40 ಲಕ್ಷದ ವ್ಯವಹಾರದ ಕುರಿತು ಪಾನಿಪುರಿ ಕಿಟ್ಟಿ ಸ್ಪಷ್ಟನೆ
Recommended Video

ನಿಪುರಿ ಕಿಟ್ಟಿ 'ಮಾಸ್ತಿಗುಡಿ' ಚಿತ್ರದ ವೇಳೆ 40 ಲಕ್ಷ ರೂಪಾಯಿ ಪೈನಾನ್ಸ್ ಕೊಡಿಸಿದ್ದರು. ಆದ್ರೆ, ಈ ಹಣ ಅವರಿಗೆ ವಾಪಸ್ ಸಿಕ್ಕಿಲ್ಲ. ಹಾಗಾಗಿ ಅಲ್ಲಿಂದ ನಟ ದುನಿಯಾ ವಿಜಯ್ ಮತ್ತು ಕಿಟ್ಟಿ ನಡುವೆ ಮನಸ್ತಾಪ ಉಂಟಾಯಿತು ಎಂಬ ಸುದ್ದಿ ಚರ್ಚೆಯಾಗಿತ್ತು.
ಈ ವಿಷ್ಯಕ್ಕೆ ಸಂಬಂಧಪಟ್ಟಂತೆ ಪಾನಿಪುರಿ ಕಿಟ್ಟಿ ಸ್ಪಷ್ಟನೆ ನೀಡಿದ್ದಾರೆ. ''ನಾನು ಯಾವುದು ದುಡ್ಡು ಕೊಟ್ಟಿಲ್ಲ. ಅನಿಲ್ ಕುಟುಂಬದ ಜೊತೆಯೂ ಮಾತನಾಡಿದ್ದೀನಿ. ಈ ಬಗ್ಗೆ ಅವರಿಗೂ ಹೇಳಿದ್ದೀನಿ. ದುಡ್ಡಿನ ವ್ಯವಹಾರ ಮಾಡಿಲ್ಲ. ಒಂದು ವೇಳೆ ಕೊಟ್ಟಿದ್ರು ನನಗೆ ಕೇಳೋಕೆ ಅಧಿಕಾರ ಇಲ್ಲ. ವಿಜಯ್ ಜೊತೆ ನನಗೆ ದುಡ್ಡಿನ ವ್ಯವಹಾರ ಇಲ್ಲ'' ಎಂದು ಖಚಿತ ಪಡಿಸಿದ್ದಾರೆ.
'ನನಗೆ ಅಷ್ಟು ದೊಡ್ಡ ಮೊತ್ತ ನೀಡುವ ಸೌಲಭ್ಯವಿಲ್ಲ. ನನಗೆ ಸಿನಿಮಾದಲ್ಲಿ ಬಂಡವಾಳ ಹಾಕುವಂತಹ ಆರ್ಥಿಕ ಪರಿಸ್ಥಿತಿಯಲ್ಲೂ ನಾನಿಲ್ಲ. ಇದೆಲ್ಲಾ ಸುಳ್ಳು ಸುದ್ದಿ. ಪ್ರಸಾದ್ ಎಂಬುವರಿಂದಲೇ ಈ ಜಗಳವಾಗಿದೆ ಹೊರತು. ಬೇರೆ ಯಾವ ಕಾರಣವೂ ಇಲ್ಲ'' ಎಂದು ಕಿಟ್ಟಿ ಹೇಳಿದ್ದಾರೆ.

ಇನ್ನು ಮಾರುತಿ ಗೌಡ ಹಲ್ಲೆ ಪ್ರಕರಣದಲ್ಲಿ ನಾನು ಎಲ್ಲಿಯೂ ರಾಜಿಯಾಗಿಲ್ಲ. ನಾನೂ ಕಾನೂನು ಹೋರಾಟ ಮುಂದುವರಿಸುತ್ತೇನೆ. ನಮ್ಮ ವಕೀಲರ ಜೊತೆ ಸಂಪರ್ಕದಲ್ಲಿದ್ದೇನೆ'' ಎಂದರು.
ಈ ಮೂಲಕ ಇಂದು ಬೆಳಿಗ್ಗೆಯಿಂದ ದೊಡ್ಡ ಸಂಚಲನ ಸೃಷ್ಟಿಸಿದ್ದ 40 ಲಕ್ಷ ರೂಪಾಯಿಯ ವ್ಯವಹಾರದ ಸುದ್ದಿಗೆ ತೆರೆ ಬಿದ್ದಿದೆ.


Click it and Unblock the Notifications











