For Quick Alerts
  ALLOW NOTIFICATIONS  
  For Daily Alerts

  'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಚಿತ್ರದ ಟ್ರೇಲರ್ ಈಗ ಯೂ ಟ್ಯೂಬ್ ನಲ್ಲಿ ನಂ1

  By Naveen
  |

  'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಸಿನಿಮಾ ಈಗಾಗಲೇ ಕನ್ನಡ ಸಿನಿಮಾಭಿಮಾನಿಗಳ ಗಮನ ಸೆಳೆದಿದೆ. ಈ ಹಿಂದೆ ಸಣ್ಣ ಟೀಸರ್ ಮೂಲಕ ದೊಡ್ಡ ಸದ್ದು ಮಾಡಿದ್ದ ಈ ಚಿತ್ರದ ಟ್ರೇಲರ್ ಈಗ ಬಿಡುಗಡೆಯಾಗಿದೆ.

  ಚಿತ್ರದ ಟ್ರೇಲರ್ ಬಿಡುಗಡೆಯಾಗಿ ನಿಜಕ್ಕೂ ದೊಡ್ಡ ಮಟ್ಟದ ರೆಸ್ಪಾನ್ಸ್ ಪಡೆದಿದೆ. 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಟ್ರೇಲರ್ ಈಗ ಯೂ ಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್ ವಿಡಿಯೋ ಆಗಿದೆ. ನಿನ್ನೆ ಸಂಜೆ ರಿಲೀಸ್ ಆದ ಈ ಟ್ರೇಲರ್ 1 ಲಕ್ಷಕ್ಕೂ ಜನರು ನೋಡಿದ್ದಾರೆ.

  ಟ್ರೇಲರ್ ನೋಡುವಾಗಲೇ ಇದೊಂದು ಕಾಮಿಡಿ ಆಧಾರಿತ ಸಿನಿಮಾ ಎಂಬುದು ತಿಳಿಯುತ್ತದೆ. ನಾಯಕನಾಗಿ ಕಾಣಿಸಿಕೊಂಡಿರುವ ನಿರೂಪಕ ಡ್ಯಾನಿಶ್‌ ಸೇಠ್ ಅಭಿನಯ ಟ್ರೇಲರ್ ನಲ್ಲಿನ ಹೈಲೈಟ್ ಆಗಿದೆ. ರಾಜಕೀಯ ವ್ಯವಸ್ಥೆಯ ಲೋಪಗಳನ್ನು ಹಾಸ್ಯಮಯವಾಗಿ ಇಲ್ಲಿ ತೋರಿಸಲಾಗಿದೆ. ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ನಟಿ ಶೃತಿ ಹರಿಹರನ್ ಕಾಣಿಸಿಕೊಂಡಿದ್ದಾರೆ.

  ನಟ ರಕ್ಷಿತ್ ಶೆಟ್ಟಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಿರ್ದೇಶಕ ಹೇಮಂತ್‌ ಎಂ.ರಾವ್‌ ಹಾಗೂ ಪುಷ್ಕರ ಮಲ್ಲಿಕಾರ್ಜುನ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸಾದ್ ಖಾನ್ ನಿರ್ದೇಶಕ ಮಾಡಿದ್ದಾರೆ.'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.

  English summary
  Danish Sait's 'Humble Politician Nograj' Kannada movie trailer is out. the movie is producing by Rakshit Shetty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X