ತಾನು ಸತ್ತರೂ ಅಭಿಮಾನಿಗಳನ್ನು ಬಿಡಲಾರೆ ಎಂದ ದುನಿಯಾ ವಿಜಿ
ಇಷ್ಟು ದಿನ ದುನಿಯಾ ವಿಜಯ್ ಅವರು ತಮ್ಮ ನ್ಯಾಚುರಲ್ ನಟನೆಯ ಜೊತೆಗೆ ತಮ್ಮ ಸಿಂಪ್ಲಿಸಿಟಿ ಹಾಗೂ ಉದಾರತೆಯಿಂದ ಎಲ್ಲರ ಹೃದಯದಲ್ಲಿ ಜಾಗ ಪಡೆದುಕೊಂಡು ಅಭಿಮಾನಿಗಳ ನೆಚ್ಚಿನ ರಿಯಲ್ ಹೀರೋ ಆಗಿದ್ದರು.
ಅಂತಹ ಸಿಂಪಲ್ ದುನಿಯಾ ವಿಜಿ ಅವರು ಇದೀಗ ತಮ್ಮ ಅಭಿಮಾನಿಗಳಿಗೆ ಅಭಿಮಾನಿ ಆಗಿದ್ದಾರೆ. ಜೊತೆಗೆ ತಮ್ಮ ಪ್ರೀತಿಯ ಅಭಿಮಾನಿಗಳಿಗೋಸ್ಕರ ಸ್ಪೆಷಲ್ ಗಿಫ್ಟ್ ಅಂತ ತಾವು ನೋವನ್ನು ಅನುಭವಿಸಿದ್ದಾರೆ.[ದುನಿಯಾ ವಿಜಯ್ ಜೊತೆ ಇರೋ ಈ ಹುಡುಗಿ ಯಾರಿರಬಹುದು?]
ಅಂದಹಾಗೆ ದುನಿಯಾ ವಿಜಿ ಅವರು ತನ್ನ ಪಾಲಿನ ದೇವರೆಂದೇ ಭಾವಿಸಿರುವ ತಮ್ಮ ತಾಯಿ ಮತ್ತು ಅಭಿಮಾನಿಗಳ ಮೇಲಿನ ಅಪಾರ ಪ್ರೀತಿಯಿಂದ ಅಭಿಮಾನಿ ದೇವರುಗಳಿಗೋಸ್ಕರ ತಮ್ಮ ಎಡಗೈ ಮೇಲೆ 'ಅವ್ವ' ಹಾಗೂ 'ಅಭಿಮಾನಿ' ಅಂತ ಹಚ್ಚೆ ಹಾಕಿಸಿಕೊಂಡಿದ್ದಾರೆ.
ತಮ್ಮ ಮುಂಬರುವ ಸಿನಿಮಾ 'ಮಾಸ್ತಿ ಗುಡಿ' ಶೂಟಿಂಗ್ ಸೆಟ್ ನಲ್ಲಿ ಸಿಬ್ಬಂದಿಗಳು ಮತ್ತು ಮಕ್ಕಳ ಮುಂದೆಯೇ ದುನಿಯಾ ವಿಜಿ ಅವರು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಟ್ಯಾಟೂ ಹಾಕಿಸಿಕೊಂಡ ನೋವಿದ್ದರೂ ಕೂಡ ಚಿತ್ರೀಕರಣದ ಸಮಯ ಹಾಳು ಮಾಡದೇ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ.[ವಿಜಿ 'ಮಾಸ್ತಿ ಗುಡಿ'ಯಿಂದ ಮತ್ತೊಂದು ಬ್ರೇಕಿಂಗ್ ನ್ಯೂಸ್]
ತಮ್ಮ ತಾಯಿ ಹಾಗೂ ಅಭಿಮಾನಿಗಳಿಗೋಸ್ಕರ ಟ್ಯಾಟೂ ಹಾಕಿಸಿಕೊಂಡಿರುವ ದುನಿಯಾ ವಿಜಿ ಅವರು ಈ ಬಗ್ಗೆ ಏನು ಹೇಳಿದ್ದಾರೆ ಅನ್ನೋದನ್ನ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ತಾಯಿ ಅಂದ್ರೆ ತುಂಬಾನೇ ಇಷ್ಟ
'ನನಗೆ ನನ್ನ ತಾಯಿ ಅಂದ್ರೆ ತುಂಬಾನೇ ಇಷ್ಟ. ನನ್ನ ಜೀವನದಲ್ಲಿ ಪೂಜಿಸೋದು ಮತ್ತು ಆರಾಧಿಸೋದು ಅಂದ್ರೆ ಅದು ನನ್ನ ತಾಯಿಯನ್ನು. ತಾಯಿ ನಂತರ ನಾನು ಹೆಚ್ಚಿನ ಮಹತ್ವ ಕೊಡೋದು ಅದು ನನ್ನ ಅಭಿಮಾನಿಗಳಿಗೆ'. - ದುನಿಯಾ ವಿಜಯ್.[ಅಮರ ಯೋಧನ ಕುಟುಂಬಕ್ಕೆ ಸಹಾಯ ಮಾಡಿದ ದುನಿಯಾ ವಿಜಿ]

ಅಭಿಮಾನಿಗಳ ಟ್ಯಾಟೂ
'ದುನಿಯಾ ಚಿತ್ರದಲ್ಲಿ ನಾನು ತಾಯಿ ಮೇಲಿಟ್ಟಿರುವ ಪ್ರೀತಿ ನೋಡಿ ಅಭಿಮಾನಿಗಳು ಅದನ್ನೇ ಅವರ ಮನಸ್ಸಿನಲ್ಲಿ ಇಟ್ಟುಕೊಂಡು ಅದೇ ತರ ಅವರ ಕೈ, ತಲೆ, ಎದೆ ಮೇಲೆಲ್ಲಾ ಟ್ಯಾಟೂ ಹಾಕಿಸಿಕೊಳ್ಳಲು ಶುರು ಮಾಡಿದ್ರು'. - ದುನಿಯಾ ವಿಜಯ್.[ಅಂದು ದುಷ್ಮನ್, ಇಂದು ಫ್ರೆಂಡ್; ದುನಿಯಾ ವಿಜಿ ಹೇಳ್ತಿರೋದು ಯಾರ ಬಗ್ಗೆ?]

ಪ್ರಾಣ ಸಂಕಟ
'ಅಭಿಮಾನಿಗಳ ಈ ಹುಚ್ಚು ಪ್ರೀತಿ-ಅಭಿಮಾನವನ್ನು ನೋಡಿ ನನಗೆ ಪ್ರಾಣ ಸಂಕಟ ಆಗ್ತಾ ಇತ್ತು. ಅವರು ಟ್ಯಾಟೂ ಹಾಕಿಸಿಕೊಂಡು ನೋವು ಅನುಭವಿಸುವುದನ್ನು ನನ್ನ ಕೈಯಲ್ಲಿ ನೋಡಲಾಗುತ್ತಿರಲಿಲ್ಲ'.- ದುನಿಯಾ ವಿಜಯ್.

ಬುದ್ದಿ ಹೇಳಿ ಆಯ್ತು
'ಸಾಕಷ್ಟು ಬಾರಿ ಅಭಿಮಾನಿಗಳನ್ನು ಭೇಟಿಯಾದಾಗ ಅವರಿಗೆ ಬುದ್ದಿ ಹೇಳಿದ್ದೀನಿ. ಅಭಿಮಾನ ಇರಬೇಕು ಆದರೆ ಇಂತಹ ಹುಚ್ಚು ಅಭಿಮಾನ ಇರಬಾರದು. ಅಂತ ಹಲವಾರು ಬಾರಿ ಬುದ್ದಿವಾದ ಹೇಳಿದ್ದೀನಿ' ಎನ್ನುತ್ತಾರೆ ದುನಿಯಾ ವಿಜಿ.

ಇಬ್ಬರು ನನ್ನ ಎರಡು ಕಣ್ಣುಗಳಿದ್ದಂತೆ
'ನನಗೆ ತಾಯಿ ಪ್ರೀತಿ ಮತ್ತು ಅಭಿಮಾನಿಗಳ ಪ್ರೀತಿ ಎರಡು ಒಂದೇ. ನಾನು ನನ್ನ ತಾಯಿಯನ್ನು ಎಷ್ಟು ಪ್ರೀತಿಸುತ್ತೀನೋ ಅಷ್ಟೇ ಅಭಿಮಾನಿಗಳನ್ನು ಪ್ರೀತಿಸುತ್ತೀನಿ. ನನ್ನ ಜೀವನದ ಎರಡು ಕಣ್ಣುಗಳು ತಾಯಿ ಮತ್ತು ಅಭಿಮಾನಿಗಳು. ಇಂತಹ ತಾಯಿ ಮತ್ತು ಅಭಿಮಾನಿಗಳನ್ನು ಪಡೆದ ನಾನೇ ಧನ್ಯ'.- ದುನಿಯಾ ವಿಜಯ್

ತಾಯಿ ಮತ್ತು ಅಭಿಮಾನಿಗಳಿಗೋಸ್ಕರ
'ನನ್ನ ತಾಯಿಗೆ ಮತ್ತು ನನ್ನ ನೆಚ್ಚಿನ ಅಭಿಮಾನಿಗಳಿಗೆ ಒಂದು ಬೆಲೆ ಕೊಟ್ಟು ಈ ಟ್ಯಾಟೂ ಹಾಕಿಸಿಕೊಂಡಿದ್ದೀನಿ. ನನಗೆ ಈ ನೋವಿಗೆ ಜ್ವರ ಬಂದಿದೆ, ಆದರೆ ಚಿತ್ರೀಕರಣವನ್ನು ಮುಂದೂಡುವುದಿಲ್ಲ. ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತೇನೆ. ನನ್ನ ತಾಯಿ ಮತ್ತು ಅಭಿಮಾನಿಗಳ ನೆನಪು ಸದಾಕಾಲ ಚಿರವಾಗಿ ನನ್ನಲ್ಲಿ ಉಳಿಯಬೇಕು ಅನ್ನೋದಕ್ಕೆ ಈ ಟ್ಯಾಟೂ ಹಾಕಿಸಿಕೊಂಡಿದ್ದೀನಿ'. - ದುನಿಯಾ ವಿಜಯ್.

ನಾನು ಸತ್ತರೂ ಅಭಿಮಾನಿಗಳನ್ನು ಬಿಡೋದಿಲ್ಲ
'ನಾನು ಸತ್ತರೂ ನನ್ನ ಅಭಿಮಾನಿಗಳನ್ನು ಬಿಡೋದಿಲ್ಲ. ಅಭಿಮಾನಿಗಳನ್ನು ಮರೆಯೋಕೆ ಸಾಧ್ಯ ಇಲ್ಲ. ನಾನು ಬೀದಿಯಲ್ಲಿ ಬಿದ್ದು ಒದ್ದಾಟ, ಹೋರಾಟ ಮಾಡಿ ಬಂದಿರೋದು. ನಾನು ಯಾವಾಗ್ಲೂ ಅಭಿಮಾನಿಗಳಿಗೆ ದೊಡ್ಡ ಅಭಿಮಾನಿ. ನಾನು ಯಾವಾಗಲೂ ಹಾನೆಸ್ಟ್ ಆಗಿ ಕೆಲಸ ಮಾಡೋಕೆ ಇಷ್ಟಪಡುತ್ತೀನಿ. ಇಲ್ಲಿಯವರೆಗೆ ಎಲ್ಲಾ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೀನಿ ಅನ್ನೋ ನಂಬಿಕೆ ನನಗಿದೆ. - ದುನಿಯಾ ವಿಜಿ

ಟ್ಯಾಟೂ ಆರ್ಟಿಸ್ಟ್ ದರ್ಶನ್
ಟ್ಯಾಟೂ ತುಂಬಾ ಚೆನ್ನಾಗಿ ಮೂಡಿಬಂದಿದೆ. ನನ್ನ ಫ್ರೆಂಡ್ ದರ್ಶನ್ ಅವರು ಈ ಟ್ಯಾಟೂ ಚೆನ್ನಾಗಿ ಹಾಕಿದ್ದಾರೆ.ಸುಮಾರು 2 ಘಂಟೆಗಳ ಕಾಲ ಹಿಡಿಯಿತು ಈ ಟ್ಯಾಟೂ ಹಾಕಲು- ದುನಿಯಾ ವಿಜಿ


Click it and Unblock the Notifications











