''ನನಗೆ ಮಕ್ಕಳೆ ಬೇಡ'': ಶ್ರದ್ಧಾ ದಿಟ್ಟ ನಿರ್ಧಾರಕ್ಕೆ ಕಾರಣವೇನು?

Recommended Video

ಶ್ರದ್ಧಾ ಮಕ್ಕಳು ಬೇಡ ಎನ್ನಲು ಇಲ್ಲಿದೆ ಕಾರಣ..? | Shraddha Srinath | FILMIBEAT KANNADA

'ಮಕ್ಕಳಿರಲವ್ವ ಮನೆತುಂಬ..' ಎನ್ನುವ ಮಾತಿತ್ತು. ನಂತರ 'ನಾವಿಬ್ಬರು ನಮಗಿಬ್ಬರು' ಎನ್ನುವುದು ಬಂತು. ಅದರ ಬಳಿಕ 'ಗಂಡಾಗಲಿ, ಹೆಣ್ಣಾಗಲಿ ಒಂದೇ ಮಗು ಇರಲಿ' ಎಂದು ಹೇಳಲು ಶುರು ಮಾಡಿದರು. ಆದರೆ, ಈಗ ನಟಿ ಶ್ರದ್ಧಾ ಶ್ರೀನಾಥ್ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.

''ನನಗೆ ಮಕ್ಕಳೆ ಬೇಡ'' ಎಂದು ನಟಿ ಶ್ರದ್ಧಾ ಶ್ರೀನಾಥ್ ಹೇಳಿದ್ದಾರೆ. ಕನ್ನಡದಲ್ಲಿ 'ಯೂ ಟರ್ನ್' ಎಂಬ ಹಿಟ್ ಸಿನಿಮಾ ನೀಡಿದ ಶ್ರದ್ಧಾ ಸದ್ಯ, ಇತರ ಭಾಷೆಗಳಲ್ಲಿ ದೊಡ್ಡ ಅವಕಾಶಗಳನ್ನು ಪಡೆಯುತ್ತಿದ್ದಾರೆ. ತಮಿಳು, ತೆಲುಗು, ಹಿಂದಿ ಸಿನಿಮಾ ಮಾಡಿ ಒಳ್ಳೆಯ ಹೆಸರು ಮಾಡುತ್ತಿದ್ದಾರೆ. ಇದರ ನಡುವೆಯೇ ಇವರು ನೀಡಿರುವ ಹೇಳಿಕೆ ದೊಡ್ಡ ಸುದ್ದಿಯಾಗುತ್ತಿದೆ.

ಇತ್ತೀಚಿಗಷ್ಟೆ ಒಂದು ಸಂದರ್ಶನದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಿದ ಶ್ರದ್ಧಾ ತಮಗೆ ಮಕ್ಕಳು ಬೇಡ ಎಂದು ತಮ್ಮ ನಿರ್ಧಾರ ತಿಳಿಸಿದ್ದಾರೆ.

'ನನಗೆ ಮಕ್ಕಳು ಬೇಡ'- ಶ್ರದ್ಧಾ ಶ್ರೀನಾಥ್

'ನನಗೆ ಮಕ್ಕಳು ಬೇಡ'- ಶ್ರದ್ಧಾ ಶ್ರೀನಾಥ್

ಇತ್ತೀಚಿಗೆ ಒಂದು ಸಂದರ್ಶನದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ನಟಿ ಶ್ರದ್ಧಾ ಶ್ರೀನಾಥ್ ಹೇಳಿಕೆ ನೀಡಿದ್ದಾರೆ. ಈ ವೇಳೆ ತಮ್ಮ ಕುಟುಂಬದ ಬಗ್ಗೆ ಮಾತನಾಡಿದ ಅವರು ''ನನ್ನ ಅಜ್ಜ ಅಜ್ಜಿಯರಿಗೆ 15 ಜನ ಮಕ್ಕಳು, ನಮ್ಮ ತಂದೆ ತಾಯಿಗೆ ಇಬ್ಬರು ಮಕ್ಕಳು. ಆದರೆ 'ನನಗೆ ಮಕ್ಕಳೆ ಬೇಡ' ಎಂದು ನಿರ್ಧಾರ ಮಾಡಿದ್ದೇನೆ'' ಎಂದು ಹೇಳಿದ್ದಾರೆ.

ಏಕೆ ಈ ನಿರ್ಧಾರ?

ಏಕೆ ಈ ನಿರ್ಧಾರ?

ಶ್ರದ್ಧಾ ತಮಗೆ ಮಕ್ಕಳೆ ಬೇಡ ಎನ್ನುವ ನಿರ್ಧಾರ ಮಾಡಿದ್ದು ಏಕೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಅದಕ್ಕೂ ವಿವರಣೆ ನೀಡಿರುವ ಶ್ರದ್ಧಾ ಸಮಾಜದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ಘಟನೆಯಿಂದ ಬೇಸರಗೊಂಡಿದ್ದಾರಂತೆ. ''ಕಾಲ ಬದಲಾಗುತ್ತಾ ಇದ್ದರೂ, ಸಮಾಜದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿ ಬದಲಾಗಿಲ್ಲ'' ಎಂದು ತಮ್ಮ ಬೇಸರ ಹಂಚಿಕೊಂಡಿದ್ದಾರೆ.

ಇತರರೂ ಇದೇ ನಿರ್ಧಾರ ತೆಗೆದುಕೊಳ್ಳಬೇಡಿ

ಇತರರೂ ಇದೇ ನಿರ್ಧಾರ ತೆಗೆದುಕೊಳ್ಳಬೇಡಿ

ಒಬ್ಬ ನಟಿ ನೀಡುವ ಹೇಳಿಕೆ, ತೆಗೆದುಕೊಳ್ಳುವ ನಿರ್ಧಾರ ಅವರ ಅಭಿಮಾನಿ ಬಳಗದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಶ್ರದ್ಧಾ ತಾವು ತೆಗೆದುಕೊಂಡ ನಿರ್ಣಯವನ್ನು ಯಾರೂ ಅನುಸರಿಸಬೇಡಿ ಎಂದು ಮನವಿ ಮಾಡಿದ್ದಾರೆ. ನನ್ನ ಜ್ಞಾನ, ಶಿಕ್ಷಣದ ಮೇಲೆ ವೈಯಕ್ತಿಕ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಇದೇ ರೀತಿಯ ವಿಷಯದ ಸಿನಿಮಾ ಮಾಡಿದ್ದಾರೆ ಶ್ರದ್ಧಾ

ಇದೇ ರೀತಿಯ ವಿಷಯದ ಸಿನಿಮಾ ಮಾಡಿದ್ದಾರೆ ಶ್ರದ್ಧಾ

ಇತ್ತೀಚಿಗೆ ಹಿಂದಿಯ 'ಪಿಂಕ್' ಚಿತ್ರ ರಿಮೇಕ್ ತಮಿಳಿಗೆ ರಿಮೇಕ್ ಆಗಿದ್ದು, ಇದರಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿದ್ದರು. ಈ ಸಿನಿಮಾದಲ್ಲಿಯೂ ಯುವತಿಯರನ್ನು ಸಮಾಜ ನೋಡುವ ದೃಷ್ಟಿಕೋನದ ಬಗ್ಗೆ ಹೇಳಲಾಗಿತ್ತು. ಅನ್ಯಾಯಕ್ಕೆ ಒಳಗಾದ ಹುಡುಗಿಯ ಪಾತ್ರದಲ್ಲಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಂಡಿದ್ದರು. ಹಿಂದಿಯಲ್ಲಿ ಈ ಪಾತ್ರವನ್ನು ತಾಪ್ಸಿ ಪನ್ನು ನಿರ್ವಹಿಸಿದ್ದರು.

More from Filmibeat

English summary
'I Don't Want Children' says actrees Shraddha Srinath in her recent interview.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X