ನಾನು ಪಂತ್ ಕ್ಷಮೆ ಕೇಳಿಯೇ ಇಲ್ಲ, ಟ್ರೋಲ್ ಪೇಜ್ಗಳು ವರ್ಸ್ಟ್ ಎಂದು ಪ್ಲೇಟ್ ಬದಲಿಸಿದ 'ಐರಾವತ' ಬೆಡಗಿ!

ಇತ್ತೀಚಿನ ದಿನಗಳಲ್ಲಿ ಅತಿ ದೊಡ್ಡ ಮಟ್ಟದ ವಿವಾದ ಹಾಗೂ ಸುದ್ದಿಗಳಿಗೆ ಈಡಾಗಿದ್ದ ಸೆಲೆಬ್ರಿಟಿಗಳ ನಡುವಿನ ಕಿತ್ತಾಟವೆಂದರೆ ಅದು ಊರ್ವಶಿ ರೌಟೆಲಾ ಮತ್ತು ರಿಷಭ್ ಪಂತ್ ನಡುವೆ ನಡೆದ ಕೋಲ್ಡ್ ವಾರ್. 2013ರಲ್ಲಿ ಸಿಂಗ್ ಸಾಬ್ ದಿ ಗ್ರೇಟ್ ಎಂಬ ಹಿಂದಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಊರ್ವಶಿ ರೌಟೇಲಾ ಅದೇ ವರ್ಷ ಬಿಡುಗಡೆಯಾದ ಎ ಪಿ ಅರ್ಜುನ್ ನಿರ್ದೇಶನದ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದರು.
ಹೀಗೆ ಕನ್ನಡದ ಈ ಏಕೈಕ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಊರ್ವಶಿ ರೌಟೇಲಾ ಐದಾರು ಹಿಂದಿ ಸಿನಿಮಾ, ತಲಾ ಒಂದೊಂದು ಬೆಂಗಾಳಿ ಹಾಗೂ ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಂದಹಾಗೆ ಊರ್ವಶಿ ರೌಟೆಲಾ ಹಾಗೂ ಕ್ರಿಕೆಟಿಗ ರಿಷಭ್ ಪಂತ್ ನಡುವೆ ಕಿತ್ತಾಟ ಆರಂಭವಾಗಲು ಕಾರಣ ಈ ಹಿಂದೆ ಇದೇ ಊರ್ವಶಿ ರೌಟೇಲಾ ನೀಡಿದ್ದ 'ಆರ್ ಪಿ' ಎಂಬ ಯುವ ಕ್ರಿಕೆಟಿಗನೊಬ್ಬ ನನ್ನನ್ನು ಭೇಟಿಯಾಗಲು ಹೋಟೆಲ್ ಒಂದರಲ್ಲಿ ಹತ್ತಾರು ಗಂಟೆ ಕಾದು ನಿಂತಿದ್ದ ಎಂಬ ಹೇಳಿಕೆ.
ಊರ್ವಶಿ ರೌಟೆಲಾ ರಿಷಭ್ ಪಂತ್ ಅವರ ಹೆಸರನ್ನು ಎಲ್ಲಿಯೂ ಬಳಸದೇ ಇದ್ದರೂ ಸಹ ಪ್ರಸ್ತುತ ಭಾರತ ಕ್ರಿಕೆಟ್‍ನಲ್ಲಿ ಆರ್ ಪಿ ಎಂದರೆ ಅದು ರಿಷಭ್ ಪಂತ್ ಎಂದು ತಿಳಿಯಲು ಯಾರಿಗೂ ಹೆಚ್ಚೇನೂ ಸಮಯ ಬೇಕಿರಲಿಲ್ಲ. ಅದೊಂದು ಹೇಳಿಕೆ ಕ್ರಿಕೆಟಿಗನನ್ನು ಕೂಡ ಕೆರಳಿಸಿತ್ತು, ರಿಷಭ್ ಪಂತ್ ತನ್ನ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ 'ಇತ್ತೀಚೆಗೆ ಜನರು ಪ್ರಚಾರ ಪಡೆದುಕೊಂಡು ಸುದ್ದಿಯಲ್ಲಿ ಇರಲು ಬಾಯಿಗೆ ಬಂದಂತೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಾರೆ' ಎಂದು ಬರೆದುಕೊಂಡಿದ್ದರು. ಇಷ್ಟು ಸಾಕಾಗಿತ್ತು ನೋಡಿ ಇಬ್ಬರ ನಡುವೆ ವಿವಾದ ಮತ್ತೊಂದು ಹಂತಕ್ಕೆ ಹೋಗಲು. ಹೀಗೆ ನಂತರದ ದಿನಗಳಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಟಾಂಗ್ ನೀಡುತ್ತಿದ್ದ ಕಾರಣ ವಿವಾದ ದೊಡ್ಡ ಹಂತಕ್ಕೆ ತಲುಪಿತ್ತು. ಆದರೆ ಇತ್ತೀಚೆಗಷ್ಟೇ ಊರ್ವಶಿ ರೌಟೆಲಾ ರಿಷಭ್ ಪಂತ್ ಅವರಿಗೆ ಕ್ಷಮೆ ಯಾಚಿಸಿದ್ದರು. ಈ ಮೂಲಕ ಇಬ್ಬರ ನಡುವಿನ ವಿವಾದ ಸುಖಾಂತ್ಯಗೊಂಡಿತು ಎನ್ನುವಷ್ಟರಲ್ಲಿಯೇ ಇದೀಗ ಊರ್ವಶಿ ರೌಟೇಲಾ ತಾನು ಕ್ಷಮೆ ಕೇಳಿಯೇ ಇಲ್ಲ ಎಂದು ಹೇಳುವುದರ ಮೂಲಕ ತನ್ನ ವರಸೆಯನ್ನೇ ಬದಲಿಸಿದ್ದಾರೆ.

ನಾನು ಕ್ಷಮೆ ಕೇಳಿದ್ದು ಆತನಿಗಿಲ್ಲ ಎಂದ ಊರ್ವಶಿ ರೌಟೇಲಾ
ಊರ್ವಶಿ ರೌಟೆಲಾ ರಿಷಭ್ ಪಂತ್ ಅವರಿಗೆ ಕ್ಷಮೆ ಯಾಚಿಸಿದ್ದಾರೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿಯೊಂದನ್ನು ಪೋಸ್ಟ್ ಮಾಡಿರುವ ನಟಿ 'ಇತ್ತೀಚಿನ ದಿನಗಳಲ್ಲಿ ಕೆಲ ಸುದ್ದಿ ವಾಹಿನಿಗಳು ಹಾಗೂ ಟ್ರೋಲ್ ಪೇಜ್ಗಳು ( ವರ್ಸ್ಟ್ ಮಾರ್ಕೆಟರ್ಸ್ ) ಟಿವಿ ಶೋ ಹಾಗೂ ಚಲನಚಿತ್ರಗಳಿಗಿಂತ ಹೆಚ್ಚಾಗಿ ಕತೆಗಳನ್ನು ಬರೆಯುತ್ತವೆ, ನಾನು ಅಂದು ಕ್ಷಮೆ ಕೇಳಿದ್ದು ನನ್ನ ಅಭಿಮಾನಿಗಳಿಗೆ ಹೊರತು ಬೇರೆ ಯಾರಿಗೂ ಅಲ್ಲ' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪಂತ್ ಹಾಗೂ ಊರ್ವಶಿ ರೌಟೆಲಾ ನಡುವಿನ ಕೋಲ್ಡ್ ವಾರ್ ಮತ್ತೆ ಆರಂಭವಾದಂತಿದೆ.

ಅಂದು ಕ್ಷಮೆ ಕೇಳಿದ್ದ ಊರ್ವಶಿ ರೌಟೇಲಾ
ಇನ್ಸ್ಟಾಂಟ್ ಬಾಲಿವುಡ್ ಎಂಬ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಊರ್ವಶಿ ರೌಟೇಲಾಗೆ ನಿರೂಪಕ ರಿಷಬ್ ಪಂತ್ ಅವರಿಗೆ ಏನಾದರೂ ಹೇಳಲು ಬಯಸುತ್ತೀರಾ ಎಂದು ಕೇಳಿದಾಗ 'ಹೇಳುವುದಕ್ಕೆ ಏನೂ ಇಲ್ಲ, ನನ್ನನ್ನು ಕ್ಷಮಿಸಿ' ಎಂದು ಹೇಳಿಕೆಯನ್ನು ನೀಡಿದ್ದರು. ಊರ್ವಶಿ ರೌಟೆಲಾ ಈ ರೀತಿ ಹೇಳಿಕೆ ನೀಡಿದ್ದು ಪಂತ್ ಅವರಿಗೆ ಎಂಬ ಸ್ಪಷ್ಟನೆ ವಿಡಿಯೋದಲ್ಲಿತ್ತು, ಆದರೆ ಇದೀಗ ಊರ್ವಶಿ ರೌಟೆಲಾ ಅದು ತನ್ನ ಅಭಿಮಾನಿಗಳಿಗೆ ಎಂದು ವರಸೆ ಬದಲಾಯಿಸಿದ್ದಾರೆ.

ಈ ಹಿಂದೆ ತಮ್ಮ ಎಂದಿದ್ದ ಊರ್ವಶಿ ರೌಟೇಲಾ
ಇನ್ನು ಈ ಹಿಂದೆ ಮತ್ತೊಮ್ಮೆ ಹೆಸರನ್ನು ತೆಗೆದುಕೊಳ್ಳದೇ ಊರ್ವಶಿ ರೌಟೆಲಾ ರಿಷಭ್ ಪಂತ್ ಅವರ ಕಾಲನ್ನು ಎಳೆದಿದ್ದರು. ಚೋಟು ಭಯ್ಯಾ ಮೈದಾನದಲ್ಲಿ ಬ್ಯಾಟ್ ಬಾಲ್ ಆಡಬೇಕು, ಸೈಲೆಂಟ್ ಆಗಿರುವ ಹುಡುಗಿಯ ಕುರಿತು ತುಟಿ ಬಿಚ್ಚಬಾರದು ಎಂದು ಹೇಳಿಕೆ ನೀಡುವ ಮೂಲಕ ಮತ್ತೊಮ್ಮೆ ವಿವಾದ ಎಬ್ಬಿಸಿದ್ದರು.

ಪಂತ್ ಮಾತ್ರವಲ್ಲ ನಸೀಮ್ ಕುರಿತೂ ಸಹ ವಿವಾದ
ಇತ್ತೀಚಿಗಷ್ಟೆ ಊರ್ವಶಿ ರೌಟೆಲಾ ಏಷ್ಯಾಕಪ್ ಟೂರ್ನಿಯ ಪಂದ್ಯದ ವೇಳೆ ನಸೀಮ್ ಷಾ ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಿದರು ಎಂದು ಸುದ್ದಿಯಾಗಿತ್ತು. ಈ ಸುದ್ದಿಗೆ ಪ್ರತಿಕ್ರಿಯಿಸಿದ್ದ ನಸೀಮ್ ಶಾ ತನಗೆ ಊರ್ವಶಿ ರೌಟೆಲಾ ಯಾರೆಂಬುದೇ ತಿಳಿದಿಲ್ಲ, ನನ್ನ ಪಾಡಿಗೆ ನಾನು ಪಂದ್ಯವನ್ನಾಡುತ್ತಿದ್ದೆ ಅಷ್ಟೆ ಎಂದು ಹೇಳಿಕೆಯನ್ನು ನೀಡುವ ಮೂಲಕ ವಿವಾದವನ್ನು ತಳ್ಳಿ ಹಾಕಿದ್ದರು.


Click it and Unblock the Notifications











