ಚಿತ್ರತಂಡದ ಸದಸ್ಯರು ಬಾಯಿ ಬಿಟ್ಟಿರಲಿಲ್ಲ. ಅಧಿಕೃತವಾಗಿ ಚಿತ್ರದ ಸ್ಟಾರ್ ಕಾಸ್ಟ್ ಕುರಿತು ಮಾಹಿತಿ ಹಂಚಿಕೊಂಡಿರಲಿಲ್ಲ. ಈ ಹಿನ್ನೆಲೆ ಯಾರೆಲ್ಲಾ ಚಿತ್ರದಲ್ಲಿದ್ದಾರೆ ಎನ್ನುವ ಗೊಂದಲ ಅಭಿಮಾನಿಗಳಲ್ಲಿತ್ತು. ಆದರೆ ಈಗ ಹುಮಾ ಖುರೇಶಿ ''ಟಾಕ್ಸಿಕ್'' ಬಗ್ಗೆ ಮಾತನಾಡುವ ಮೂಲಕ ಚಿತ್ರದಲ್ಲಿ ತಾವು ಇರುವ ವಿಷಯವನ್ನು ಹೊರಗೆಡವಿದ್ದಾರೆ.

More from Filmibeat

English summary
Huma Qureshi opens up about working with Yash and director Geetu Mohandas on the highly-anticipated film Toxic. She declares the cinematic experience "well worth the wait." Find out more
Read more about: yash toxic filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X