'ಎಲ್ಲಿ ಹೋದ್ರೂ ಆಗೋದೇ ಆಗೋದು'; ಹನಿಮೂನ್ ಬಗ್ಗೆ ಪ್ರಥಮ್ ವ್ಯಂಗ್ಯ!

ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಮೂಲಕ ಕನ್ನಡ ಜನರಿಗೆ ಪರಿಚಿತರಾಗಿ ವೀಕ್ಷಕರ ಮನಸ್ಸನ್ನು ಗೆದ್ದಿದ್ದ ಪ್ರಥಮ್ ಆ ಸೀಸನ್‌ನ ವಿನ್ನರ್ ಸಹ ಆಗಿದ್ದರು. ಹೀಗೆ ಬಿಗ್ ಬಾಸ್ ವಿನ್ನರ್ ಎಂಬ ಪಟ್ಟ ಗಿಟ್ಟಿಸಿಕೊಂಡ ಪ್ರಥಮ್ ಬಳಿಕ ಸಿನಿಮಾಗಳಲ್ಲಿಯೂ ನಟಿಸಲಾರಂಭಿಸಿದರು.

ಪ್ರಥಮ್ ನಟನೆಯ ಐದಾರು ಸಿನಿಮಾಗಳು ಬಿಡುಗಡೆಯಾಗಿದ್ದು, ಸಾಮಾನ್ಯ ವ್ಯಕ್ತಿಯಾಗಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದ ಪ್ರಥಮ್ ಸದ್ಯ ಸೆಲೆಬ್ರಿಟಿಯಾಗಿದ್ದು, ಜೂನ್ 12ರ ಭಾನುವಾರ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೌದು, ಒಳ್ಳೆ ಹುಡ್ಗ ಪ್ರಥಮ್ ಯಾವುದೇ ಸುಳಿವು ನೀಡದೇ ಭಾನುಶ್ರೀ ಎಂಬ ಯುವತಿ ಜತೆ ಉಂಗುರ ಬದಲಾಯಿಸಿಕೊಂಡು ಆ ಸುದ್ದಿಯನ್ನು ತಿಳಿಸಿ ಸರ್‌ಪ್ರೈಸ್ ನೀಡಿದ್ದರು.

I dont like to visit Switzerland or Scotland for my honeymoon says Olle Hudga Pratham

ಹೀಗೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ ಪ್ರಥಮ್ ಆ ಬಳಿಕ ಮಾಧ್ಯಮಗಳ ಮುಂದೆ ಬಂದು ಮಾತನಾಡಿ ತಾವು ಯಾಕೆ ಯಾವುದೇ ಮಾಹಿತಿಯನ್ನು ನೀಡದೇ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡೆ ಎಂಬುದಕ್ಕೆ ಉತ್ತರವನ್ನೂ ಸಹ ನೀಡಿದರು.

ಮೊದಲಿಗೆ ತಾವು ಕೈ ಹಿಡಿಯಲಿರುವ ಹುಡುಗಿ ಬಗ್ಗೆ ಮಾಹಿತಿ ಹಂಚಿಕೊಂಡ ಪ್ರಥಮ್ ಆಕೆ ಪದವಿ ಮುಗಿಸಿದ್ದು, ಸದ್ಯ ಮಾಸ್ಟರ್ ಡಿಗ್ರಿ ಮಾಡುತ್ತಿದ್ದಾರೆ ಎಂದು ಹೇಳಿಕೊಂಡರು. ಅಲ್ಲದೇ ಆಕೆ ಇನ್ನೂ ಸಹ ಮೊಬೈಲ್ ಬಳಸುವುದಿಲ್ಲ, ಮನೆಯವರೇ ನೋಡಿದ ಹುಡುಗಿ, ಸಿದ್ದರಾಮಯ್ಯ ಹಾಗೂ ರವಿಚಂದ್ರನ್ ಅವರ ಪತ್ನಿಯರ ಹಾಗೆ ತಾನು ಕೈ ಹಿಡಿಯಲಿರುವ ಹುಡುಗಿಯೂ ಸಹ ಸಾಮಾಜಿಕ ಜಾಲತಾಣದಿಂದ ದೂರ ಹಾಗೂ ಸರಳ ಎಂದು ತಿಳಿಸಿದರು.

ಇನ್ನೂ ಮುಂದುವರೆದು ಮಾತನಾಡಿದ ಪ್ರಥಮ್ ನಿಶ್ಚಿತಾರ್ಥ ಹೇಗೆ ಸರಳವಾಗಿ ನಡೆಯಿತೋ ಅದೇ ರೀತಿ ಮದುವೆ ಸಹ ಸರಳವಾಗಿ ನಡೆಯಲಿದೆ ಎಂದರು. ತನಗೆ ಆಡಂಬರ ಇಷ್ಟವಿಲ್ಲ, ತಾನೊಬ್ಬ ಸಾಮಾನ್ಯ ವ್ಯಕ್ತಿಯೇ ಹೊರತು ಸೆಲೆಬ್ರಿಟಿ ಅಲ್ಲ ಎಂದ ಪ್ರಥಮ್ ಬೇರೆ ಕಲಾವಿದರ ಹಾಗೆ ತಾನು ತಮ್ಮ ವೈವಾಹಿಕ ಜೀವನದ ಬಗ್ಗೆ ಹೆಚ್ಚೇನೂ ಮಾಹಿತಿ ಹಂಚಿಕೊಳ್ಳುವುದಿಲ್ಲ ಹಾಗೂ ಮುಂದಿನ ದಿನಗಳಲ್ಲಿ ಮಗು ಆದರೂ ಸಹ ಆ ಕುರಿತೂ ಸಹ ಅನಗತ್ಯ ಗಮನ ಸೆಳೆಯಲು ಇಚ್ಛಿಸುವುದಿಲ್ಲ ಎಂದರು.

ದೇಶದಲ್ಲಿರುವ ಎಲ್ಲರಿಗೂ ಮಕ್ಕಳಾಗುತ್ತೆ, ನನಗೇನು ಸಿಂಹ ಅಥವಾ ಹುಲಿ ಜನಿಸುವುದಿಲ್ಲ ಎಂದ ಪ್ರಥಮ್ ಹನಿಮೂನ್ ಎಲ್ಲಿ ಎಂಬ ಪ್ರಶ್ನೆ ಎದುರಾದಾಗಲೂ ವ್ಯಂಗ್ಯವಾಗಿ ಹಾಸ್ಯಾಸ್ಪದ ಉತ್ತರವನ್ನು ನೀಡಿದರು.

"ಅಣ್ಣಾ ಇದೇ ತಪ್ಪು, ನಾವು ಸ್ವಿಡ್ಜರ್‌ಲ್ಯಾಂಡ್‌ಗೆ ಹೋಗ್ತೀವಿ, ಸ್ಕಾಟ್ಲೆಂಡ್‌ಗೆ ಹೋಗ್ತೀವಿ, ಅಲ್ಲಿ ಹನಿಮೂನ್ ಮಾಡಿದ್ರೆ ಮಾತ್ರ ಹನಿಮೂನ್ ಅಂತ ಅಲ್ಲ. ಎಲ್ಲಿ ಮಾಡಿದ್ರೂ ಆಗೋದೆ ಆಗೋದು. ಯಾಕೆ ಇಲ್ಲಿ ಹನಿಮೂನ್ ಮಾಡಿಕೊಂಡ್ರೆ ಅದು ಹನಿಮೂನ್ ಅಲ್ವಾ? ಸ್ವಿಡ್ಜರ್‌ಲ್ಯಾಂಡ್, ಸ್ಕಾಟ್ಲೆಂಡ್‌ಗೆ ಹೋಗಿ ಹನಿಮೂನ್ ಮಾಡಿಕೊಳ್ಳುವುದು ಏನಿದೆ? ಇಲ್ಲೇ ಹನಿಮೂನ್ ಮಾಡಿಕೊಳ್ಳಬಹುದಲ್ವಾ?" ಎಂದು ಪ್ರಥಮ್ ಹೇಳಿದರು.

ಅಲ್ಲದೇ ಈ ವಿಷಯದಲ್ಲೂ ಸಹ ತನಗೆ ಸುದ್ದಿಯಾಗುವ ಗೀಳು ಇಲ್ಲ ಎಂದ ಪ್ರಥಮ್ ಇತರೆ ಕಲಾವಿದರ ಹಾಗೆ ತಾನು ಹನಿಮೂನ್‌ಗೆ ತೆರಳಿದ ಚಿತ್ರಗಳನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ, ಸರಳವಾಗಿ ಎಲ್ಲವೂ ಸಂಪ್ರದಾಯದ ಪ್ರಕಾರ ನಡೆಯಲಿದೆ, ತಮ್ಮದು ಪಕ್ಕಾ ಹಳ್ಳಿ ಮದುವೆ ಎಂದರು. ಸದ್ಯ ಪ್ರಥಮ್ ಹನಿಮೂನ್ ಕುರಿತು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಟ್ರೋಲ್ ಪೇಜ್‌ಗಳಲ್ಲೂ ಹರಿದಾಡುತ್ತಿದೆ. ಬಹುತೇಕರು ಪ್ರಥಮ್ ನೀಡಿರುವ ಹೇಳಿಕೆ ಸರಿಯಾಗಿದೆ, ಆಡಂಬರ ಬದುಕನ್ನು ಬಿಟ್ಟು ಸಾಮಾನ್ಯನಂತೆ ನಡೆದುಕೊಳ್ಳುವವನೇ, ಬದುಕುವವನೇ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

More from Filmibeat

English summary
I dont like to visit Switzerland or Scotland for my honeymoon says Olle Hudga Pratham. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X