For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್ ರನ್ನ ಮನೆಗೆ ಕಳುಹಿಸಿದ ಪೊಲಿಟಿಷಿಯನ್

  By Pavithra
  |

  ಸಂಕ್ರಾಂತಿ ಹಬ್ಬದ ವಿಶೇಷವಾಗಿ ಕನ್ನಡ ಸಿನಿಮಾ ಪ್ರಿಯರಿಗೆ ಮನೋರಂಜನೆ ನೀಡಲೆಂದು ಹಂಬಲ್ ಪೊಲಿಟಿಷಿಯನ್ ನಾಗರಾಜ್ ಸಿನಿಮಾ ರಾಜ್ಯಾದಂತ್ಯ ತೆರೆಕಂಡಿತ್ತು. ಮೊದಲ ಬಾರಿಗೆ ಡ್ಯಾನಿಶ್ ಸೇಠ್ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಚಿತ್ರದ ಟೀಸರ್ ನಿಂದ ಸಾಕಷ್ಟು ಕುತೂಹಲ ಮೂಡಿಸಿದ್ದ ಹಂಬಲ್ ಪೊಲಿಟಿಷಿಯನ್ ನಾಗರಾಜ್ ಈಗ ಜನರ ಮನಸ್ಸನ್ನ ಗೆಲ್ಲುವುದರ ಜೊತೆಗೆ ಪರಭಾಷೆಯ ಸಿನಿಮಾಗಳಿಗೆ ಸೆಡ್ಡು ಹೊಡೆದಿದೆ.

  ಹಂಬಲ್ ಪೊಲಿಟಿಷಿಯನ್ ನಾಗರಾಜ್ ಸಿನಿಮಾ ಜೊತೆಯಲ್ಲಿ ಪವನ್ ಕಲ್ಯಾಣ್ ಅಭಿನಯದ ಅಜ್ಞಾತವಾಸಿ ಚಿತ್ರ ಕೂಡ ಬಿಡುಗಡೆ ಆಗಿತ್ತು. ಸಿನಿಮಾವನ್ನ ಬೆಳ್ಳಂಬೆಳಗ್ಗೆ ನೋಡಿದ ಪ್ರೇಕ್ಷಕರು ಅಜ್ಞಾತವಾಸಿಯನ್ನ ನೋಡದೆ ಇರುವುದೇ ವಾಸಿ ಎಂದು ಅಭಿಪ್ರಾಯ ಪಟ್ಟಿದ್ದರು.

  ಇದೇ ಕಾರಣದಿಂದ ಈಗ ಅಜ್ಞಾತವಾಸಿ ಚಿತ್ರ ಬಿಡುಗಡೆ ಆಗಿದ್ದ ಚಿತ್ರಮಂದಿರಗಳಲ್ಲಿ ಹಂಬಲ್ ಪೊಲಿಟಿಷಿಯನ್ ನಾಗರಾಜ್ ಚಿತ್ರವನ್ನ ಹಾಕಲಾಗಿದೆಯಂತೆ. ಉತ್ತಮವಾದ ಕನ್ನಡ ಸಿನಿಮಾ ಮುಂದೆ ಯಾವುದೇ ಪರಭಾಷೆಯ ಸಿನಿಮಾಗಳ ನಿಲ್ಲುವುದಿಲ್ಲ ಎನ್ನುವುದು ಈ ಮೂಲಕ ಸಾಭೀತಾಗಿದೆ.

  ಹಂಬಲ್ ಪೊಲಿಟಿಷಿಯನ್ ನಾಗರಾಜ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು ಊರ್ವಶಿ, ರೆಕ್ಸ್, ಶ್ರೀನಿವಾಸ ಥಿಯೇಟರ್ ನಲ್ಲಿ ಪವನ್ ಕಲ್ಯಾಣ್ ಚಿತ್ರವನ್ನ ವಾರಕ್ಕೂ ಮುಂಚೆಯೇ ತೆಗೆದು ಹಾಕಲಾಗಿದೆ.

  ಹಂಬಲ್ ಪೊಲಿಟಿಷಿಯನ್ ನಾಗರಾಜ್ ಸಿನಿಮಾದಲ್ಲಿ ಡ್ಯಾನಿಶ್ ಸೇಠ್ ನಾಯಕನಾಗಿ ಅಭಿನಯಿಸಿದ್ರೆ ರೋಜರ್ ನಾರಾಯಣ್, ಶೃತಿ ಹರಿಹರನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  English summary
  Humble politician Nograj movie has been released in more then 100 theaters across karnataka, now the film replaced Telugu film Agnyaathavaasi in Urvashi, Rex, Srinivasa theater.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X