twitter
    For Quick Alerts
    ALLOW NOTIFICATIONS  
    For Daily Alerts

    ಮುಸುಕಿನ ಗುದ್ದಾಟಕ್ಕೆ ಬಿದ್ದ ಕನ್ನಡದ ನಿರ್ಮಾಪಕರು

    By Pavithra
    |

    ಜೀವನದಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ. ಇಂದು ಸೋತವರು ನಾಳೆ ಗೆಲ್ಲುತ್ತಾರೆ. ನಾಳೆ ಗೆದ್ದವರು ಮುಂದೊಂದು ದಿನ ಸೋಲುತ್ತಾರೆ. ಗೆಲುವಿಗಾಗಿ ಸಾಕಷ್ಟು ಗುದ್ದಾಟಗಳು ನಡೆಯುತ್ತಲೇ ಇರುತ್ತವೆ. ಸಿನಿಮಾರಂಗದಲ್ಲೂ ಅಷ್ಟೇ ಒಮ್ಮೆ ಸಿನಿಮಾ ಪ್ಲಾಪ್ ಆದರೆ ಮತ್ತೊಂದು ಚಿತ್ರ ಸಕ್ಸಸ್ ಆಗುತ್ತೆ.

    ಗಾಂಧಿನಗರದ ಒಬ್ಬ ನಿರ್ಮಾಪಕ ಹಾಗೂ ನಟ ತಮ್ಮ ಸಿನಿಮಾಗಳ ಪ್ರಮೋಷನ್ ವಿಚಾರವಾಗಿ ಮುಸುಕಿನ ಗುದ್ದಾಟ ನಡೆಸುತ್ತಿದ್ದಾರೆ. ಭಾಷೆಯ ವಿಚಾರವಾಗಿ ಫೇಸ್ ಬುಕ್ ನಲ್ಲಿ ಸ್ಟೇಟಸ್ ವಾರ್ ಶುರು ಮಾಡಿದ್ದಾರೆ.

    ಹಿಂದಿಗೆ ರಿಮೇಕ್ ಆಗುತ್ತಾ 'ರಾಜು ಕನ್ನಡ ಮೀಡಿಯಂ', ನಿರ್ಮಾಪಕರು ಏನಂತಾರೆ?ಹಿಂದಿಗೆ ರಿಮೇಕ್ ಆಗುತ್ತಾ 'ರಾಜು ಕನ್ನಡ ಮೀಡಿಯಂ', ನಿರ್ಮಾಪಕರು ಏನಂತಾರೆ?

    ಯಾರು ಆ ನಿರ್ಮಾಪಕ? ನಟ ನಿರ್ಮಾಪರಿಗೆ ತೊಂದರೆ ಏನಾದರೂ ಮಾಡಿದರಾ? ಯಾಕೆ ಗುದ್ದಾಟ? ಎಲ್ಲವೂ ಕನ್ನಡ ಸಿನಿಮಾ ತಾನೆ ಅಂತ ಪ್ರೇಕ್ಷಕರಾದ ನೀವು ಯೋಚಿಸುತ್ತೀರಾ. ಆದರೆ ನಿರ್ಮಾಪಕ ಮತ್ತು ಕಲಾವಿದ ಫೇಸ್ ಬುಕ್ ಸ್ಟೇಟಸ್ ಏನು ಹೇಳುತ್ತೆ ? ಇಲ್ಲಿದೆ ಸಂಪೂರ್ಣ ಮಾಹಿತಿ

    ಪೇಸ್ ಬುಕ್ ನಲ್ಲಿ ಕನ್ನಡ ಸಿನಿಮಾಗಾಗಿ ಹೋರಾಟ

    ಪೇಸ್ ಬುಕ್ ನಲ್ಲಿ ಕನ್ನಡ ಸಿನಿಮಾಗಾಗಿ ಹೋರಾಟ

    ಕಳೆದವಾರ ಬಿಡುಗಡೆ ಆಗಿರುವ ಹಂಬಲ್ ಪೊಲಿಟಿಷಿಯನ್ ನೋಗರಾಜ್ ಹಾಗೂ ರಾಜು ಕನ್ನಡ ಮೀಡಿಯಂ ಸಿನಿಮಾಗಳ ಮಧ್ಯೆ ಮುಸುಕಿನ ಗುದ್ದಾಟ ಪ್ರಾರಂಭವಾಗಿದೆ.

    ಅಚ್ಚ ಕನ್ನಡ ಸಿನಿಮಾ ನಮ್ಮದು ಎಂದ ನಟ

    ಅಚ್ಚ ಕನ್ನಡ ಸಿನಿಮಾ ನಮ್ಮದು ಎಂದ ನಟ

    ಫೇಸ್ ಬುಕ್ ನಲ್ಲಿ ರಾಜು ಕನ್ನಡ ಮೀಡಿಯಂ ಸಿನಿಮಾದ ನಾಯಕ ಗುರುನಂದನ್ ಟ್ರೋಲ್ ಆಗಿರುವ ಪೋಟೋವನ್ನು ಶೇರ್ ಮಾಡಿದ್ದರು. ಕನ್ನಡದಲ್ಲಿ ಇಂಗ್ಲೀಷ್ ಸಿನಿಮಾ ನೋಡಿ ಬೇಸರವಾಗಿದ್ದರೆ ನಮ್ಮ ಕನ್ನಡ ಚಿತ್ರ ನೋಡಿ ಎಂದು ಆ ಫೋಟೋನಲ್ಲಿ ಬರೆಯಲಾಗಿತ್ತು.

    ಖುಷಿಯಲ್ಲೇ ಬೇಸರ ವ್ಯಕ್ತ ಪಡಿಸಿದ ಪುಷ್ಕರ್

    ಖುಷಿಯಲ್ಲೇ ಬೇಸರ ವ್ಯಕ್ತ ಪಡಿಸಿದ ಪುಷ್ಕರ್

    ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಾಣದಲ್ಲಿ ಬಿಡುಗಡೆ ಆಗಿದ್ದ ಹಂಬಲ್ ಪಾಲಿಟಿಷಿನ್ ನೋಗರಾಜ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಸಾಕಷ್ಟು ಜನರು ಕಂಗ್ಲೀಷ್ ಸಿನಿಮಾ ಎಂದು ಕಮೆಂಟ್ ಮಾಡಿದ್ದರು. ನಟ ಗುರುನಂದನ್ ಅವರ ಪೋಸ್ಟ್ ಶೇರ್ ಮಾಡಿದ ನಿರ್ಮಾಪಕ ಪುಷ್ಕರ್ "ವಾಟ್ ಎ ಪ್ರಮೋಷನ್, ವಾಟ್ ಎ ಟ್ಯಾಗ್ ಲೈನ್, ಜೈ ಕನ್ನಡ ಸಿನಿಮಾ" ಎಂದು ತಮ್ಮ ಫೇಸ್ ಬುಕ್ ನಲ್ಲಿ ಬರೆದು ಕೊಂಡಿದ್ದಾರೆ.

    ಯಾವುದು ಅಪ್ಪಟ ಕನ್ನಡ ಸಿನಿಮಾ?

    ಯಾವುದು ಅಪ್ಪಟ ಕನ್ನಡ ಸಿನಿಮಾ?

    ಬಿಡುಗಡೆ ಆಗಿರುವ ಹಂಬಲ್ ಪೊಲಿಟಿಷಿಯನ್ ನೋಗರಾಜ್ ಮತ್ತು ರಾಜು ಕನ್ನಡ ಮೀಡಿಯಂ ಸಿನಿಮಾದಲ್ಲಿ ಯಾವುದು ಅಪ್ಪಟ ಕನ್ನಡ ಚಿತ್ರ ಎನ್ನುವುದನ್ನು ಪ್ರೇಕ್ಷಕರೇ ನಿರ್ಧಾರ ಮಾಡಲಿದ್ದಾರೆ. ಆದರೆ ಎರಡು ಸಿನಿಮಾದವರು ಮಾತ್ರ ಪರಸ್ಪರ ಕೋಪ ಮಾಡಿಕೊಂಡಿರುವುದು ಫೇಸ್ ಬುಕ್ ನೋಡಿದವರಿಗೆ ತಿಳಿಯುತ್ತಿದೆ.

    Read more about: danish sait sandalwood
    English summary
    Kannada film Humble Politician Nogaraj and Raju Kannada Medium have started to compete between. Gurunandan acted as a hero in Raju Kannada Medium, Humble Politician Nogaraj movie Produced by Pushkar Mallikarjun.
    Monday, January 22, 2018, 16:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X