»   » ಹಳ್ಳಿಯಿಂದ ದಿಲ್ಲಿವರೆಗೂ ಎಲ್ಲಿ ನೋಡಿದರು ಪೊಲಿಟಿಷಿಯನ್ ನಾಗರಾಜ್

ಹಳ್ಳಿಯಿಂದ ದಿಲ್ಲಿವರೆಗೂ ಎಲ್ಲಿ ನೋಡಿದರು ಪೊಲಿಟಿಷಿಯನ್ ನಾಗರಾಜ್

Posted By:
Subscribe to Filmibeat Kannada

ಸಿನಿಮಾರಂಗವೇ ಹಾಗೇ ಇಲ್ಲಿ ಹೊಸತನವನ್ನ ಪರಿಚಯ ಮಾಡಿದರೆ ಮಾತ್ರ ಉಳಿದುಕೊಳ್ಳಲು ಸಾಧ್ಯ. ಹೊಸ ಕತೆಗಳನ್ನ ಪರಿಚಯಿಸುವುದರ ಜೊತೆಯಲ್ಲಿ ಚಿತ್ರವನ್ನ ಹೊಸ ರೀತಿಯಲ್ಲಿ ಪ್ರೇಕ್ಷಕರ ಮನಸ್ಸಿಗೆ ಮುಟ್ಟಿಸುವ ಕೆಲ ಮಾಡಬೇಕು.

ನಿರ್ಮಾಣದಿಂದ ಹಿಡಿದು ಪ್ರಚಾರದ ತನಕವೂ ನೋಡುಗರು ಹೊಸತನವನ್ನೇ ಬಯಸುತ್ತಾರೆ. ಸಿನಿಮಾ ಪ್ರಚಾರವನ್ನೂ ಹಿಂಗೂ ಮಾಡುತ್ತಾರ ? ಎಂದು ಸಿನಿಮಾರಂಗದವರಿಗೆ ಆಶ್ಚರ್ಯ ಪಡುವಂತೆ ಮಾಡಿದ್ದು ಹಂಬಲ್ ಪೊಲಿಟಿಷಿಯನ್ ನಾಗರಾಜ್ ಚಿತ್ರತಂಡ.

'ಹಂಬಲ್ ಪೊಲಿಟಿಷಿಯನ್ ನಾಗರಾಜ್' ರಿಲೀಸ್ ಡೇಟ್ ಫಿಕ್ಸ್

ಮೊನ್ನೆ ಮೊನ್ನೆಯಷ್ಟೇ ಮನೆ ಮನೆಗೆ ಹೋಗಿ ನಮ್ಮ ಸಿನಿಮಾ ನೋಡಿ ಎಂದು ಪ್ರಚಾರ ಮಾಡಿದ್ದರು ಹಂಬಲ್ ಪೊಲಿಟಿಷಿಯನ್ ನಾಗರಾಜ್. ಈಗ ಹೊಸ ಸುದ್ದಿ ಅಂದರೆ ಹಳ್ಳಿಯಿಂದ ದಿಲ್ಲಿಯ ವರೆಗೂ ಅವರದ್ದೇ ಸುದ್ದಿ. ಹೇಗೆ? ಅಂತೀರಾ ಮುಂದೆ ಓದಿ.

ಪ್ರಧಾನ ಮಂತ್ರಿಗಳ ಕೈನಲ್ಲೂ ನಾಗರಾಜ್

ಪ್ರಚಾರ ಅಂದರೆ ಹಿಂಗಿರಬೇಕು ಎನ್ನುವ ರೀತಿಯಲ್ಲಿ ಸಿನಿಮಾ ಪ್ರಚಾರವನ್ನ ಮಾಡುತ್ತಿರುವ ಟೀಂ ಹಂಬಲ್ ಪೊಲಿಟಿಷಿಯನ್ ನಾಗರಾಜ್. ಸಿನಿಮಾವನ್ನ ಎರಡು ರೀತಿಯಲ್ಲಿ ಪ್ರಚಾರ ಮಾಡಬಹುದು ಆದರೆ ನಾಗರಾಜ್ ತಂಡ ಆಯ್ಕೆ ಮಾಡಿಕೊಂಡಿರುವುದು ಪಾಸಿಟಿವ್ ಪ್ರಚಾರ. ಪ್ರಧಾನ ಮಂತ್ರಿಗಳಿಂದಲೂ ತಮ್ಮ ಚಿತ್ರವನ್ನ ಪ್ರಚಾರ ಮಾಡಿಸಿದ್ದಾರೆ.

ಸಲ್ಮಾನ್ ಕಾರ್ ಡ್ರೈವರ್ ಆದ ನಾಗರಾಜ್

ಬಾಲಿವುಡ್ ನ ಸಲ್ಮಾನ್ ಖಾನ್ ಡ್ರೈವರ್ ಆಗಿ ನಾಗರಾಜ್ ಸೇವೆ ಸಲ್ಲಿಸಿದ್ದಾರೆ. ಈ ರೀತಿ ನಾವು ಹೇಳುತ್ತಿಲ್ಲ. ಸ್ವತಃ ನಾಗರಾಜ್ ಅವರೇ ಫೋಟೋ ತೋರಿಸಿ ಡ್ರೈವರ್ ಜಿಂದಾ ಹೈ ಅಂತಿದ್ದಾರೆ.

ಪ್ರಪಂಚವನ್ನೇ ಸುತ್ತಿ ಬಂದ ನಾಗರಾಜ್

ರಾಜ್ಯ ಹಾಗೂ ದೇಶದ ಮಟ್ಟಿಗೆ ಪ್ರಚಾರವನ್ನ ಮಾಡುವ ಆಲೋಚನೆ ಮಾಡುವ ಸಿನಿಮಾ ಮಂದಿಯ ಮಧ್ಯೆ ನಾಗರಾಜ್ ವಿಶ್ವವನ್ನೇ ಸುತ್ತಿ ಬಂದಿದ್ದಾರೆ. ಕೆಲವೇ ಪೋಟೋಗಳನ್ನ ಬಳಸಿಕೊಂಡು ಕುಂತಲ್ಲೇ ವಿಭಿನ್ನ ರೀತಿಯಲ್ಲಿ ಸಿನಿಮಾವನ್ನ ಪ್ರಚಾರ ಮಾಡುತ್ತಿದ್ದಾರೆ.

ಕಮರ್ಷಿಯಲ್ ಎಂಟರ್ಟೈನ್ ಮೆಂಟ್ ಸಿನಿಮಾ

ಹಂಬಲ್ ಪೊಲಿಟಿಷಿಯನ್ ನಾಗರಾಜ್ ಕನ್ನಡದ ಮೊದಲ ಕಂಗ್ಲೀಶ್ ಸಿನಿಮಾ. ಪುಷ್ಕರ್ ಮಲ್ಲಿಕಾರ್ಜುನ್, ಹೇಮಂತ್ ರಾವ್ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ

ಮೂಡಿಬಂದಿರುವ ಸಿನಿಮಾ. ಸಾದ್ ಖಾನ್ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ನಿರೂಪಕ ಡ್ಯಾನಿಶ್ ಸೇಠ್ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ಜನವರಿ 12ಕ್ಕೆ ಬಿಡುಗಡೆ ಆಗುತ್ತಿದೆ.

English summary
kannada movie Humble Politician Nograj movie team is doing a variety of promotional activities for movie, Danish Seth acted as a hero in the movie. Saad Khan has directed the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X