Don't Miss!
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- News
ಉದ್ಯಾನವನಕ್ಕೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರು ತೆಗೆದ ಮಹಾರಾಷ್ಟ್ರ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಾನಿನ್ನೂ ಕೆಜಿಎಫ್ ನೋಡಿಲ್ಲ, ಮೈಂಡ್‌ಲೆಸ್ ಚಿತ್ರಗಳನ್ನು ನಾನು ನೋಡುವುದೂ ಇಲ್ಲ ಎಂದ ಕಿಶೋರ್!
ಕನ್ನಡ ಚಿತ್ರರಂಗದ ಮೂಲಕ ಸಿನಿಮಾ ಕ್ಷೇತ್ರ ಪ್ರವೇಶಿಸಿ ತದನಂತರ ತನ್ನ ಪ್ರತಿಭೆಯಿಂದಾಗಿ ತಮಿಳು ಹಾಗೂ ತೆಲುಗಿನ ಹಲವಾರು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡ ನಟ ಕಿಶೋರ್ ಇತ್ತೀಚೆಗಿನ ದಿನಗಳಲ್ಲಿ ಕನ್ನಡದ ದೊಡ್ಡ ಚಿತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಕಳೆದ ವರ್ಷ ಬಿಡುಗಡೆಗೊಂಡ ರಿಷಬ್ ಶೆಟ್ಟಿ ನಟನೆಯ ಹಾಗೂ ನಿರ್ದೇಶನದ ಕಾಂತಾರ ಚಿತ್ರದ ಮೂಲಕ ಚಂದನವನಕ್ಕೆ ಮರಳಿದರು.
ಕಾಂತಾರ ಚಿತ್ರದಲ್ಲಿ ಫಾರೆಸ್ಟ್ ಆಫೀಸರ್ ಪಾತ್ರದಲ್ಲಿ ಅದ್ಭುತ ಅಭಿನಯ ಮಾಡಿದ್ದ ಕಿಶೋರ್ ನಂತರ ಹಲವಾರು ಸಂದರ್ಶನಗಳಲ್ಲಿ ಭಾಗವಹಿಸಿ ನೇರ ಹೇಳಿಕೆಗಳನ್ನು ನೀಡುವ ಮೂಲಕ ಸಾಕಷ್ಟು ಸುದ್ದಿಗೀಡಾಗಿದ್ದಾರೆ. ಇನ್ನು ಕಿಶೋರ್ ನೀಡುವ ಕೆಲ ಹೇಳಿಕೆಗಳು ವಿವಾದವನ್ನೂ ಸಹ ಎಬ್ಬಿಸಿವೆ. ಹೌದು, ಇತ್ತೀಚೆಗಷ್ಟೆ ಕೊಲ್ಲುವ ದೈವ ಕ್ಷಮೆ ನೀಡಲ್ವಾ ಎಂಬ ಪೋಸ್ಟ್ ಹಂಚಿಕೊಂಡಿದ್ದ ಕಿಶೋರ್ ಕೆಲವರ ಕೆಂಗಣ್ಣಿಗೂ ಸಹ ಗುರಿಯಾಗಿದ್ದರು ಹಾಗೂ ಈ ಪೋಸ್ಟ್ ಸಹ ವಿವಾದಾತ್ಮಕವೇ.
ಹೀಗೆ ಕಿಶೋರ್ ನೀಡುತ್ತಿರುವ ಹೇಳಿಕೆಗಳು ಸಿನಿಮಾ ಮಂದಿಯಲ್ಲಿ ಕುತೂಹಲ ಕೆರಳಿಸುತ್ತಿದ್ದು, ಇದೀಗ ಕಿಶೋರ್ ನೀಡಿರುವ ಮತ್ತೊಂದು ಹೇಳಿಕೆ ವಿವಾದವನ್ನು ಹುಟ್ಟುಹಾಕಿದೆ. ಹೌದು, ಕಿಶೋರ್ ಕೆಜಿಎಫ್ ಚಾಪ್ಟರ್ 2 ಚಿತ್ರದ ಬಗ್ಗೆ ನೀಡಿರುವ ಹೇಳಿಕೆ ಸದ್ಯ ವಿವಾದಕ್ಕೆ ಕಾರಣವಾಗಿದ್ದು, ಯಶ್ ಅಭಿಮಾನಿಗಳು ಕಿಶೋರ್ ವಿರುದ್ಧ ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಕೆಜಿಎಫ್ ಬಗ್ಗೆ ಕಿಶೋರ್ ಮಾಡಿರುವ ಕಾಮೆಂಟ್ ಏನು ಎಂಬ ಮಾಹಿತಿ ಈ ಕೆಳಕಂಡಂತಿದೆ ಓದಿ..

ಕೆಜಿಎಫ್ ಚಾಪ್ಟರ್ 2 ನೋಡಿಲ್ಲ, ಅದು ನನ್ನ ಅಭಿರುಚಿಯ ಚಿತ್ರವಲ್ಲ!
ಇಂಡಿಯಾ ಟುಡೇ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಕಿಶೋರ್ "ಇದು ಸರಿಯೋ ಅಥವಾ ತಪ್ಪೋ ಎಂಬುದು ನನಗೆ ಗೊತ್ತಿಲ್ಲ. ಆದರೆ ನಾನು ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ನೋಡಿಲ್ಲ. ಅದು ನಾನು ನೋಡುವಂತಹ, ನನ್ನ ಅಭಿರುಚಿಯ ಸಿನಿಮಾವಲ್ಲ. ನೋಡುವುದು ಬಿಡುವುದು ನನ್ನ ವೈಯಕ್ತಿಕ ಆಯ್ಕೆ" ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸದ್ಯ ಯಶ್ ಅಭಿಮಾನಿಗಳನ್ನು ಕೆರಳಿಸಿದ್ದು, ಇಡೀ ದೇಶವೇ ಮೆಚ್ಚಿಕೊಂಡಿರುವ ಚಿತ್ರದ ಬಗ್ಗೆ ಇಷ್ಟು ಹಗುರವಾಗಿ ಮಾತನಾಡುವುದು ತಪ್ಪು ಎಂದು ಕಿಡಿಕಾರಿದ್ದಾರೆ.

ಗಂಭೀರ ವಿಷಯದ ಬಗ್ಗೆ ಇರುವ ಚಿತ್ರ ನೋಡಲು ಇಷ್ಟ
ಇನ್ನೂ ಮುಂದುವರಿದು ಮಾತನಾಡಿರುವ ಕಿಶೋರ್ ಕಂಟೆಂಟ್ ಇಲ್ಲದ ಚಿತ್ರ ನೋಡುವುದಕ್ಕಿಂತ ಗಂಭೀರ ವಿಷಯಗಳನ್ನು ಆಧರಿಸಿದ ಸಣ್ಣ ಚಿತ್ರಗಳನ್ನು ನೋಡಲು ನಾನು ಇಚ್ಛಿಸುತ್ತೇನೆ, ಮೈಂಡ್‌ಲೆಸ್ ಚಿತ್ರಗಳನ್ನು ನೋಡುವುದಿಲ್ಲ ಎಂದಿದ್ದಾರೆ. ಈ ಮೂಲಕ ಕಿಶೋರ್ ಸಮಾಜದಲ್ಲಿ ನಡೆಯುವ ಗಂಭೀರ ವಿಷಯಗಳನ್ನು ಆಧರಿಸಿ ತಯಾರಾಗುವ ಕಂಟೆಂಟ್ ಇರುವ ಚಿತ್ರಗಳನ್ನು ನೋಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಹಿಂದಿ ಚಿತ್ರ ಮಾಡ್ತಿದ್ದೇನೆ, ಬಾಲಿವುಡ್‌ಗೆ ಹೋಗ್ತಿಲ್ಲ!
ಇದೇ ಸಂದರ್ಶನದಲ್ಲಿ ಹಿಂದಿ ಚಿತ್ರವೊಂದರಲ್ಲಿ ತಾವು ಅಭಿನಯಿಸುತ್ತಿರುವುದರ ಕುರಿತು ಕಿಶೋರ್ ಮಾತನಾಡಿದ್ದಾರೆ. ರಥಾವರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನ ಮಾಡುತ್ತಿರುವ 'ರೆಡ್ ಕಾಲರ್' ಎಂಬ ಹಿಂದಿ ಚಿತ್ರದಲ್ಲಿ ಕಿಶೋರ್ ನಟಿಸುತ್ತಿದ್ದು, ಇದು ನನ್ನ ಬಾಲಿವುಡ್‌ನ ಮೊದಲ ಚಿತ್ರವಲ್ಲ, ಇದು ನಾವು ಮಾಡುತ್ತಿರುವ ಹಿಂದಿ ಚಿತ್ರವಷ್ಟೇ ಎಂದಿದ್ದಾರೆ.