ನಾನು ಈ ಬಾಲಿವುಡ್ ಸ್ಟಾರ್‌ನ ಅಭಿಮಾನಿ ಎಂದರು ಚಾಲೆಂಜಿಂಗ್ ಸ್ಟಾರ್ ದರ್ಶನ್..!
ಅಭಿಮಾನಿಗಳಲ್ಲಿ ಅಣ್ಣಾವ್ರು ದೇವರನ್ನ ಕಂಡರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆಲೆಬ್ರೀಟಿಗಳನ್ನ ಕಂಡರು. ಅಭಿಮಾನಿಗಳ ಮೇಲೆ ದರ್ಶನ್ ಗೆ ಇರುವ ಪ್ರೀತಿ ಮತ್ತು ದರ್ಶನ್ ಮೇಲೆ ಅಭಿಮಾನಿಗಳಿಗೆ ಇರುವ ಪ್ರೀತಿ ನಿಜಕ್ಕೂ ವರ್ಣನಾತೀತ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಯಾಚೆ ಬಂದರೆ ಸಾಕು ಅಭಿಮಾನದ ಜಾತ್ರೆ ನಡೆಯುತ್ತೆ. ದರ್ಶನ್ ಹೋದಲ್ಲಿ.. ಬಂದಲ್ಲಿ.. ಹಿಂಬಾಲಿಸೋದು, ಸೆಲ್ಪಿ ಕೇಳೋದು, ಮಾತನಾಡಲು ಹವಣಿಸುವ ವಾತಾವರಣ ಕಂಡು ಬರುತ್ತೆ.

ಆದರೆ ನಿಮಗೆ ಗೊತ್ತಾ, ಅಭಿಮಾನಿಗಳ ಅಭಿಮಾನಕ್ಕೆ ಮೊದಲಿಂದ ತಲೆ ಬಾಗುತ್ತಾ ಬಂದ ದಾಸ ದರ್ಶನ್ ಅವರಲ್ಲಿ ಕೂಡ ಒಬ್ಬ ಅಭಿಮಾನಿ ಇದ್ದಾನೆ. ಆ ಅಭಿಮಾನಿಗೆ ಆ ಸೂಪರ್ ಸ್ಟಾರ್‌ನನ್ನ ಭೇಟಿಯಾಗುವ ಆಸೆ ಇದೆ. ಆ ಸ್ಟಾರ್ ಬೇರೆ ಯಾರು ಅಲ್ಲ ಬದಲಿಗೆ ಬಾಲಿವುಡ್‌ನ ಬಿಗ್ ಬಿ ಅಮಿತಾಭ್ ಬಚ್ಚನ್. ಖುದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಮಾತನ್ನ ಹಿಂದೊಮ್ಮೆ ಹೇಳಿದ್ದು ಇದೆ.
ಇನ್ನೂ.. ಕನ್ನಡ ಚಿತ್ರರಂಗಕ್ಕಷ್ಟೇ ಅಲ್ಲ.. ದರ್ಶನ್ ಹೆಸರು ಅಕ್ಕ ಪಕ್ಕದ ರಾಜ್ಯದಲ್ಲಿ ಚಿರಪರಿಚಿತ. ಹಿಂದಿಗೆ ಡಬ್ ಆದ ದರ್ಶನ್ ಸಿನಿಮಾಗಳನ್ನ ಉತ್ತರ ಭಾರತದವರು ಯುಟ್ಯೂಬ್ ನಲ್ಲಿ ಮುಗಿ ಬಿದ್ದು ನೋಡಿದ ಉದಾಹರಣೆ ಇವೆ. ಹೀಗಾಗಿ ಅಮಿತಾಭ್ ಬಚ್ಚನ್ ಅವರನ್ನ ಭೇಟಿಯಾಗುವುದು ದರ್ಶನ್ ಅವರ ಪಾಲಿಗೆ ಅಸಾಧ್ಯ ಏನಲ್ಲ, ಈ ಕ್ಷಣಕ್ಕೆ.. ದರ್ಶನ್ ತಮ್ಮ ಈ ಆಸೆಯನ್ನ ಪೂರೈಸಿಕೊಳ್ಳಬಹುದು.

ಆದರೆ ದರ್ಶನ್ ಅವರಿಗೆ ಅಮಿತಾಭ್ ಬಚ್ಚನ್ ಅವರ ಬಳಿ ತಾನೊಬ್ಬ ಸೂಪರ್ ಸ್ಟಾರ್ ಹೋಗುವ ಮನಸು ಇಲ್ಲ. ಬದಲಿಗೆ ಸಾಮಾನ್ಯ ಅಭಿಮಾನಿಯಾಗಿ ಹೋಗಿ ಭೇಟಿ ಮಾಡುವ ಕನಸು ಇದೆ. ಈ ಕಾರಣಕ್ಕೆ.. ಹಿಂದೆ ಸಂದರ್ಶನವೊಂದರಲ್ಲಿ ಈ ವಿಚಾರವನ್ನ ಹೇಳಿರುವ ದರ್ಶನ್, ಮುಂಬೈನಲ್ಲಿ ಸಾಕಷ್ಟು ಫ್ರೆಂಡ್ಸ್ ಇದಾರೆ. ಬಾರಣ್ಣ ಕರೆದುಕೊಂಡು ಹೋಗ್ತೀನಿ ಎನ್ನುತ್ತಾರೆ. ಸೌತ್ ಇಂಡಿಯಾದ ಹೀರೋ ಎಂದು ಹೇಳಿದಾಗ ಅವರು ವೆಲ್ಕಮ್ ಮಾಡಿಯೇ ಮಾಡುತ್ತಾರೆ. ಜನರ ಮಧ್ಯೆ ನಿಂತು ಅವರನ್ನು ನೋಡಬೇಕು' ಎಂದು ದರ್ಶನ್ ಹೇಳಿದ್ದರು.
ಸದ್ಯಕ್ಕೆ ಹಿಂದೊಮ್ಮೆ ದರ್ಶನ್ ಹಂಚಿಕೊಂಡಿದ್ದ ಈ ಮನದ ಮಾತು ಈಗ ಮತ್ತೊಮ್ಮೆ ವೈರಲ್ ಆಗಿವೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ದರ್ಶನ್ ಅವರ ಈ ಸಂದರ್ಶನದ ತುಣುಕು ಇವರ ಅಭಿಮಾನಿಗಳಲ್ಲಿದ್ದ ಅಭಿಮಾನವನ್ನ ಇನ್ನೂ ಹೆಚ್ಚಿಸುತ್ತಿದೆ. ಥರೇವಾರಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.


Click it and Unblock the Notifications











