twitter
    For Quick Alerts
    ALLOW NOTIFICATIONS  
    For Daily Alerts

    'ಪ್ರಜಾಕೀಯ'ಕ್ಕೆ ಸೆಲೆಬ್ರಿಟಿ ಗೆಳೆಯರ ನೆರವು ಕೇಳಿಲ್ಲ, ಕೇಳಲ್ಲ: ಉಪೇಂದ್ರ

    |

    ನಟ ಉಪೇಂದ್ರ, ರಾಜಕೀಯಕ್ಕೆ ಪರ್ಯಾಯವಾಗಿ 'ಪ್ರಜಾಕೀಯ'ವನ್ನು ತರುವ ಯತ್ನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 'ಪ್ರಜಾಕೀಯ' ವಿಷಯವನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಉಪೇಂದ್ರ ಮಾಡುತ್ತಿದ್ದಾರೆ.

    Recommended Video

    ಗೆದ್ದ ಮೇಲೆ ನಿಮ್ಮ ಪಕ್ಷದವರೇ ನಿಮಗೆ ಉಲ್ಟಾ ಹೊಡೆದರೆ ಉಪ್ಪಿ ಏನ್ ಮಾಡ್ತಾರೆ | Filmibeat Kannada

    'ಪ್ರಜಾಕೀಯ', 'ಕೊರೊನಾ' ಇತರೆ ವಿಷಯಗಳ ಬಗ್ಗೆ 'ಫಿಲ್ಮೀಬೀಟ್ ಕನ್ನಡ'ದ ಜೊತೆಗೆ ಮಾತನಾಡಿರುವ ಉಪೇಂದ್ರ, 'ಪ್ರಜಾಕೀಯ'ವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ 'ಸಿನಿಮಾ ರಂಗದ ಗೆಳೆಯರ ನೆರವು ಕೇಳಿಲ್ಲ, ಕೇಳುವುದೂ ಇಲ್ಲ' ಎಂದಿದ್ದಾರೆ.

    'ಪ್ರಜಾಕೀಯ' ಎನ್ನುವುದೇ ಸೆಲೆಬ್ರಿಟಿ ರಹಿತ, ಏಕ ನಾಯಕತ್ವ ರಹಿತ ವ್ಯವಸ್ಥೆ. ಹಾಗಿದ್ದಾಗ, 'ನಾನು ಸೆಲೆಬ್ರಿಟಿ, ನೀವು ನನ್ನ ಮಾತು ಕೇಳಿ ಮತ ಹಾಕಿ' ಎಂದು ಹೇಳುವುದು ಸೂಕ್ತವಲ್ಲ. ಹಾಗಾಗಿ ನನ್ನ ಸೆಲೆಬ್ರಿಟಿ ಗೆಳೆಯರ ನೆರವನ್ನು ನಾನು ಅಪೇಕ್ಷಿಸಿಲ್ಲ' ಎಂದಿದ್ದಾರೆ ಉಪೇಂದ್ರ.

    ನಾನು ಸಿನಿಮಾ ರಂಗದ ಗೆಳೆಯರ ನೆರವು ಬಯಸುತ್ತಿಲ್ಲ: ಉಪೇಂದ್ರ

    ನಾನು ಸಿನಿಮಾ ರಂಗದ ಗೆಳೆಯರ ನೆರವು ಬಯಸುತ್ತಿಲ್ಲ: ಉಪೇಂದ್ರ

    'ನನಗೆ ಸಾಕಷ್ಟು ಜನ ಕೇಳ್ತಾರೆ ನಾವು ನಿಮಗೆ ಬೆಂಬಲ ಕೊಡುತ್ತೇವೆ ಎಂದು ಆದರೆ ನಾನು ಅದನ್ನು ಬಯಸುತ್ತಿಲ್ಲ. ನಿಮ್ಮ ಮುಖ ನೋಡಿ, ನಿಮ್ಮ ಪ್ರಭಾವಕ್ಕೊಳಗಾಗಿ ಜನ ಮತ ಚಲಾವಣೆ ಮಾಡಬಾರದು. ಜನ 'ಪ್ರಜಾಕೀಯ'ದ ವಿಚಾರಕ್ಕಷ್ಟೆ ಮತ ಹಾಕಬೇಕು' ಎಂದಿದ್ದಾರೆ ಉಪೇಂದ್ರ.

    'ಸಿನಿಮಾ ರಂಗದ ಗೆಳೆಯರು ಟಿಕೆಟ್ ಕೇಳಿದರೆ ಕೊಡ್ತೀರ?'

    'ಸಿನಿಮಾ ರಂಗದ ಗೆಳೆಯರು ಟಿಕೆಟ್ ಕೇಳಿದರೆ ಕೊಡ್ತೀರ?'

    ಹಾಗಿದ್ದರೆ ಸಿನಿಮಾ ರಂಗದ ನಿಮ್ಮ ಗೆಳೆಯರು ಟಿಕೆಟ್ ಕೇಳಿದರೆ ನಿಮ್ಮ ಪಕ್ಷದಿಂದ ಟಿಕೆಟ್ ಕೊಡ್ತೀರಾ? ಎಂಬ ಪ್ರಶ್ನೆಗೆ, 'ಸಾಧ್ಯವಿಲ್ಲ' ಎಂದಿದ್ದಾರೆ ಉಪೇಂದ್ರ. ''ಪ್ರಜಾಕೀಯ'ದಲ್ಲಿ ಚುನಾವಣೆ ಟಿಕೆಟ್ ಪಡೆದುಕೊಳ್ಳಲು ಕೆಲವು ನಿಯಮಗಳು ಇವೆ. ಅದನ್ನು ನಾವು ನಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದೇವೆ. ಅದರ ಪ್ರಕಾರವೇ ಎಲ್ಲರೂ ಟಿಕೆಟ್ ಪಡೆಯಬೇಕು' ಎಂದು, ಪ್ರಜಾಕೀಯದಲ್ಲಿ ವ್ಯಕ್ತಿಯಲ್ಲ ವಿಚಾರವೇ ಮುಖ್ಯ ಎಂದಿದ್ದಾರೆ ಉಪೇಂದ್ರ.

    'ನಾನು ಸಹ ಟಿಕೆಟ್ ಪಡೆಯಲು ನಿಯಮಗಳನ್ನು ಪಾಲಿಸಬೇಕು'

    'ನಾನು ಸಹ ಟಿಕೆಟ್ ಪಡೆಯಲು ನಿಯಮಗಳನ್ನು ಪಾಲಿಸಬೇಕು'

    'ಸಿನಿಮಾ ರಂಗದವರಾಗಲಿ, ಸಾಮಾನ್ಯರಾಗಲಿ ಜನರ ಬಳಿ ಹೋಗಿ ಅವರ ಒಪ್ಪಿಗೆ ಪಡೆದ ನಂತರವೇ ಅವರಿಗೆ ಟಿಕೆಟ್ ದೊರೆಯುತ್ತದೆ. ಒಂದೊಮ್ಮೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದಾದರೆ ನಾನೂ ಸಹ ನನ್ನ ಕ್ಷೇತ್ರದ ಜನರ ಬಳಿ ಹೋಗಿ ನಾನು ಅವರಿಗಾಗಿ ಮಾಡಲಿರುವ ಕೆಲಸಗಳನ್ನು ಹೇಳಿ ಜನ ಒಪ್ಪಿದರೆ ಮಾತ್ರವೇ ಚುನಾವಣೆ ಟಿಕೆಟ್‌ ಪಡೆಯಲು ಸಾಧ್ಯ' ಎಂದು ವಿವರಿಸಿದ್ದಾರೆ ಉಪೇಂದ್ರ.

    ನಾಯಕ ರಹಿತ ವ್ಯವಸ್ಥೆ 'ಪ್ರಜಾಕೀಯ'

    ನಾಯಕ ರಹಿತ ವ್ಯವಸ್ಥೆ 'ಪ್ರಜಾಕೀಯ'

    ಹಲವಾರು ದಶಕಗಳಿಂದ ನಾಯಕ ಸಂಸ್ಕೃತಿಯನ್ನು ನಮ್ಮ ತಲೆಗೆ ತುಂಬಲಾಗಿದೆ. ಒಬ್ಬ ನಾಯಕನಿರುತ್ತಾನೆ ಅವನನ್ನು ನಾವು ಬೆಂಬಲಿಸಬೇಕು ಎಂಬುದನ್ನು ಮೊದಲಿನಿಂದಲೂ ನೋಡಿಕೊಂಡು ಬಂದು ಬಿಟ್ಟಿದ್ದೇವೆ. ಹಾಗಾಗಿ ಪ್ರಜಾಕೀಯವನ್ನು ಅರಗಿಸಿಕೊಳ್ಳಲು ಕೆಲವರಿಗೆ ಕಷ್ಟವಾಗುತ್ತಿದೆ. 'ಪ್ರಜಾಕೀಯ' ವ್ಯವಸ್ಥೆಯಲ್ಲಿ ನಾಯಕರಿರುವುದಿಲ್ಲ. ಇಲ್ಲಿರುವುದು ಸೇವಕರು ಮಾತ್ರ. ಪ್ರಜೆಗಳು ಇಲ್ಲಿ ನಾಯಕರು' ಎಂದರು ಉಪೇಂದ್ರ.

    English summary
    Upendra said 'Prajakeeya' is a non leader party. So i am not expecting my celebrity friends to help me in elections.
    Tuesday, June 1, 2021, 16:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X