ಈವರೆಗೂ ಯಶ್ ಮಗಳನ್ನು ನೋಡಲು ಆಗಿಲ್ಲ - ಸುಮಲತಾ
Recommended Video
Amar Kannada Movie:ರವಿಚಂದ್ರನ್ ಮಗ ಮಾಡಬೇಕಿದ್ದ ಸಿನೆಮಾ ಅಮರ್ ? | FILMIBEAT KANNADA
''ಈವರೆಗೂ ಯಶ್ ಮಗಳನ್ನು ನೋಡಲು ಆಗಿಲ್ಲ'' ಎಂದು ನಟಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಇಂದು ಜೂನ್ 24, ನಟ ಅಂಬರೀಶ್ ಅವರ ಏಳನೇ ತಿಂಗಳ ಪುಣ್ಯ ತಿಥಿ. ಹೀಗಾಗಿ ಅಂಬರೀಶ್ ಸಮಾಧಿಯ ಬಳಿ ಬಂದು ಸುಮಲತಾ ಪೂಜೆ ಸಲ್ಲಿಸಿದರು. ಈ ವೇಳೆ ಕೆಲ ವಿಷಯಗಳ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದರು.

ಯಶ್ ಮಗಳ ಬಗ್ಗೆ ಮಾತನಾಡಿದ ಸುಮಲತಾ ''ಚುನಾವಣೆ ಕೆಲಸಗಳ ನಡುವೆ ಈವರೆಗೆ ಯಶ್ ಮಗುವನ್ನು ನೋಡಲು ಆಗಿಲ್ಲ. ಹಾಗಾಗಿ, ಒಂದೊಳ್ಳೆಯ ದಿನ ನೋಡಿ ಯಶ್ ಮಗುವನ್ನ ತೋರಿಸುವುದಾಗಿ ಹೇಳಿದ್ದಾರೆ. ಯಶ್ ಪುತ್ರಿ ನನಗೂ ಮೊಮ್ಮಗಳೇ.'' ಎಂದು ಸಂತಸ ಹಂಚಿಕೊಂಡಿದ್ದಾರೆ.
ಇನ್ನು, ಅಂಬರೀಶ್ ನಿಧನರಾಗುವ ಮುನ್ನ ಯಶ್ ಮುಗಳಿಗೆ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದರು.

ಅಂದಹಾಗೆ, ಯಶ್ ಹಾಗೂ ರಾಧಿಕಾ ಪಂಡಿತ್ ಕಂದನಿಗೆ ನಿನ್ನೆ (ಭಾನುವಾರ) ನಾಮಕರಣ ಆಗಿದೆ. ತಮ್ಮ ಮಗಳಿಗೆ AYRA ಎಂದು ಹೆಸರಿಡಲಾಗಿದೆ. ಮಗಳ ಹೆಸರಿನಲ್ಲಿ YR (ಯಶ್, ರಾಧಿಕಾ) ಹೆಸರು ಕೂಡ ಇದೆ.
More from Filmibeat
English summary
Kannada actor, Mandya MP Sumalatha says she did not see actor Yash and Radhika Pandit's daughter till now because of election.


Click it and Unblock the Notifications











