ನಿವೇದಿತಾ ಗೌಡ ಬದುಕಿನಲ್ಲಿ ಬಂದ ಹೊಸ ರಾಜಕುಮಾರ ? ತಲೆ ಕೆಡಿಸಿಕೊಂಡ ಫ್ಯಾನ್ಸ್..!

By ಫಿಲ್ಮಿಬೀಟ್ ಡೆಸ್ಕ್

ಯಾರೇನೇ ಅಂದರು, ಎಷ್ಟೇ ಟೀಕೆ ಟಿಪ್ಪಣಿ ಮಾಡಿದರೂ, ಕಾಲೆಳೆದರೂ, ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಉಫ್ ಎಂದು ಮುಂದೆ ಸಾಗುವುದು ಬಹುಮುಖ ಪ್ರತಿಭೆ ನಿವೇದಿತಾ ಗೌಡ ಅವರ ಮೂಲ ಗುಣ. ಯಾರೇ ಕೂಗಾಡಲಿ, ಬಾತ್‌ ರೂಮ್ ಅಲ್ಲಾಡಲಿ ಎನ್ನುವ ವ್ಯಕ್ತಿತ್ವವನ್ನು ರೂಢಿಸಿಕೊಂಡಿರುವ ನಿವೇದಿತಾ ಗೌಡ ಸದ್ಯ ತಮ್ಮ ಬದುಕಿನಲ್ಲಿ ಹೊಸ ರಾಜಕುಮಾರನನ್ನು ಎದುರು ನೋಡುತ್ತಿದ್ದಾರೆ.

ಹೌದು, ನಿವೇದಿತಾ ಗೌಡ ಸದ್ಯಕ್ಕೆ ಹೊಸದೊಂದು ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಆ ವಿಡಿಯೋ ಜೊತೆ ಅವರು ಬರೆದುಕೊಂಡಿರುವ ಸಾಲುಗಳ ಸದ್ಯ ಅನೇಕರ ಗಮನವನ್ನು ಸೆಳೆಯುತ್ತಿವೆ. ಸಿಂಹಾಸನ, ಕಿರೀಟ, ಮತ್ತು ರಾಜ್ಯವನ್ನು ನನಗಾಗಿ ತರುವ ವ್ಯಕ್ತಿಯ ನಿರೀಕ್ಷೆಯಲ್ಲಿ ನಾನು ಇದ್ದೇನೆ ಎಂದು ನಿವೇದಿತಾ ಗೌಡ ಹೇಳಿದ್ದಾರೆ. ಕಿರೀಟ, ಚಪ್ಪಾಳೆ ಮತ್ತು ನೇಲ್ ಪೆಂಟ್ ಎಮೋಜಿಗಳನ್ನು ಹಾಕಿದ್ದಾರೆ.

I expect a man with a throne crown and kingdom Niveditha Gowda shares cryptic post

ನಿವೇದಿತಾ ಗೌಡ ಅವರ ಈ ಬರಹವನ್ನು ಕಂಡು ಅನೇಕರು ಕಕ್ಕಾಬಿಕ್ಕಿಯಾಗಿದ್ದು ನಿವೇದಿತಾ ಗೌಡ ಅವರ ಬದುಕಿನಲ್ಲಿ ಹೊಸ ವ್ಯಕ್ತಿಯ ಪ್ರವೇಶವಾಗಿರಬಹುದು ಎನ್ನುವ ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಯಾರು ಆ ರಾಜಕುಮಾರ ಎನ್ನುವ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಚಂದನ್ ಶೆಟ್ಟಿಯ ನೆನಪುಗಳನ್ನು ಸಂಪೂರ್ಣವಾಗಿ ಮರೆತು ನಿವೇದಿತಾ ಗೌಡ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಚರ್ಚೆಯನ್ನು ಕೂಡ ಮಾಡುತ್ತಿದ್ದಾರೆ.

ಇನ್ನು ನಿವೇದಿತಾ ಗೌಡ ತಮ್ಮ ಬೆಸ್ಟ್ ಫ್ರೆಂಡ್ ಈ ವಿಚಾರವನ್ನು ಹೇಳಿದ್ದು ಎಂದು ಹೇಳಿದ್ದಾರೆ. ಆದರೆ ಆ ಬೆಸ್ಟ್ ಫ್ರೆಂಡ್ ಯಾರು ಅಂತೇಳಿಲ್ಲ. ಹೀಗಾಗಿಯೇ ಆ ಫ್ರೆಂಡ್ ನಿವೇದಿತಾ ಗೌಡ ಅವರ ರೀಲ್ಸ್ ಪಾರ್ಟನರ್ ವಾಣಿಶ್ರೀ ಇರಬಹುದಾ ಎನ್ನುವ ಪ್ರಶ್ನೆ ಕೂಡ ಹಲವರನ್ನು ಕಾಡುತ್ತಿದೆ. ಇದರ ನಡುವೆ ನಿವೇದಿತಾ ಗೌಡ ಅವರ ಈ ವಿಡಿಯೋವನ್ನು ಮಾಡಿದ್ದು ಯಾರು ಎನ್ನುವ ಹುಳವನ್ನು ಕೂಡ ಅನೇಕರು ಬಿಟ್ಟುಕೊಂಡಿದ್ದಾರೆ.

ಮತ್ತೂ ಕೆಲವರು ನಿವೇದಿತಾ ಗೌಡ ಅವರ ಈ ರಾಜ್ಯ, ಸಿಂಹಾಸನ, ಕಿರೀಟದ ಮಾತುಗಳನ್ನು ಕೇಳಿ ನಿವೇದಿತಾ ಗೌಡ ಅವರ ನಿರೀಕ್ಷೆ ತುಂಬಾನೇ ದೊಡ್ಡದಿದೆ. ಈ ಕಾರಣಕ್ಕೆ ಚಂದನ್ ಶೆಟ್ಟಿ ಅವರಿಂದ ಬಾರ್ಬಿ ಡಾಲ್ ದೂರವಾಗಿರಬಹುದು ಎನ್ನುವ ಶಂಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಚಂದನ್ ಶೆಟ್ಟಿ ಅವರಿಗೆ ನಿವೇದಿತಾ ಗೌಡ ವಿಚ್ಛೇದನ ನೀಡಲು ಈ ನಿರೀಕ್ಷೆಗಳೇ ಕಾರಣ ಇರಬಹುದು ಎನ್ನುತ್ತಿದ್ದಾರೆ. ಸಾಮಾನ್ಯ ವ್ಯಕ್ತಿಗಳಿಗೆಲ್ಲ ನಿವ್ವಿ ಸೊಪ್ಪು ಹಾಕಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಅಂದ್ಹಾಗೇ ನಿವೇದಿತಾ ಗೌಡ ಕಳೆದ ವರ್ಷದ ಅಂತ್ಯಕ್ಕೆ ಹೊಸ ವರ್ಷ ಮತ್ತು ಕ್ರಿಸ್ಮಸ್ ಹಬ್ಬವನ್ನ ಆಚರಿಸಲು ಹೊರ ದೇಶಕ್ಕೆ ಪ್ರವಾಸಕ್ಕೆ ಹೋದಾಗ ಕಟ್ಟು ಮಸ್ತಾದ ಯುವಕನೊಬ್ಬನ ಜೊತೆ ಬಾನಂಗಳದಲ್ಲಿ ಆಕಾಶಬುಟ್ಟಿಯ ಉಡಾವಣೆಯನ್ನು ಮಾಡಿದ್ದರು. ತಮ್ಮ ಮನದ ಆಸೆ-ಆಕಾಂಕ್ಷೆಗಳೆಲ್ಲ ಈಡೇರಲಿ ಎಂಬ ಪ್ರಾರ್ಥನೆಯನ್ನು ಮಾಡಿದ್ದರು. ಹೀಗಾಗಿ ಬಹುಶಃ ಆ ಸಿಕ್ಸ್ ಪ್ಯಾಕ್‌ ಸುಂದರನೇ ನಿವೇದಿತಾ ಗೌಡ ಬದುಕಿನಲ್ಲಿ ಬಂದಿರಬಹುದಾ ಎಂಬ ಚಿಂತೆ ಕೂಡ ಅನೇಕರಲ್ಲಿ ಈಗ ಮನೆ ಮಾಡಿದೆ.

ಇನ್ನುಳಿದಂತೆ ರೀಲ್ಸ್ ಮಾಡುವ ಅಭ್ಯಾಸ ಹೊರತು ಪಡಿಸಿದರೆ ನಿವೇದಿತಾ ಗೌಡ ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮ ಸೇರಿ ಕೆಲ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆ ಪೈಕಿ ಮುದ್ದು ರಾಕ್ಷಸಿ ಕೂಡ ಒಂದು. ಈ ಚಿತ್ರದಲ್ಲಿ ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ನಿವೇದಿತಾ ಗೌಡ ತೆರೆಹಂಚಿಕೊಂಡಿದ್ದಾರೆ.ಈ ವರ್ಷ ಈ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X