'ನಗ್ನವಾಗಿ ನಟಿಸಲು ನಾನು ಸಿದ್ಧ' ಎಂದ ಯುವನಟಿ
ಬಹುಭಾಷಾ ನಟಿ ಅಮಲಾ ಪೌಲ್ ಇತ್ತೀಚಿಗಷ್ಟೆ 'ಅಡೈ' ಚಿತ್ರದಲ್ಲಿ ನಗ್ನವಾಗಿ ನಟಿಸುವ ಮೂಲಕ ಅಚ್ಚರಿ ನೀಡಿದ್ದರು. ಈ ದೃಶ್ಯ ನೋಡಿ ಇಡೀ ಸೌತ್ ಇಂಡಸ್ಟ್ರಿ ದಿಗ್ಬ್ರಮೆಯಾಗಿತ್ತು. ಅಮಲಾ ಪೌಲ್ ನಿಜಕ್ಕೂ ನಗ್ನವಾಗಿ ನಟಿಸಿದ್ದಾರಾ ಎಂಬ ಪ್ರಶ್ನೆ ಎದುರಾಗಿತ್ತು.
ಇದೀಗ, ಯುವ ನಟಿಯೊಬ್ಬರು 'ನಾನು ನಗ್ನವಾಗಿ ನಟಿಸಲು ಸಿದ್ಧ' ಎನ್ನುವ ಮೂಲಕ ಚಿತ್ರರಂಗಕ್ಕೆ ಶಾಕ್ ನೀಡಿದ್ದಾರೆ. ಅಮಲಾ ಪೌಲ್ ಅವರ ನಟನೆ ನೋಡಿದ ಬಳಿಕ ತೆಲುಗು ನಟಿ ಬಿಂದು ಮಾಧವಿ ''ನಾನು ಇಂತಹ ಚಿತ್ರಗಳಲ್ಲಿ ಇಷ್ಟ ಪಡುತ್ತೇನೆ, ನಾನು ನಗ್ನವಾಗಿ ನಟಿಸಲು ಸಿದ್ಧ'' ಎಂದು ತಿಳಿಸಿದ್ದಾರೆ.
''ಮಹಿಳಾ ಪ್ರಧಾನ ಚಿತ್ರಗಳು ಹೆಚ್ಚಾಗಿ ಬರಬೇಕು. ಹೀರೋಗಳಷ್ಟೆ ಹೀರೋಯಿನ್ ಗಳು ಕೂಡ ನಟಿಸಬಲ್ಲರು. ಇಂತಹ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಾಯಕಿ ಪಾತ್ರಕ್ಕೆ ಹೆಚ್ಚು ಮಹತ್ವವಿರಬೇಕು. ಆಗ ನಾನು ನಗ್ನವಾಗಿ ನಟಿಸುತ್ತೇನೆ'' ಎಂದು ಬಿಂದು ಮಾಧವಿ ಹೇಳಿಕೊಂಡಿದ್ದಾರೆ.

ಮಾಡೆಲ್ ಕ್ಷೇತ್ರದಿಂದ ವೃತ್ತಿ ಆರಂಭಿಸಿದ ಬಿಂದು ಮಾಧವಿ ನಂತರ ಚಿತ್ರರಂಗಕ್ಕೆ ಪ್ರವೇಶವಾದರು. ಓಂ ಶಾಂತಿ, ಬಂಪರ್ ಆಫರ್ ಅಂತಹ ಸಿನಿಮಾದಲ್ಲಿ ನಟಿಸಿರುವ ಬಿಂದು, ಬಿಗ್ ಬಾಸ್ ಮೊದಲನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ನಟಿಸಿದ್ದರು.


Click it and Unblock the Notifications











