»   » 200 ಕೋಟಿ ಕ್ಲಬ್‌ಗೆ I, ರಜನಿ ಮೀರಿಸ್ತಾರಾ ವಿಕ್ರಮ್?

200 ಕೋಟಿ ಕ್ಲಬ್‌ಗೆ I, ರಜನಿ ಮೀರಿಸ್ತಾರಾ ವಿಕ್ರಮ್?

Posted By:
Subscribe to Filmibeat Kannada

ಸಾಹಸ, ಗಳಿಕೆಯ ದಾಖಲೆಯಲ್ಲಿ ರಜನಿಕಾಂತ್‌ಗೆ ರಜನಿಯೇ ಸಾಟಿ. ರಜನಿ ಸಿನಿಮಾ ಬಂತು ಎಂದರೆ ಉಳಿದೆಲ್ಲ ಚಿತ್ರಗಳ ಬಿಡುಗಡೆಯೇ ನಿಲ್ಲುತ್ತದೆ. ಆದರೆ, ಇದನ್ನು ಮೀರಿಸಲು ವಿಕ್ರಂ ತುದಿಗಾಲಲ್ಲಿ ನಿಂತಿದ್ದಾರೆ. ಅವರ ನಾಯಕತ್ವದ ತಮಿಳಿನ 'ಐ' ಚಲನಚಿತ್ರ ಈಗಾಗಲೇ 200 ಕೋಟಿ ರು. ಗಳಿಸಿದೆ. ಎಂದಿರನ್ ದಾಖಲೆ ಮುರಿಯುವ ನಿರೀಕ್ಷೆಯನ್ನೂ ಹುಟ್ಟಿಸಿದೆ.

ಶಂಕರನ್ ನಿರ್ಮಾಣದ ಎಂದಿರನ್ (ಹಿಂದಿಯಲ್ಲಿ ರೊಬೊಟ್) ಒಟ್ಟೂ ಗಳಿಕೆ 256 ಕೋಟಿ ರುಪಾಯಿ. ಈ ದಾಖಲೆ ಮುರಿಯುವಲ್ಲಿ 20 ದಿನಗಳ ಹಿಂದಷ್ಟೇ ಬಿಡುಗಡೆಯಾಗಿರುವ ಐ ದಾಪುಗಾಲಿಟ್ಟಿದೆ. ಅಷ್ಟೇ ಅಲ್ಲ, ಅಮೆರಿಕ, ಮಲೇಶಿಯಾ, ಯುಕೆ, ಕೆನಡಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿಯೂ ಭರ್ಜರಿ ಗಳಿಕೆ ಸಾಧಿಸುತ್ತಿದೆ. [ಐ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ]

i

ಹಿಂದಿಗೆ ಡಬ್ ಆದ ಐ ಗಳಿಕೆ ಇನ್ನೂ ರೊಬೊಟ್ ಗಳಿಕೆಯ ಹತ್ತಿರಕ್ಕೂ ಬಂದಿಲ್ಲ. ಆದರೂ ಐ ಸಿನಿಮಾ ಮೂಲಕ ವಿಕ್ರಂ ಹಾಗೂ ಆಮಿ ಜಾಕ್ಸನ್ ಈಗಾಗಲೇ ಬಾಲಿವುಡ್‌ ಪ್ರೇಕ್ಷಕರಲ್ಲಿ ಮನೆ ಮಾತಾಗಿದ್ದಾರೆ. ಐ ಸಿನಿಮಾ ಹೀಗೆ ಮುಂದುವರಿದರೆ ರೊಬೊಟ್ ದಾಖಲೆ ಮುರಿಯುವ ನಿರೀಕ್ಷೆಯೂ ಹುಟ್ಟಿದೆ. ರೊಬೊಟ್ ಹಾಗೂ ಐ ಎರಡೂ ತಮಿಳು ಮೂಲದ ಅಪ್ಪಟ ಅನಿಮೇಶನ್ ಚಿತ್ರಗಳು. ಎರಡೂ ಹಾಲಿವುಡ್ ಮಾದರಿಯಲ್ಲಿಯೇ ನಿರ್ಮಾಣಗೊಂಡವು ಎಂಬುದು ವಿಶೇಷ. [ತೆರೆಯ ಮೇಲೆ ಹೊಸ ವಿಕ್ರಮ]

English summary
Shankar's Tamil film, Vikram-starrer 'I' has joined the elite Rs 200 crore collection club.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada