ಫೇಕ್ ಐಡಿ ಮಾಡಿ ಕಾಮೆಂಟ್ ಮಾಡ್ತಿದ್ದ 12 ಜನರನ್ನು ಜೈಲಿಗೆ ಕಳುಹಿಸಿದ್ದೇನೆ ಯಾರಿಗೂ ಗೊತ್ತಿಲ್ಲ ಎಂದ ಜಗ್ಗೇಶ್

ನವರಸ ನಾಯಕ ಜಗ್ಗೇಶ್ ಕನ್ನಡ ಚಲನಚಿತ್ರರಂಗ ಕಂಡ ಪ್ರತಿಭಾವಂತ ನಟರಲ್ಲಿ ಓರ್ವರು. ತೊಂಬತ್ತರ ದಶಕರಲ್ಲಿಯೇ ದೊಡ್ಡ ದೊಡ್ಡ ಸ್ಟಾರ್‌ಗಳ ನಡುವೆ ಸ್ಟಾರ್‌ ಆಗಿ ಬೆಳೆದ ಜಗ್ಗೇಶ್ ಇಂದಿಗೂ ಸಹ ಸ್ಟಾರ್ ಅಗಿ ಮಿಂಚುತ್ತಿದ್ದಾರೆ. ಇನ್ನು ಜಗ್ಗೇಶ್ ವಯಸ್ಸಾಯಿತು ಪೋಷಕ ಪಾತ್ರಗಳಲ್ಲಿ ನಟಿಸೋಣ ಎಂದು ಯೋಚಿಸದೇ ಈಗಲೂ ಸಹ ಲೀಡ್ ಪಾತ್ರಗಳಲ್ಲಿಯೇ ನಟಿಸುತ್ತಾ ರೇಸ್‌ನಲ್ಲಿ ಉಳಿದುಕೊಂಡಿದ್ದಾರೆ.

ಸದ್ಯ ಜಗ್ಗೇಶ್ ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಿಸಿರುವ ಚಿತ್ರದಲ್ಲಿಯೂ ಸಹ ಜಗ್ಗೇಶ್ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಹೌದು, ಹೊಂಬಾಳೆ ಫಿಲ್ಮ್ಸ್ ಹಾಗೂ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಕಾಂಬಿನೇಶನ್‌ನ ಮೂರನೇ ಚಿತ್ರ ರಾಘವೇಂದ್ರ ಸ್ಟೋರ್ಸ್ ಚಿತ್ರಕ್ಕೆ ಜಗ್ಗೇಶ್ ನಾಯಕನಾಗಿದ್ದಾರೆ.

I have sent 12 people to jail who have done bad comment about mesays Jaggesh

ಯಶ್, ಯುವ ರಾಜ್‌ಕುಮಾರ್, ಪ್ರಭಾಸ್, ಶ್ರೀಮುರಳಿ, ಪೃಥ್ವಿರಾಜ್ ಸುಕುಮಾರನ್ ರೀತಿಯ ಯುವ ನಟರಿಗೆ ಹಣ ಹೂಡುತ್ತಿರುವ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿರುವ ಏಕೈಕ ಹಿರಿಯ ನಟ ಎಂದು ಜಗ್ಗೇಶ್ ಕರೆಸಿಕೊಂಡಿದ್ದಾರೆ. ಹೀಗೆ ಜಗ್ಗೇಶ್ ನಟಿಸಿರುವ ದೊಡ್ಡ ಚಿತ್ರ ರಾಘವೇಂದ್ರ ಸ್ಟೋರ್ಸ್ ಇದೇ ಏಪ್ರಿಲ್ 28ರಂದು ತೆರೆಗೆ ಬರಲಿದ್ದು, ಈ ಚಿತ್ರದ ಪ್ರಚಾರದ ಸಲುವಾಗಿ ಜಗ್ಗೇಶ್ ಹಲವು ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ.

ನಮ್ಮ ಕನ್ನಡ ಫಿಲ್ಮಿಬೀಟ್ ತಂಡ ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿದ ಜಗ್ಗೇಶ್ ಚಿತ್ರದ ಕುರಿತು ಮಾತನಾಡಿದರು ಹಾಗೂ ಸಾಮಾಜಿಕ ಜಾಲತಾಣದ ಬಗ್ಗೆಯೂ ಸಹ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಹೌದು, ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವ ನಟ. ಇದರ ಕುರಿತು ಚರ್ಚಿಸಿದ ಜಗ್ಗೇಶ್ ಸಾಮಾಜಿಕ ಜಾಲತಾಣವನ್ನು ಯಾರು ಕಂಡು ಹಿಡಿದ್ರೋ ಆತನ ಕಾಲಿಗೆ ಬೀಳಬೇಕು ಎಂದರು. ರಾಜ್ಯದ ಮೂಲೆ ಮೂಲೆಗಳಲ್ಲಿ ಇರುವ ತನ್ನ ಅಭಿಮಾನಿಗಳು ಒಂದೇ ವೇದಿಕೆಯಲ್ಲಿ ಸಿಗುವಂತೆ ಮಾಡಿದ ಆತ ಪುಣ್ಯಾತ್ಮ ಎಂದು ಜಗ್ಗೇಶ್ ಹೊಗಳಿದರು.

ಇನ್ನು ತಮಗೆ ಹೆಚ್ಚೇನೂ ಕೆಟ್ಟ ಕಾಮೆಂಟ್‌ಗಳು ಬರುವುದಿಲ್ಲ ಎಂದ ಜಗ್ಗೇಶ್ 99% ಪಾಸಿಟಿವ್ ಕಾಮೆಂಟ್ ಇರುತ್ತವೆ, ಇನ್ನೊಂದು % ಮಾತ್ರ ನೆಗೆಟಿವ್ ಕಾಮೆಂಟ್ ಎಂದರು. ಅಲ್ಲದೇ ಈ ಕಾಮೆಂಟ್‌ಗಳನ್ನು ಮಾಡುವವರು ನಕಲಿ ಖಾತೆ ಸೃಷ್ಟಿಸಿಕೊಂಡು ಬಂದಿರುತ್ತಾರೆ. ಅವರು ನಿಜವಾದ ಗುರುತಿನೊಂದಿಗೆ ಬಂದರೆ ಅವರನ್ನು ಹಿಡಿಯುವುದು ನನಗೆ ಎರಡು ನಿಮಿಷಗಳ ಕೆಲಸ, ಅಷ್ಟು ನೆಟ್‌ವರ್ಕ್ ಇದೆ ನನಗೆ ಎಂದ ಜಗ್ಗೇಶ್ ಕಳೆದ ನಾಲ್ಕು ತಿಂಗಳುಗಳಲ್ಲಿ 12 ಜನರನ್ನು ಜೈಲಿಗೆ ಕಳುಹಿಸಿದ್ದೇನೆ, ಅದು ಯಾರಿಗೂ ಸಹ ತಿಳಿದಿಲ್ಲ ಎಂದು ಜಗ್ಗೇಶ್ ಹೇಳಿಕೊಂಡರು.

I have sent 12 people to jail who have done bad comment about mesays Jaggesh

ಅಲ್ಲದೇ ಈ ರೀತಿ ಫೇಕ್ ಐಡಿ ಮಾಡಿಕೊಂಡು ಚಿತ್ರರಂಗಕ್ಕೆ ಸಂಬಂಧಪಟ್ಟ ಯಾರೂ ಸಹ, ಸಿನಿ ಪ್ರೇಮಿಗಳೂ ಸಹ ಕಾಮೆಂಟ್ ಮಾಡುವುದಿಲ್ಲ, ಇದೆಲ್ಲಾ ರಾಜಕೀಯದವರ ಕೆಲಸ. ಈತ ಆ ಪಕ್ಷಕ್ಕೆ ಸೇರಿದವನು ಎಂದು ಎದುರಾಳಿಗಳು ಮಾಡುವ ಕೆಲಸ ಎಂದು ಹೇಳಿಕೆ ನೀಡಿ ಸಿನಿಮಾ ಕ್ಷೇತ್ರಕ್ಕೂ ತನಗೆ ನೆಗೆಟಿವ್ ಕಾಮೆಂಟ್ ಮಾಡುವವರಿಗೂ ಯಾವುದೇ ಸಂಬಂಧವಿಲ್ಲ ಎಂದರು.

ಕಾಮೆಂಟ್‌ಗಳು ನನಗೆ ಇಷ್ಟವಾಗಿಲ್ಲ ಎಂದರೆ ಬ್ಲಾಕ್ ಮಾಡ್ತೇನೆ, ಇನ್ನೂ ಹೆಚ್ಚಿಗೆ ಕಾಮೆಂಟ್ ಮಾಡಿದರೆ ರಿಪೋರ್ಟ್ ಮಾಡ್ತೀನಿ, ಅತಿಯಾಗಿ ಕೆಟ್ಟದಾಗಿ ಕಾಮೆಂಟ್ ಮಾಡಿದರೆ ಅಂಥವರನ್ನು ಹುಡುಕಿಬಿಡ್ತೇನೆ ಎಂದು ಜಗ್ಗೇಶ್ ಹೇಳಿಕೊಂಡರು. ಈ ಮೂಲಕ ಜಗ್ಗೇಶ್ ತಾನು ಸೈಬರ್‌ನಲ್ಲಿ ಸಿಕ್ಕಾಪಟ್ಟೆ ಸ್ಟ್ರಾಂಗ್ ಎಂದು ತಿಳಿಸಿದರು.

More from Filmibeat

English summary
I have sent 12 people to jail who have done bad comment about mesays Jaggesh. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X