»   » ಗಣೇಶ್ -ರಶ್ಮಿಕಾಗೆ 'ಚಮಕ್' ನೀಡಲು ಬಂದ ಹೊಸ ಮಾಸ್ಟರ್

ಗಣೇಶ್ -ರಶ್ಮಿಕಾಗೆ 'ಚಮಕ್' ನೀಡಲು ಬಂದ ಹೊಸ ಮಾಸ್ಟರ್

Posted By:
Subscribe to Filmibeat Kannada

''ಚಮಕ್' ಅಂದ್ರೆ ಇದಪ್ಪಾ.! ಸುನಿ ಟೈಟಲ್ ತಕ್ಕನಾಗಿ ಸಿನಿಮಾ ಟೀಸರ್ ಮಾಡಿದ್ದಾರೆ'' ಅನ್ನೋ ಮಾತು ನಿನ್ನೆಯಿಂದ 'ಚಮಕ್' ಟೀಸರ್ ನೋಡಿದವರೆಲ್ಲರೂ ಹೇಳ್ತಿದ್ದಾರೆ.

ಸುನಿ ಸ್ಟೈಲ್ ನಲ್ಲಿ ಇರುವ ಟೀಸರ್ ನೋಡಿ ಎಲ್ಲರೂ 'ಚಮಕ್' ತಗೆದುಕೊಂಡಿದ್ದಾರೆ. ಹೀಗಿರುವಾಗಲೇ, ''ನೀವೇನ್ರೀ ಚಮಕ್ ಕೊಡೋದು ನಾವು ಬಂದಮೇಲೆ ಇವೆಲ್ಲ ನಡೆಯೋದಿಲ್ಲ'' ಅಂತಿದ್ದಾರೆ ಇಲ್ಲೊಬ್ಬರು. ಚಿತ್ರರಂಗ ಅದ್ಮೇಲೆ ಇಲ್ಲಿ ಸ್ಟಾರ್ ವಾರ್ ಗಳು ಆಗಲೇಬೇಕು. ಹೊಸಬರಾಗಲಿ ಹಳಬರಾಗಲಿ ಒಟ್ಟೊಟ್ಟಿಗೆ ಸಿನಿಮಾ ರಿಲೀಸ್ ಮಾಡಿ ತೆರೆ ಮೇಲೆ ಫೈಟ್ ಮಾಡುತ್ತಾರೆ.

ಚಮಕ್ ಚಿತ್ರತಂಡಕ್ಕೆ ಚಮಕ್ ಕೊಡೋದಕ್ಕೆ ಸಿದ್ದವಾಗಿರೋದು ನೋಗ್ ರಾಜ್. ಟೈಟಲ್ ನಿಂದಲೇ ಕನ್ನಡ ಸಿನಿಮಾರಂಗದಲ್ಲಿ ಖ್ಯಾತಿ ಪಡೆದಿರುವ ಸಿನಿಮಾ 'ಹಂಬಲ್ ಪೊಲಿಟಿಷಿಯನ್ ನೋಗ್ ರಾಜ್'. ಚಿತ್ರೀಕರಣ ಮುಗಿಸಿ ಪ್ರಚಾರದ ಸಿದ್ಧತೆ ಮಾಡಿಕೊಂಡಿರುವ ಸಿನಿಮಾ ತಂಡ ಗಣೇಶ್ ಹಾಗೂ ರಶ್ಮಿಕಾಗೆ ಚಮಕ್ ನೀಡೋದಕ್ಕೆ ತಯಾರಿ ನಡೆಸಿದ್ದಾರೆ. ಅದು ಹೇಗೆ ಅಂತೀರಾ ಮುಂದೆ ಓದಿ

ಲವ್ ಸ್ಟೋರಿ ವರ್ಸಸ್ ಕಂಗ್ಲೀಷ್ ಸಿನಿಮಾ

ಟೀಸರ್ ರಿಲೀಸ್ ಮಾಡಿ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚು ಮಾಡಿರುವ ಸಿನಿಮಾ ಚಮಕ್. ಫಸ್ಟ್ ಟೀಸರ್ ನಲ್ಲೇ ಪ್ರೇಕ್ಷಕರನ್ನ ಮೋಡಿ ಮಾಡಿರುವ ಈ ಚಿತ್ರ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆ ಮಾಡುತ್ತೇವೆ ಅನ್ನೋ ಸೂಚನೆಯನ್ನ ಸಿನಿಮಾತಂಡ ನೀಡಿದೆ. ಅದೇ ದಿನಾಂಕಕ್ಕೆ ಹಂಬಲ್ ಪೊಲಿಟಿಷಿಯನ್ ನೋಗ್ ರಾಜ್ ಚಿತ್ರ ಕೂಡ ರಿಲೀಸ್ ಆಗಲಿದ್ಯಂತೆ.

ನಿರೀಕ್ಷೆ ಮೂಡಿಸಿರೋ ಸಿನಿಮಾ

ಹಂಬಲ್ ಪೊಲಿಟಿಷಿಯನ್ ನೋಗ್ ರಾಜ್ ಹಾಗೂ ಚಮಕ್ ಎರಡು ವಿಭಿನ್ನ ಪ್ರಯತ್ನದ ಚಿತ್ರಗಳು. ಎರಡು ಸಿನಿಮಾಗಳು ಈಗಾಗಲೇ ನಿರೀಕ್ಷೆ ಹುಟ್ಟಿಸಿದ್ದು ಪ್ರೇಕ್ಷಕರಿಗೆ ಎರಡು ಚಿತ್ರವನ್ನ ನೋಡೋ ಹಂಬಲವಿದೆ.

ಯಾರು ಬರ್ತಾರೆ ಮೊದಲು

ಚಿತ್ರೀಕರಣ ಮುಗಿಸಿರೋ ಎರಡು ಸಿನಿಮಾಗಳು ಡಿಸೆಂಬರ್ ನಲ್ಲಿ ತೆರೆಗೆ ಬರಲು ಸಿದ್ದವಾಗಿದೆ. ಒಂದು ಕಡೆ ಡಿಸೆಂಬರ್ ಅಂತ್ಯಕ್ಕೆ ಚಮಕ್ ನಿಮ್ಮ ಮುಂದೆ ಅಂತಿದ್ದಾರೆ ನಿರ್ದೇಶಕ ಸುನಿ. ಇನ್ನೊಂದು ಕಡೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ಕಂಗ್ಲೀಷ್ ಚಿತ್ರ ವರ್ಷಾಂತ್ಯದಲ್ಲಿ ಪ್ರೇಕ್ಷಕರ ಮುಂದೆ ಎಂದಿದ್ದಾರೆ. ಒಟ್ಟಾರೆ ರಾಜಿ ಮಾಡಿಕೊಂಡು ಒಂದು ವಾರದ ಅಂತರದಲ್ಲಿ ಸಿನಿಮಾ ತೆರೆಗೆ ಬಂದ್ರೆ ಉತ್ತಮ ಅನ್ನೋದು ಪ್ರೇಕ್ಷಕರ ಮಾತು.

ಯಾರು ಗೆಲ್ತಾರೆ? ಯಾರು ಸೋಲ್ತಾರೆ?

ಡಿಸೆಂಬರ್ ಬಂತು ಅಂದ್ರೆ ತೆರೆಗೆ ಬರೋದಕ್ಕೆ ಸಾಲು ಸಾಲು ಸಿನಿಮಾಗಳು ಕ್ಯೂ ನಿಂತಿರುತ್ತವೆ. ಈಗಾಗಲೇ ಬಿಗ್ ಸ್ಟಾರ್ ಗಳ ಚಿತ್ರಗಳಾದ ಮಫ್ತಿ ಹಾಗೂ ಅಂಜನಿಪುತ್ರ ರಿಲೀಸ್ ಡೇಟ್ ತಿಳಿಸಿದ್ದಾರೆ. ಇವರುಗಳ ಜೊತೆಯಲ್ಲಿ ವರ್ಷದಿಂದ ಸೌಂಡ್ ಮಾಡದೇ ಸೈಲೆಂಟ್ ಆಗಿದ್ದ ಮತ್ತಷ್ಟು ಚಿತ್ರಗಳು ರಿಲೀಸ್ ಮಾಡೋದಕ್ಕೆ ನಿರ್ಮಾಪಕರು ಓಡಾಡುತ್ತಿದ್ದಾರೆ. ಇವುಗಳ ಮಧ್ಯೆ ಚಮಕ್ ಹಾಗೂ ಹಂಬಲ್ ಪೊಲಿಟಿಷಿಯನ್ ನೋಗ್ ರಾಜ್ ಕೂಡ ಬರ್ತಾರಂತೆ. ಸಿನಿಮಾ ಬಿಡುಗಡೆ ಆದಮೇಲೆ ತಿಳಿಯುತ್ತೆ ಯಾರು ಚಮಕ್ ತಗೊಂಡ್ರು ಅನ್ನೋದು.

English summary
Humble Politician Nograj and Ganesh starrer Chamak are likely to release on the same date.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada