ಲೇಡಿಸ್ ಟಾಯ್ಲೆಟ್‌ನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ: "ನನಗೂ ಇಂತಹ ಅವಮಾನ ಆಗಿತ್ತು": ಅನಿತಾ ಭಟ್

ಉಡುಪಿಯ ಖಾಸಗಿ ಕಾಲೇಜ್‌ವೊಂದರ ಲೇಡಿಸ್ ಟಾಯ್ಲೆಟ್‌ನಲ್ಲಿ ವಿದ್ಯಾರ್ಥಿನಿಯರೇ ವಿಡಿಯೋ ಚಿತ್ರೀಕರಣ ಮಾಡಿದ ಪ್ರಕರಣ ಭಾರೀ ಚರ್ಚೆ ಹುಟ್ಟಾಕ್ಕಿದೆ. ಅನ್ಯ ಕೋಮಿನ ವಿದ್ಯಾರ್ಥಿನಿಯರು ಟಾಯ್ಲೆಟ್‌ನಲ್ಲಿ ಮೊಬೈಲ್ ಅಡಗಿಸಿಟ್ಟು ಬೇರೆ ವಿದ್ಯಾರ್ಥಿನಿಯರ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ಆ ವಿಡಿಯೋವನ್ನು ತಮ್ಮ ಕೋಮಿನ ವಿದ್ಯಾರ್ಥಿಗಳಿಗೆ ಕಳುಹಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ನೇತ್ರಜ್ಯೋತಿ ಕಾಲೇಜಿನಲ್ಲಿ ಘಟನೆ ನಡೆದಿದೆ.

ಪ್ರಕರಣ ಸಂಬಂಧ ಕಾಲೇಜಿನಲ್ಲಿ ದೊಡ್ಡ ಗಲಾಟೆ ನಡೆದು ಆಡಳಿತ ಮಂಡಳಿ ಆ ಮೂವರು ವಿದ್ಯಾರ್ಥಿನಿಯರ ವಿರುದ್ಧ ಕ್ರಮ ತೆಗೆದುಕೊಂಡಿದೆ. ಮೂವರನ್ನು ಕಾಲೇಜಿನಿಂದ ಅಮಾನತು‌ ಮಾಡಿ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ವಿಚಾರ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆಗಳು ಕಾಲೇಜಿಗೆ ತೆರಳಿ ಈ ಪ್ರಕರಣದ ಬಗ್ಗೆ ಸೂಕ್ತ ಕ್ರಮಕ್ಕೆ ಆಗ್ರಹಿಸಿವೆ. ಇದೇ ವಿಚಾರವಾಗಿ ನಟಿ ಅನಿತಾ ಭಟ್ ಟ್ವೀಟ್ ಮಾಡಿದ್ದಾರೆ. ಆ ಸಂತ್ರಸ್ತ ವಿದ್ಯಾರ್ಥಿನಿಗೆ ಅವಮಾನವಾದಂತೆ ತಾವಯ ಹೈಸ್ಕೂಲಿನಲ್ಲಿ ಇದ್ದಾಗ ತಮಗೂ ಅನುಮಾನವಾಗಿತ್ತು ಎಂದಿದ್ದಾರೆ.

I have experienced this humiliation, Anita Bhat tweeted after Udupi College incident

ಉಡುಪಿ ಕಾಲೇಜಿನಲ್ಲಿ ನಡೆದಿರುವ ಘಟನೆ ಬಗ್ಗೆ ನೆಟ್ಟಿಗರೊಬ್ಬರ ಟ್ವೀಟ್‌ನ ರೀಟ್ವೀಟ್ ಮಾಡಿ ಅನಿತಾ ಭಟ್ ಕಾಮೆಂಟ್ ಮಾಡಿದ್ದಾರೆ. "ನಾನು ಕೂಡ ಹೈಸ್ಕೂಲಿನಲ್ಲಿದ್ದಾಗ ಇಂತಹ ಅವಮಾನ ಎದುರಿಸಿದ್ದೆ. ಇದೇ ರೀತಿಯದ್ದು ಅಲ್ಲ. ಆದರೆ 'ಕೇರಳ ಸ್ಟೋರಿ' ಸಿನಿಮಾದಲ್ಲಿ ತೋರಿಸಿದಂತೆ ಅದು ಲವ್ ಜಿಹಾದ್ ರೀತಿಯದ್ದಾಗಿತ್ತು. ನಾನು ಖಂಡಿತವಾಗಿಯೂ ಆ ಕಥೆಯನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇನೆ." ಎಂದು ಬರೆದುಕೊಂಡಿದ್ದಾರೆ.

2008ರಲ್ಲಿ 'ಸೈಕೊ' ಸಿನಿಮಾ ಮೂಲಕ ನಟಿ ಅನಿತಾ ಭಟ್ ಸ್ಯಾಂಡಲ್‌ವುಡ್ ಪ್ರವೇಶಿಸಿದರು. ಬಳಿಕ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಟ್ವಿಟರ್‌ನಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಅನಿತಾ ಭಟ್ ಪ್ರಸಕ್ತ ವಿದ್ಯಮಾನಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುತ್ತಾರೆ. ಆಕೆಯ ಟ್ವೀಟ್‌ಗಳ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಲೇ ಇರುತ್ತದೆ. ಯೋಗ ಕಲಿಯುತ್ತಿರುವ ನಟಿ ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ.

More from Filmibeat

English summary
Anita Bhat shocking tweet after Udupi College incident. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X