ಹೊಸ ವರ್ಷದ ಸ್ವಾಗತಕ್ಕೆ ಸಜ್ಜಾಗಿದೆ ಸ್ಯಾಂಡಲ್ ವುಡ್

By Bharath Kumar

2017ನೇ ವರ್ಷ ಕೊನೆಯ ವಾರ ಗಣೇಶ್ ಅಭಿನಯದ 'ಚಮಕ್' ಸಿನಿಮಾ ತೆರೆಕಾಣುತ್ತಿದೆ. ಇದು ಈ ವರ್ಷದ ಕೊನೆಯ ಸಿನಿಮಾ. ಅದರ ಬೆನ್ನಲ್ಲೇ ಹೊಸ ವರ್ಷವನ್ನ ಸ್ವಾಗತ ಮಾಡಲು ಸ್ಯಾಂಡಲ್ ವುಡ್ ಸಜ್ಜಾಗಿದೆ. ಹೌದು, 2018ನೇ ವರ್ಷದ ಮೊದಲ ಸಿನಿಮಾ ಯಾವುದು ಎಂದು ಈಗಾಗಲೇ ಅಧಿಕೃತವಾಗಿದೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅಭಿನಯದ ಎರಡನೇ ಸಿನಿಮಾ 'ಬೃಹಸ್ಪತಿ' ಜನವರಿ 5 ತಾರೀಖು ತೆರೆಕಾಣುತ್ತಿದೆ. ಈ ಮೂಲಕ ಹೊಸ ವರ್ಷದ ಮೊದಲ ಸಿನಿಮಾ ಇದಾಗಲಿದೆ. ನಂದಕಿಶೋರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಮಿಷ್ಠಿ ಚಕ್ರವರ್ತಿ ನಾಯಕಿಯಾಗಿದ್ದಾರೆ. ಕನ್ನಡದ ಬೃಹಸ್ಪತಿ, ತಮಿಳಿನ ವಿಐಪಿ ಚಿತ್ರದ ರೀಮೇಕ್. ರಾಕ್ ಲೈನ್ ವೆಂಕಟೇಶ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

humble politician nograj will releasing on january 12th

ಜನವರಿ ಎರಡನೇ ವಾರ ಎರಡು ಸಿನಿಮಾಗಳು ಬಿಡುಗಡೆಯಾಗಲು ಸಜ್ಜಾಗಿದ್ದು, 'ಹಂಬಲ್ ಪೊಲಿಟಿಶಿಯನ್ ನೊಗರಾಜ್' ಜನವರಿ 12 ರಂದು ಬರುವುದು ಖಚಿತವಾಗಿದೆ. ಟಿವಿ ಸ್ಟಾರ್, ಆರ್ ಜೆ ಡ್ಯಾನೀಶ್ ಸೇಠ್ ಅಭಿನಯದ ಈ ಚಿತ್ರ ಈಗಾಗಲೇ ಟ್ರೈಲರ್ ಮತ್ತು ಹಾಡುಗಳಿಂದ ಗಮನ ಸೆಳೆದಿದೆ.

humble politician nograj will releasing on january 12th

'ಗೋಧಿಬಣ್ಣ ಸಾಧಾರಣ ಮೈಕಟ್ಟು' ಖ್ಯಾತಿಯ ಮಲ್ಲಿಕಾರ್ಜುನಯ್ಯ, ಹೇಮಂತ್ ರಾವ್ ಮತ್ತು ರಕ್ಷಿತ್ ಶೆಟ್ಟಿ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಸಾದಾ ಖಾನ್ ಕಥೆ ಬರೆದು ನಿರ್ದೇಶನ ಮಾಡಿದ್ರೆ, ಡ್ಯಾನಿಶ್ ಸೇಠ್ ಚಿತ್ರಕಥೆ ಬರೆದಿದ್ದಾರೆ. ಶ್ರುತಿ ಹರಿಹರನ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇವೆರೆಡು ಚಿತ್ರಗಳ ನಂತರ ದುನಿಯಾ ವಿಜಯ್ ಅಭಿನಯದ ಕನಕ ಚಿತ್ರವೂ ಹೊಸ ವರ್ಷವನ್ನ ಸ್ವಾಗತ ಮಾಡಲು ಸಜ್ಜಾಗುತ್ತಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೇ, ಡಿಸೆಂಬರ್ ನಲ್ಲಿ ಕನಕ ತೆರೆಕಾಣಬೇಕಿತ್ತು. ಸೆನ್ಸಾರ್ ಆಗದ ಕಾರಣ ಜನವರಿಗೆ ಶಿಫ್ಟ್ ಆಗಿದ್ದು, ಮೂಲಗಳ ಪ್ರಕಾರ ಜನವರಿ 12 ರಂದು ಬರಲಿದೆಯಂತೆ.

humble politician nograj will releasing on january 12th

ಆರ್ ಚಂದ್ರು ಕನಕ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಹರಿಪ್ರಿಯಾ, ಮಾನ್ವಿತ ಹರೀಶ್ ವಿಜಿಗೆ ಜೋಡಿಯಾಗಿದ್ದಾರೆ. ಸದ್ಯ, ಈ ಮೂರು ಚಿತ್ರಗಳು ಜನವರಿ ತಿಂಗಳಲ್ಲಿ ಬಿಡುಗಡೆಯಾಗಲು ಸಿದ್ದವಾಗಿದ್ದು, ಈ ಚಿತ್ರಗಳ ಜೊತೆ ಮತ್ತಷ್ಟು ಸಿನಿಮಾಗಳು ಬರಲಿದೆ.

More from Filmibeat

English summary
kannada actor Duniya vijay starrer Kanaka, Tv Anchor danish sait starrer humble politician nograj, and Manoranjan Ravichandran starrer Brihspathi Movies are releasing on january 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X