»   » ಸಿನಿಮಾ ಪ್ರಚಾರವನ್ನ ಈ ರೀತಿನೂ ಮಾಡಬಹುದಾ?

ಸಿನಿಮಾ ಪ್ರಚಾರವನ್ನ ಈ ರೀತಿನೂ ಮಾಡಬಹುದಾ?

Posted By:
Subscribe to Filmibeat Kannada

ಟಿವಿ ನಿರೂಪಕ ಆರ್ ಜೆ ಡ್ಯಾನಿಶ್ ಸೇಟ್ ಅಭಿನಯದ 'ಹಂಬಲ್ ಪೊಲಿಟಿಶಿಯನ್ ನೊಗರಾಜ್' ಸಿನಿಮಾ ಇದೇ ತಿಂಗಳು ತೆರೆಕಾಣುತ್ತಿದೆ. ಬಹುತೇಕ ಮಂದಿಗೆ ಈ ಸಿನಿಮಾ ಯಾರದು ಎಂದು ಗೊತ್ತೆ ಇಲ್ಲ. ಅದಕ್ಕಾಗಿ ಈ ಚಿತ್ರವನ್ನ ಹಾಗೂ ಚಿತ್ರದ ಬಗ್ಗೆ ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದೆ ಚಿತ್ರತಂಡ. ಇದಕ್ಕಾಗಿ ವಿನೂತನವಾದ ಮಾರ್ಗವನ್ನ ಕಂಡುಕೊಂಡಿದೆ.

ಜನವರಿ 12 ರಂದು ಹಂಬಲ್ ಪೊಲಿಟಿಶಿಯನ್ ನೊಗರಾಜ್ ಬೆಳ್ಳಿತೆರೆಗೆ ಬರ್ತಿದ್ದು, ಜನರು ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಎಂದು ಸ್ವತಃ ಚಿತ್ರದ ನಾಯಕ ಡ್ಯಾನಿಶ್ ಮನೆ ಮನೆಗೂ ಹೋಗಿ ಜನರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ತಮ್ಮ ಬಗ್ಗೆ, ತಮ್ಮ ಸಿನಿಮಾದ ಬಗ್ಗೆ ಹೇಳಿಕೊಂಡು ಪ್ರಚಾರ ಮಾಡುತ್ತಿದ್ದಾರೆ.

'ಹಂಬಲ್ ಪೊಲಿಟಿಷಿಯನ್ ನಾಗರಾಜ್' ರಿಲೀಸ್ ಡೇಟ್ ಫಿಕ್ಸ್

humble politician nograj releasing on january 12th

ಇದು 'ಹಂಬಲ್ ಪೊಲಿಟಿಶಿಯನ್' ಚಿತ್ರದ ವಿಭಿನ್ನ ಪ್ರಚಾರ. ಇಷ್ಟು ದಿನ ಟಿವಿಯಲ್ಲಿ ಬೇರೆಯವರು ಕಾಲು ಎಳೆಯೆಯುತ್ತಿದ್ದ ಡ್ಯಾನಿಶ್, ಈಗ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಮಾಡಿ ಅಗ್ನಿಪರೀಕ್ಷೆಗೆ ಸಿದ್ದವಾಗಿದ್ದಾರೆ. ರಾಜಕೀಯದ ಸುತ್ತ ಕಥೆ ಮಾಡಿ, ಅದನ್ನ ಸಂಪೂರ್ಣ ಮನರಂಜನೆ ಮೂಲಕ ಪ್ರೇಕ್ಷಕರಿಗೆ ನೀಡುತ್ತಿದ್ದಾರೆ. ಚಿತ್ರದಲ್ಲಿ ಡ್ಯಾನಿಶ್ ರಾಜಕಾರಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ, ರಾಜಕಾರಣಿಗಳ ರೀತಿಯಲ್ಲೇ ಮನೆ ಮನೆ ಬಳಿ ಹೋಗಿ ವೋಟ್ ಕೇಳುವ ಬದಲು, ಸಿನಿಮಾ ಬನ್ನಿ ಅಂತಿದ್ದಾರೆ.

ಅಂದ್ಹಾಗೆ, ಈ ಚಿತ್ರವನ್ನ ಸಾದ್ ಖಾನ್ ನಿರ್ದೇಶನ ಮಾಡಿದ್ದು, ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಬಿಡುಗಡೆಯಾಗುತ್ತಿದೆ. ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಶ್ರುತಿ ಹರಿಹರನ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...

English summary
Popular tv anchor, Kannada actor Danish Sait starrer first kannada movie humble politician nograj is releasing on january 12th. the movie directed by saad khan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X