Don't Miss!
- Sports
ಹಾಕಿ ವಿಶ್ವಕಪ್: ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು 9ನೇ ಸ್ಥಾನ ಪಡೆದ ಭಾರತ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ನನ್ನ ಹೊಡೆಯೋಕೆ 5 ಅಡಿಯ ಎಷ್ಟು ಹೀರೊಗಳು ಕಾಯ್ಕೊಂಡಿಲ್ಲ?'; ಬೇರೆ ಭಾಷೆಗಳಲ್ಲಿ ನಟಿಸೋರಿಗೆ ದಚ್ಚು ಗುನ್ನಾ!
ಬಹುದಿನಗಳಿಂದ ದರ್ಶನ್ ಅಭಿಮಾನಿಗಳು ಕಾಯುತ್ತಿದ್ದ ಕ್ರಾಂತಿ ಸಿನಿಮಾ ಬಿಡುಗಡೆ ದಿನಾಂಕ ಈಗಾಗಲೇ ಘೋಷಣೆಯಾಗಿದ್ದು, ಬಿಡುಗಡೆ ಸಮೀಪಿಸುತ್ತಿದ್ದಂತೆ ಚಿತ್ರದ ಮೇಲಿನ ನಿರೀಕ್ಷೆಗಳು ದುಪ್ಪಟ್ಟಾಗುತ್ತಿವೆ. ಇನ್ನು ಚಿತ್ರದ ಪ್ರಚಾರ ಕಾರ್ಯಗಳಿಗೂ ಚಿತ್ರತಂಡ ಚಾಲನೆ ನೀಡಿದ್ದು ಚಿತ್ರದ ನಾಯಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಯುಟ್ಯೂಬ್ ಚಾನೆಲ್‌ಗಳು ನಡೆಸುತ್ತಿರುವ ಸಂದರ್ಶನಗಳಲ್ಲಿ ಭಾಗವಹಿಸಿ ಕ್ರಾಂತಿ ಚಿತ್ರದ ಕುರಿತು ಮಾತನಾಡುತ್ತಿದ್ದಾರೆ.
ಕ್ರಾಂತಿ ಚಿತ್ರ ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆಗಳ ನಡುವಿನ ವ್ಯತ್ಯಾಸ ಮತ್ತು ಸರ್ಕಾರಿ ಶಾಲೆಗಳ ಮಹತ್ವದ ಕುರಿತ ಚಿತ್ರವಾಗಿದೆ ಎಂಬುದನ್ನು ಸಂದರ್ಶನಗಳಲ್ಲಿ ತಿಳಿಸಿರುವ ನಟ ದರ್ಶನ್ ಚಿತ್ರದ ಆಚೆಗಿನ ವಿಷಯಗಳ ಬಗ್ಗೆಯೂ ಸಹ ಕೆಲ ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ತಮ್ಮ ಬಾಲ್ಯದ ದಿನಗಳ ಬಗ್ಗೆ, ತಾವು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರ ಬಗ್ಗೆ, ನಂತರ ತಾವು ಅನುಭವಿಸಿದ ಕಷ್ಟಗಳ ಬಗ್ಗೆ ದರ್ಶನ್ ಮನಬಿಚ್ಚಿ ಚರ್ಚಿಸಿದ್ದಾರೆ.
ಇನ್ನು ಇದೇ ಕ್ರಾಂತಿ ಚಿತ್ರದ ಕುರಿತಾದ ಸಂದರ್ಶನವೊಂದರಲ್ಲಿ ಬೇರೆ ಭಾಷೆಗಳಿಗೆ ಹೋಗಿ ನಟಿಸುವುದರ ಕುರಿತು ದರ್ಶನ್ ನೀಡಿರುವ ಹೇಳಿಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪರಭಾಷೆಗಳಲ್ಲಿ ಖಳನಟರಾಗಿ ಹೋಗಿ ನಟಿಸುವುದು ತಪ್ಪು ಎಂಬರ್ಥದಲ್ಲಿ ದರ್ಶನ್ ಮಾತನಾಡಿದ್ದಾರೆ. ಹೀಗೆ ಖಡಕ್ ಹೇಳಿಕೆ ನೀಡಿರುವ ನಟ ದರ್ಶನ್ ಇದಕ್ಕೆ ಕಾರಣವನ್ನೂ ಸಹ ನೀಡಿದ್ದಾರೆ.

ಬೇರೆ ಭಾಷೆಗೆ ನಾನೇಕೆ ಹೋಗಲಿ?
ಸಿನಿಬಜ್ ಎಂಬ ಕನ್ನಡದ ಯುಟ್ಯೂಬ್ ಚಾನೆಲನ್ ನಡೆಸಿದ ಕ್ರಾಂತಿ ಚಿತ್ರದ ಸಂದರ್ಶನದಲ್ಲಿ ಮಾತನಾಡಿದ ನಟ ದರ್ಶನ್ ತೆಲುಗು ಚಿತ್ರರಂಗದಲ್ಲಿ ಹಬ್ಬದ ಸಂದರ್ಭಗಳಲ್ಲಿ ತೆಲುಗು ಭಾಷೆಯ ಚಿತ್ರಗಳಿಗೆ ಮನ್ನಣೆ ನೀಡಬೇಕು, ಬೇರೆ ಭಾಷೆಯ ಚಿತ್ರಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬಾರದು ಎಂದು ತೆಗೆದುಕೊಳ್ಳಲಾಗಿರುವ ನಿರ್ಧಾರದ ಬಗ್ಗೆ ಮಾತನಾಡಿದರು. ಅವರಿಗೆ ಇವಾಗ ತಳ ಸುಟ್ಟಿದೆ, ನಮಗೆ ಈ ಹಿಂದೆನೇ ಸುಟ್ಟಿತ್ತು ಹೀಗಾಗಿಯೇ ಈ ಹಿಂದೆಯೇ ನಮ್ಮ ರಾಜ್ಯದಲ್ಲಿ ಕನ್ನಡ ಚಿತ್ರಗಳಿಗೆ ಪ್ರಾಧಾನ್ಯತೆ ನೀಡಿ ನಮ್ಮ ನೆಲದಲ್ಲಿ ನಾವೇ ಕಿಂಗ್ ಎಂಬ ಹೇಳಿಕೆಯನ್ನು ತಾವು ನೀಡಿದ್ದಾಗಿ ದರ್ಶನ್ ಹೇಳಿದರು. ಅಷ್ಟೇ ಅಲ್ಲದೇ ನಮ್ಮ ರಾಜ್ಯದ ಜನರೇ ತನ್ನನ್ನು ರಾಜನಂತೆ ನೋಡಿಕೊಂಡಿರುವಾಗ, ಫುಟ್‌ಪಾತ್ ಮೇಲಿದ್ದ ತನ್ನನ್ನು ಮಾಲ್‌ಗಳಿಗೆ ತಂದು ಕೂರಿಸಿರುವಾಗ ನಾನೇಕೆ ಬೇರೆ ಭಾಷೆಗಳಿಗೆ ಹೋಗಿ ನಟಿಸಬೇಕು ಎಂದು ದರ್ಶನ್ ಹೇಳಿದ್ದಾರೆ.

ನನ್ನ ಹೊಡೆಯೋಕೆ 5 ಅಡಿಯ ಎಷ್ಟು ಹೀರೊಗಳು ಕಾಯ್ಕೊಂಡಿಲ್ಲ
ಇನ್ನೂ ಮುಂದುವರಿದು ಮಾತನಾಡಿದ ದರ್ಶನ್ ಕ್ರಾಂತಿ ನಿರ್ಮಾಪಕಿ ಶೈಲಜಾ ನಾಗ್ ಜತೆ ನಡೆದ ಮಾತುಕತೆ ಬಗ್ಗೆ ಕೂಡ ಹಂಚಿಕೊಂಡರು. "ಇವತ್ತು ನಾನು ಖಳನಟನಾಗಿ ಕೆಲಸ ಮಾಡ್ತೀನಿ ಎಂದರೆ 6 ಅಡಿ 3 ಇಂಚು ಇರೋ ನನ್ನ ಹೊಡೆಯೋಕೆ 5 ಅಡಿ ಇರುವ ಎಷ್ಟು ಜನ ಹೀರೊಗಳು ಕಾಯ್ಕೊಂಡಿಲ್ಲ. ಇವತ್ತು ನಟನಾಗಿ ತೆಗೆದುಕೊಳ್ಳುತ್ತಿರುವ ಸಂಭಾವನೆಗಿಂತ ಮೂರು ಪಟ್ಟು ಹೆಚ್ಚು ಸಂಭಾವನೆ ತೆಗೆದುಕೊಳ್ಳಬಹುದು. ಆದರೆ ಬೇಡ ನಮ್ಮ ಜನ ಹೀರೊ ಅಂತ ತಲೆ ಮೇಲೆ ಇಟ್ಟುಕೊಂಡಿದ್ದಾರೆ, ಹೆಗಲ ಮೇಲೆ ಕೂರಿಸಿಕೊಂಡಿದ್ದಾರೆ, ನನಗೆ ಆ ಬುದ್ಧಿ ಇಲ್ಲ" ಎಂದು ಶೈಲಜಾ ನಾಗ್ ಮೇಡಂ ಹೇಳುತ್ತಿದ್ದರು ಎಂದು ದರ್ಶನ್ ಹಂಚಿಕೊಂಡರು.

ಡಬಿಂಗ್ ಸಾಕು
ಇದೇ ವೇಳೆ ಬೇರೆ ಭಾಷೆಯಲ್ಲೂ ನಿಮಗೆ ಅಭಿಮಾನಿಗಳಿದ್ದಾರೆ, ನೀವೇಕೆ ಬೇರೆ ಭಾಷೆಗಳಲ್ಲೂ ನಟಿಸಿ ಮತ್ತಷ್ಟು ರೀಚ್ ಪಡೆಯಬಾರದು ಎಂಬ ಪ್ರಶ್ನೆಗೆ ಉತ್ತರಿಸಿದ ನಟ ದರ್ಶನ್ ಬೇರೆ ಭಾಷೆಗಳಿಗೆ ಡಬಿಂಗ್ ಮಾಡ್ತಾ ಇದ್ದೀವಲ್ಲ, ಅಷ್ಟೇ ಸಾಕು ಎಂದು ಉತ್ತರವನ್ನು ನೀಡುವ ಮೂಲಕ ಟಕ್ಕರ್ ನೀಡಿದರು ಹಾಗೂ ಪರಭಾಷೆಗಳಲ್ಲಿ ನಟಿಸುವುದರ ಬಗ್ಗೆ ಹಾಗೂ ನಟಿಸುವವರಿಗೆ ಪರೋಕ್ಷವಾಗಿ ನಟ ದರ್ಶನ್ ಗುನ್ನಾ ಇಟ್ಟಿದ್ದಾರೆ.