ನಾನು ಡಾ.ರಾಜ್‌ಕುಮಾರ್ ಅವರ ಭಕ್ತ ಎಂದ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ..!

ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಲ್ಲಿ ಆಟದ ಜೊತೆ ಹಣ ಇದೆ. ಗೆಲುವಿನ ಜೊತೆ ನಾನಾ ಬಗೆಯ ನಶೆ ಇದೆ.

ಇಂಥಾ ಈ ಪ್ರಪಂಚದಲ್ಲಿ ಒಬ್ಬರನ್ನೊಬ್ಬರು ಇಷ್ಟ ಪಡುವರು ಅಅನೇಕರು ಇದ್ದಾರೆ. ಗೌರವ ಕೊಡುವರು ಇದ್ದಾರೆ. ಆರಾಧಿಸುವರು ಇದ್ದಾರೆ. ಕೆಲ ಕ್ರಿಕೆಟ್ ಪ್ಲೇಯರ್‌ಗಳಿಗೆ ಅಮಿತಾಬ್ ಬಚ್ಚನ್ ನೆಚ್ಚಿನ ಹೀರೋ ಆದರೆ, ಇನ್ನೂ ಕೆಲವರಿಗೆ ದೀಪಿಕಾ ಪಡುಕೋಣೆ ನೆಚ್ಚಿನ ನಾಯಕಿ. ಇನ್ನೂ ಕ್ರಿಕೆಟ್ ವಿಚಾರಕ್ಕೆ ಬಂದರೆ ಕಪಿಲ್ ದೇವ್‌ ಅವರಿಂದ ಹಿಡಿದು ಸಚಿನ್ ತೆಂಡೂಲ್ಕರ್ ವರೆಗೆ, ವೀರೇಂದ್ರ ಸೆಹ್ವಾಗ್‌ ಅವರಿಂದ ಹಿಡಿದು ಮಹೇಂದ್ರ ಸಿಂಗ್ ಧೋನಿಯವರೆಗೆ ಅನೇಕರನ್ನು ಚಿತ್ರತಾರೆಯರು ಇಷ್ಟ ಪಡುತ್ತಾರೆ ತಮ್ಮ ಅಭಿಮಾನವನ್ನು ಪ್ರದರ್ಶನ ಮಾಡುತ್ತಾರೆ. ಕ್ರಿಕೆಟ್ ಆಟಗಾರರು ಕೂಡ ಇದರಿಂದ ಹೊರತಾಗಿಲ್ಲ.

I Am a Fan of Dr Rajkumar Says Former Indian Pace Bowler

ಇದಕ್ಕೆ ಇನ್ನೊಂದು ಕೈಗನ್ನಡಿ ಎಂಬಂತೆ ಭಾರತದ ತಂಡದಲ್ಲಿ ಬೆಂಕಿ ಚೆಂಡು ಎಸೆಯುತ್ತಿದ್ದ ಕರುನಾಡಿನ ಹೆಮ್ಮೆಯ ಮಗ ವೆಂಕಟೇಶ್ ಪ್ರಸಾದ್ ನಾನು ಕನ್ನಡದ ಕಣ್ಮಣಿ ಕನ್ನಡ ಚಿತ್ರರಂಗದ ವರನಟ ಡಾ.ರಾಜ್ ಕುಮಾರ್ ಅವರ ಭಕ್ತ ಎಂದು ಹೇಳಿದ್ದಾರೆ.

ಹೌದು 90ರ ದಶಕದಲ್ಲಿ ನಮ್ಮ ಕರ್ನಾಟಕದ ಮೈಸೂರು ಎಕ್ಸ್‌ಪ್ರೆಸ್ ಜಾವಗಲ್ ಶ್ರೀನಾಥ್ ಅವರ ಜೊತೆ ಸೇರಿ ಭಾರತ ತಂಡಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಮೊನ್ನೆ ಮೊನ್ನೆ #AskVenky ಎಂಬ ಹ್ಯಾಶ್ ಟ್ಯಾಗ್‌ ಅಡಿ ಪ್ರಶ್ನೋತ್ತರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ನಿಮ್ಮ ಮನದಲ್ಲಿ ನನ್ನ ಬಗ್ಗೆ ಏನಾದರೂ ಪ್ರಶ್ನೆಗಳಿದ್ದರೆ ಕೇಳಿ ಎಂದಿದ್ದರು. ಈ ಕಾರ್ಯಕ್ರಮದ ಸದುಪಯೋಗವನ್ನು ಮಾಡಿಕೊಂಡ ಅನೇಕರು ವೆಂಕಟೇಶ್ ಪ್ರಸಾದ್ ಅವರಿಗೆ ಹತ್ತು ಹಲವು ಪ್ರಶ್ನೆಗಳನ್ನು ಕೇಳಿದ್ದರು. ಆ ಪೈಕಿ ವೆಂಕಟೇಶ್ ಪ್ರಸಾದ್ ಅವರ ಅಭಿಮಾನಿಯೊಬ್ಬರು ನಿಮ್ಮ ನೆಚ್ಚಿನ ಹೀರೋ ಯಾರು ಎಂದು ಪ್ರಶ್ನೆಯನ್ನು ಮಾಡಿದ್ದರು.

ಅಭಿಮಾನಿ ಕೇಳಿದ ಈ ಪ್ರಶ್ನೆ ವೆಂಕಟೇಶ್ ಪ್ರಸಾದ್ ಅವರ ಕಣ್ಣಿಗೆ ಬಿದ್ದಿದ್ದು 'ದಿ ಗ್ರೇಟ್ ಡಾ.ರಾಜ್‌ಕುಮಾರ್‌' ಎಂಬ ಉತ್ತರವನ್ನು ನೀಡಿದ್ದಾರೆ. ಸದ್ಯಕ್ಕೆ ವೆಂಕಟೇಶ್ ಪ್ರಸಾದ್ ಅವರ ಈ ಉತ್ತರ ಅನೇಕರ ಹೃದಯವನ್ನು ಗೆದ್ದಿದೆ. ಅದರಲ್ಲಿಯೂ ರಾಜವಂಶದ ಅಭಿಮಾನಿಗಳು ಅಣ್ಣಾವ್ರ ಮೇಲೆ ವೆಂಕಟೇಶ್ ಪ್ರಸಾದ್ ಅವರಿಗೆ ಇರುವ ಅಭಿಮಾನಕ್ಕೆ ಸೆಲ್ಯೂಟ್ ಹೊಡೆಯುತ್ತಿದ್ದಾರೆ. ಇನ್ನು ಕೆಲವರು ಡಾ.ವಿಷ್ಣುವರ್ಧನ್ ಅವರ ಹೆಸರನ್ನು ನೀವು ಹೇಳಬೇಕಿತ್ತು ಎಂದು ಚಕಾರವೆತ್ತುತ್ತಿದ್ದಾರೆ.

ಇನ್ನುಳಿದಂತೆ ವೆಂಕಿ ಎಂದೇ ಭಾರತ ಕ್ರಿಕೆಟ್ ತಂಡದಲ್ಲಿ ಖ್ಯಾತಿಯನ್ನು ಪಡೆದಿದ್ದ ವೆಂಕಟೇಶ್ ಪ್ರಸಾದ್ ಭಾರತ ತಂಡದ ಪರ 33 ಟೆಸ್ಟ್‌ಗಳನ್ನು ಆಡಿದ್ದರು. 96 ವಿಕೆಟ್ ಪಡೆದಿದ್ದರು. ಟೀಮ್ ಇಂಡಿಯಾ ಪರ 161 ಏಕದಿನ ಪಂದ್ಯಗಳನ್ನು ಆಡಿರುವ ವೆಂಕಟೇಶ್ ಪ್ರಸಾದ್ 196 ವಿಕೆಟ್ ಕಬಳಿಸಿದ್ದಾರೆ. ಇನ್ನು 1996ರ ವರ್ಲ್ಡ್‌ ಕಪ್‌ನಲ್ಲಿ ಪಾಕಿಸ್ತಾನ ವಿರುದ್ದ ಆಡುವಾಗ ಅಮಿರ್ ಸೊಹೇಲ್ ಬೌಂಡರಿ ಬಾರಿಸಿ ಅಗೌರವದಿಂದ ನಡೆದುಕೊಂಡ ನಂತರ ಮರು ಎಸೆತದಲ್ಲೇ ಅವರನ್ನು ವೆಂಕಟೇಶ್ ಪ್ರಸಾದ್ ಕ್ಲೀನ್ ಬೋಲ್ಡ್ ಮಾಡಿದ್ದರನ್ನು ಕ್ರಿಕೆಟ್ ಪ್ರೇಮಿಗಳು ಯಾರು ಮರೆಯಲಾರರು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X