ವಿಚಿತ್ರ ಸಮಸ್ಯೆಯಿಂದ ಬಳಲುತ್ತಿರುವ ನೀಲ್! ಕೊನೆಗೂ ಆ ಆರೋಪಕ್ಕೆ ಉತ್ತರ ಕೊಟ್ಟ ನಿರ್ದೇಶಕ
ಪ್ರಭಾಸ್ 'ಸಲಾರ್' ಫೀವರ್ ಜೋರಾಗಿದೆ. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಪ್ರಶಾಂತ್ ನೀಲ್ ಖಾನ್ಸರ್ ಪ್ರಪಂಚ ನೋಡಲು ಇನ್ನೊಂದು ದಿನ ಬಾಕಿಯಿದೆ. ಆಂಧ್ರ, ತೆಲಂಗಾಣದಲ್ಲೂ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ದೇಶ ವಿದೇಶದಲ್ಲೂ 'ಸಲಾರ್' ಆರ್ಭಟ ನಡೀತಿದೆ.
ಪ್ರಶಾಂತ್ ನೀಲ್, ಪ್ರಭಾಸ್, ಪೃಥ್ವಿರಾಜ್ ಹಾಗೂ ಭುವನ್ ಗೌಡ ಸಿನಿಮಾ ಬಗ್ಗೆ ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನು ಬಿಚ್ಚಿಡುತ್ತಿದ್ದಾರೆ. ಇನ್ನು ಪ್ರಶಾಂತ್ ನೀಲ್ ಬಗ್ಗೆ ಒಂದು ಆರೋಪವಿದೆ. ಎಲ್ಲಾ ಚಿತ್ರಗಳ ಲುಕ್ ಒಂದೇ ತರ ಇರುತ್ತದೆ. ಅವರ ಸಿನಿಮಾ ಸ್ಕ್ರೀನ್ ತುಂಬಾ ಕತ್ತಲು, ಕತ್ತಲು.. ಬರೀ ಮಸಿ, ಧೂಳು. ಅವರು ಬ್ಲ್ಯಾಕ್ ಕಲರ್ ಸಿನಿಮಾ ಬಿಟ್ಟು ಕಲರ್‌ಫುಲ್ ಸಿನಿಮಾ ಮಾಡೋದೇ ಇಲ್ವಾ? ಎನ್ನುವ ಪ್ರಶ್ನೆಗೆ ಕೆಲವರು ಕೇಳುತ್ತಲೇ ಇದ್ದಾರೆ. ಕೊನೆಗೂ ಈ ಬಗ್ಗೆ ನಿರ್ದೇಶಕರು ಮೌನ ಮುರಿದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಮಾತ್ರವಲ್ಲ, ನನ್ನ ಆಪ್ತರು, ಸುತ್ತಾಮುತ್ತಾ ಇರುವವರು ಕೂಡ ಇದೇ ಆರೋಪ ಮಾಡುತ್ತಾರೆ. ಕಪ್ಪು ಬಣ್ಣ ಬಿಟ್ಟು ನೀನು ಹೊರಗೆ ಬರುವುದಿಲ್ಲವಾ? ಎಂದು ಕೇಳುತ್ತಿದ್ದಾರೆ. 'KGF' ಸಿನಿಮಾಗಳ ರೀತಿಯೇ 'ಸಲಾರ್' ಕೂಡ ಕಾಣುತ್ತಿದೆ ಎಂದು ಕೆಲವರು ಹೇಳುತ್ತಾರೆ. ಅದಕ್ಕೆ ಕಾರಣ ನನ್ನ OCD ಇರಬಹುದು ಎಂದು ನೀಲ್ ಹೇಳಿದ್ದಾರೆ.
ನಿಜಕ್ಕೂ ಪ್ರಶಾಂತ್ ನೀಲ್ ಸಿನಿಮಾಗಳ ಬಗ್ಗೆ ಇದೊಂಉ ಆರೋಪ ಕೇಳಿಬರುತ್ತಲೇ ಇತ್ತು. ಚಿತ್ರದ ಪ್ರತಿಫ್ರೇಮ್ ಕಪ್ಪು ಬಣ್ಣದಲ್ಲಿರುತ್ತದೆ. ಚಿನ್ನದ ಗಣಿ, ಕಲ್ಲಿದ್ದಲು ಗಣಿ ಹೀಗೆ ಕತ್ತಲು ತುಂಬಿದ ಲೋಕದಲ್ಲೇ ಕಥೆ ಹೇಳುತ್ತಾರೆ. ಸಿನಿಮಾ ಪೋಸ್ಟರ್‌ಗಳಲ್ಲಿ ನಾಯಕನ ಮುಖ ಕಪ್ಪು ಬಣ್ಣದಲ್ಲೇ ಇರುತ್ತದೆ. ಚಿತ್ರದ ಕಲಾವಿದರ ಹುಟ್ಟುಹಬ್ಬಕ್ಕೆ ಬರುವ ಪೋಸ್ಟರ್‌ಗಳಲ್ಲಿ ಬ್ಯಾಕ್‌ಗ್ರೌಂಡ್ ಕಪ್ಪಾಗಿರುತ್ತದೆ. ಅದನ್ನು ಬಿಟ್ಟು ನೀಲ್ ಹೊರ ಬರುವುದಿಲ್ಲವಾ? KGF, ಸಲಾರ್ ಸಿನಿಮಾಗಳಲ್ಲಿ ಇದನ್ನೇ ನೋಡಿದ್ದೆವು NTR31 ಸಿನಿಮಾ ಪೋಸ್ಟರ್‌ಗಳಲ್ಲೂ ಇದೇ ಮುಂದುವರೆದಿದೆ. ಇದು ಯಾಕೆ ಎಂದು ಕೆಲವರು ಟ್ರೋಲ್ ಕೂಡ ಮಾಡಿದ್ದರು.
ಕೊನೆಗೂ ಈ ಬಗ್ಗೆ ಪ್ರಶಾಂತ್ ನೀಲ್ ಮಾತನಾಡಿದ್ದಾರೆ. ಫಿಲ್ಮ್ ಕ್ರಿಟಿಕ್ ಭಾರಧ್ವಜ್ ರಂಗನ್ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಸಿನಿಮಾಗಳಲ್ಲಿ ಡಾರ್ಕ್ ಶೇಡ್ ಯಾಕೆ? ಸೆಟ್ಟು, ಪ್ರಾಪರ್ಟಿ ಎಲ್ಲವೂ ಡಾರ್ಕ್ ಟೋನ್‌ನಲ್ಲಿ ಯಾಕೆ ಇರುತ್ತದೆ? KGF ಹಾಗೂ ಸಲಾರ್ ಸಿನಿಮಾಗಳು ನೋಡೋಕೆ ಕಾರಣ ಏನು? ಎನ್ನುವುದಕ್ಕೆ ಕಾರಣ ಬಹಿರಂಗಪಡಿಸಿದ್ದಾರೆ. ತಮಗಿರುವ ಒಸಿಡಿ ಅಂದರೆ ಒಬ್ಸಿಸಿವ್ ಕಂಪಲ್ಸಿವ್ ಡಿಸಾರ್ಡರ್ ಕಾರಣದಿಂದ ಹೆಚ್ಚು ಡಾರ್ಕ್ ಥೀಮ್ ಕ್ರಿಯೇಟ್ ಮಾಡುವುದಾಗಿ ಹೇಳಿದ್ದಾರೆ.
"KGF ಮತ್ತು ಸಲಾರ್ ಒಂದೇ ರೀತಿ ಕಾಣಲು ಕಾರಣ ನನಗಿರುವ ಒಸಿಡಿ. ನಾನು ಹೆಚ್ಚು ಬಣ್ಣವಿರುವ ಬಟ್ಟೆಗಳನ್ನು ಧರಿಸಲು ಇಷ್ಟಪಡುವುದಿಲ್ಲ. ಈ ನನ್ನ ವ್ಯಕ್ತಿತ್ವದ ಪ್ರತಿಬಿಂಬವೇ ಪರದೆಯ ಮೇಲೆ ಕಾಣುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ಒಳ್ಳೆಯದು ಇರಬಹುದು, ಕೆಟ್ಟದು ಇರಬಹುದು" ಎಂದಿದ್ದಾರೆ.

ಒಸಿಡಿ ಎಂದರೆ ವೈದ್ಯಕೀಯ ಪರಿಭಾಷೆಯಲ್ಲಿ ಒಬೆಸಿವ್ ಕಂಪಲ್ಸಿವ್ ಡಿಸಾರ್ಡರ್ ಎನ್ನುವ ಅರ್ಥ ಇದೆ. ಈ ಸಮಸ್ಯೆಯಿಂದ ಬಳಲುವ ವ್ಯಕ್ತಿಗಳಿಗೆ ಕೆಲವು ಗೀಳು ಇರುತ್ತದೆ. ಆ ಕಾರಣಕ್ಕೆ ತಾವು ಮಾಡುವ ಕೆಲಸಗಳಲ್ಲಿ ತಮಗೆ ಇಷ್ಟವಾದುದ್ದನ್ನು ಪುನರಾವರ್ತನೆ ಮಾಡುತ್ತಿರುತ್ತಾರೆ. ಪ್ರಶಾಂತ್ ನೀಲ್ ತಮ್ಮ ಸಿನಿಮಾಗಳ ಥೀಮ್ ಕಪ್ಪು ಬಣ್ಣದಲ್ಲಿರಲು ಇದೇ ಕಾರಣ ಎಂದು ಹೇಳಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾನದ 'ಸಲಾರ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲು ಕ್ಷಣಗಣನೆ ಶುರುವಾಗಿದೆ.


Click it and Unblock the Notifications











