''ನಾನೊಬ್ಬ ಕನ್ನಡಿಗ, ಹಿಂದಿನ ಜನ್ಮದಲ್ಲಿ ಇಲ್ಲೇ ಹುಟ್ಟಿದ್ದೆ''- ಸೋನು ನಿಗಮ್

12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಗಾಯಕ ಸೋನು ನಿಗಮ್ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ವೇದಿಕೆ ಮೇಲೆ ಕನ್ನಡದ ಬಗ್ಗೆ ಮಾತನಾಡಿದರು.

Recommended Video

Sonu Nigam was a kannadiga | Bangalore International Film Festival

''ನಾನು ನನ್ನ ಹಿಂದಿನ ಜನ್ಮದಲ್ಲಿ ಕನ್ನಡಿಗ ಆಗಿದ್ದೇ ಎಂದು ಬಲವಾಗಿ ನಂಬುತ್ತೇನೆ. ಯಾಕೆಂದ್ರೆ, ನಾನು ಹಿಂದಿ ಹಾಡು ಹಾಡಲು ಬಂದಿದ್ದೆ. ಆದರೆ, ಹಿಂದಿಗಿಂತ ಒಳ್ಳೆಯ ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದೇನೆ. ಕನ್ನಡ ಜನರ ಬಗ್ಗೆ ನನಗೆ ತುಂಬ ಗೌರವ ಇದೆ. ನಿಮ್ಮ ಪ್ರೀತಿ ಪಡೆಯಲು ಹೆಮ್ಮೆ ಆಗುತ್ತದೆ.'' ಎಂದು ಹೇಳಿದ್ದಾರೆ.

''ನಾನು ಯಾವುದೇ ದೇಶದಲ್ಲಿ ಕಾರ್ಯಕ್ರಮ ಮಾಡುತ್ತಿದ್ದರೂ, ಒಂದು ಧ್ವನಿ ಜೋರಾಗಿ 'ಕನ್ನಡ' ಎಂದು ಬರುತ್ತದೆ. ಆಗ ನಾನು 'ಅನಿಸಿಸುತ್ತಿದೆ ಯಾಕೋ ಇಂದು..'' ಅಂತ ಹಾಡು ಹಾಡುತ್ತೇನೆ.

I Am A Kannadiga Says Sonu Nigam

'ಅನಿಸಿಸುತ್ತಿದೆ ಯಾಕೆ ಇಂದು..' ಹಾಡನ್ನು ಚಿತ್ರೋತ್ಸವದ ವೇದಿಕೆ ಮೇಲೆಯೂ ಸೋನು ನಿಗಮ್ ಹಾಡಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜನರು ಕೂಡ ಸೋನು ಹಾಡಿಗೆ ಧ್ವನಿ ಗೂಡಿಸಿದರು.

ನಿನ್ನೆ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಮುಖ್ಯಮಂತ್ರಿ ಯಡಿಯೂರಪ್ಪ, ನಟ ಯಶ್, ಗಾಯಕ ಸೋನು ನಿಗಮ್, ನಿರ್ಮಾಪಕ ಬೋನಿ ಕಪೂರ್ ಭಾಗಿಯಾಗಿದ್ದರು.

More from Filmibeat

English summary
I am a kannadiga says Sonu Nigam in 12th Bengaluru Iternational Film Festival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X