Sreeleela: 'ಕಿಸ್' ಬೆಡಗಿ ಶ್ರೀಲೀಲಾಗೆ ಯಾವ ಹುಡುಗನೂ ಪ್ರಪೋಸ್ ಮಾಡಿಲ್ಲವಂತೆ!

ಕನ್ನಡದ ನಟಿ ಶ್ರೀಲೀಲಾ ತೆಲುಗು ಭಾಷೆಯಲ್ಲಿ ಮಿಂಚುತ್ತಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ 'ಸ್ಕಂದ' ಸಿನಿಮಾ ಚಿತ್ರದ ಪ್ರೀ-ರಿಲೀಸ್ ಸಮಾರಂಭದಲ್ಲಿ ತಮ್ಮ ವೈಯಕ್ತಿಕ ಜೀವನದ ಕೆಲವು ವಿಷಯವನ್ನು ಹೊರಹಾಕಿದ್ದಾರೆ.

ನಟಿ ಶ್ರೀಲೀಲಾ ಕನ್ನಡದ ಕಿಸ್ ಸಿನಿಮಾದಿಂದ ಖ್ಯಾತಿ ಪಡೆದವರು. ಸದ್ಯ ತಮ್ಮ ಸ್ಕಂದ ಸಿನಿಮಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾದಲ್ಲಿ ನಟ ರಾಮ್ ಪೋತಿನೇನಿ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಸಿನಿಮಾವು ಸೆಪ್ಟಂಬರ್ 15ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

actress-sreeleela

ಯಾವ ಹುಡುಗನೂ ಪ್ರಪೋಸ್ ಮಾಡಿಲ್ಲ!

ಸ್ಕಂದ ಪ್ರೀ-ರಿಲೀಸ್ ಸಮಾರಂಭದಲ್ಲಿ ಮಾತನಾಡಿದ ಶ್ರೀಲೀಲಾ, ಇದುವರೆಗೂ ತನಗೆ ಯಾವು ಹುಡುಗರಿಂದಲೂ ಯಾವುದೇ ಲವ್ ಪ್ರಪೋಸಲ್ ಬಂದಿಲ್ಲ ಎಂದು ಹೇಳಿಕೊಂಡಿದ್ದಾರೆ. "ಪ್ರಾಮಾಣಿಕವಾಗಿ ಹೇಳುವುದಾದರೇ, ನನಗೆ ಇದುವರೆಗೆ ಯಾವುದೇ ಪ್ರಸ್ತಾಪ ಬಂದಿಲ್ಲ. ಬಹುಶಃ ನನ್ನ ಹೊಸ ಚಿತ್ರ 'ಸ್ಕಂದ' ಬಿಡುಗಡೆಯಾದ ನಂತರ ನನಗೆ ಪ್ರಪೋಸಲ್‌ಗಳು ಬರಬಹುದು. ಏಕೆಂದರೆ ಈ ಸಿನಿಮಾದಲ್ಲಿ ನನ್ನ ಪಾತ್ರ ಸಾಕಷ್ಟು ಶೇಡ್ಸ್ ಹೊಂದಿದೆ" ಎಂದು ಹೇಳಿಕೊಂಡಿದ್ದಾರೆ.

ಸಿನಿಮಾದಲ್ಲಿ ಡ್ಯಾನ್ಸ್ ಮಾಡುವಾಗ ಸಹಕಾರ ನೀಡಿದಕ್ಕಾಗಿ ಸಿನಿಮಾದ ನಾಯಕ ನಟ ರಾಮ್ ಪೋತಿನೇನಿ ಅವರಿಗೆ ಧನ್ಯವಾದ ಹೇಳಿದ್ದಾರೆ. " ಅವರ ಸಹಾಯ ನನ್ನ ಉತ್ಸಾಹವನ್ನು ಹೆಚ್ಚಿಸಿತು. ನಾನು ಕಷ್ಟದ ಸ್ಟೆಪ್‌ಗಳನ್ನು ಸುಲಭವಾಗಿ ಮತ್ತು ಸರಿಯಾಗಿ ಮಾಡಲು ಸಹಾಯ ಮಾಡಿತು" ಎಂದು ಶ್ರೀಲೀಲಾ ಹೇಳಿದ್ದಾರೆ.

ಜೊತೆಗೆ ಒಮ್ಮೆಲೇ ಹಲವು ಸಿನಿಮಾಗಳಲ್ಲಿ ಬ್ಯುಸಿ ಇರುವುದರಿಂದ ಇಲ್ಲಿ ನಾಯಕ ಮತ್ತು ನಿರ್ದೇಶಕ ಬೋಯಾಪಟಿ ಶೀನು ಅವರು ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ನೆನಪಿಸಿಕೊಂಡಿದ್ದಾರೆ. "ನಾನು ಅನೇಕ ಚಿತ್ರಗಳ ಚಿತ್ರೀಕರಣದಲ್ಲಿ ಸ್ವಲ್ಪ ಸುಸ್ತಾಗಿ ಸೆಟ್‌ಗೆ ಬರುತ್ತಿದ್ದೆ. ಆದರೆ, ಅವರು ನನ್ನ ಪರಿಸ್ಥಿತಿ ಅರ್ಥಮಾಡಿಕೊಂಡು ನನಗೆ ಸಹಾಯ ಮಾಡಿದರು. ಜೊತೆಗೆ ಪ್ರೋತ್ಸಾಹಿಸಿದ್ದಾರೆ. ಅವರ ಸಹಕಾರಕ್ಕೆ ಧನ್ಯವಾದಗಳು" ಎಂದು ಮುದ್ದು ಚೆಲುವೆ ತಿಳಿಸಿದ್ದಾರೆ.

actress-sreeleela

ಶ್ರೀಲೀಲಾ ಟಾಲಿವುಡ್‌ನಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ಪವನ್ ಕಲ್ಯಾಣ್, ಮಹೇಶ್ ಬಾಬು, ರವಿತೇಜಾ ಮತ್ತು ಇತರ ಟಾಪ್ ಸ್ಟಾರ್‌ಗಳೊಂದಿಗೆ ಪರದೆ ಹಂಚಿಕೊಳ್ಳುತ್ತಿದ್ದಾರೆ. ಕನ್ನಡತಿ ಶ್ರೀಲೀಲಾ ಅವರ ಪ್ರತಿಭೆಗೆ ಖ್ಯಾತ ನಟ ಬಾಲಯ್ಯ ಕೂಡ ಮೆಚ್ಚಿದ್ದಾರೆ.

ಸ್ಕಂದ ಕಾರ್ಯಕ್ರಮದಲ್ಲಿ ನಟ ಬಾಲಕೃಷ್ಣ ಮಾತನಾಡಿ ಚಿತ್ರಂಗದಲ್ಲಿನ ತೆಲುಗು ನಟಿಯರ ಕೊರತೆಯನ್ನು ಉಲ್ಲೇಖಿಸಿದ್ದಾರೆ. ಶ್ರೀಲೀಲಾ ಅವರ ಬದ್ಧತೆ ಮತ್ತು ಪ್ರತಿಭೆಯನ್ನು ಶ್ಲಾಘಿಸಿದ ಅವರು ಕಡಿಮೆ ಸಮಯದಲ್ಲಿ ಹೆಸರಾಂತ ನಟರೊಂದಿಗೆ ಕೆಲಸ ಮಾಡಿರುವುದನ್ನು ಮೆಚ್ಚಿದ್ದಾರೆ.

'ಸ್ಕಂದ' ಚಿತ್ರದ ಟ್ರೈಲರ್

ಬಹು ನಿರೀಕ್ಷಿತ 'ಸ್ಕಂದ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ರಾಮ್ ಪೋತಿನೇನಿ ಮತ್ತು ಶ್ರೀಲೀಲಾ ನಟಿಸಿರುವ ಈ ಚಿತ್ರವು ಔಟ್ ಮತ್ತು ಔಟ್ ಮಾಸ್ ಎಂಟರ್ಟೈನರ್ ಆಗಿದೆ. ನಿರ್ದೇಶಕ ಬೋಯಾಪಟಿ ಶೀನು ಅವರ ಸ್ಟೈಲ್ ಟ್ರೇಲರ್‌ನಲ್ಲಿ ಎದ್ದು ಕಾಣುತ್ತಿದೆ. ರಾಮ್ ಪೋತಿನೇನಿ ಪಕ್ಕ ರಫ್ ಅಂಡ್ ಟಫ್ ಕ್ಯಾರೆಕ್ಟರ್‌ನಲ್ಲಿ ಮಿಂಚಿದ್ದಾರೆ. ಮಾಸ್ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಕೂಡ ಇಡಲಾಗಿದೆ.

ಟ್ರೈಲರ್ ಮುಖ್ಯವಾಗಿ ರಾಮ್ ಪೋತಿನೇನಿ ಪಾತ್ರದ ಮೇಲೆ ಕೇಂದ್ರೀಕರಿಸಿದೆ. ಆದರೂ ಶ್ರೀಲೀಲಾ, ಸಾಯಿ ಮಂಜ್ರೇಕರ್, ಶ್ರೀಕಾಂತ್ ಮತ್ತು ಪ್ರಿನ್ಸ್ ಸೇರಿದಂತೆ ಎಲ್ಲಾ ಪ್ರಮುಖ ನಟರನ್ನು ಪರಿಚಯಿಸಿದೆ. ಆಕ್ಷನ್ ಸೀಕ್ವೆನ್ಸ್‌ಗಳಲ್ಲಿ, ರಾಮ್‌ ಪೋತಿನೇನಿ ಗಮನಸ ಸೆಳೆಯುತ್ತಿದ್ದಾರೆ.

ತೆಲುಗಿನಲ್ಲಿ ಶ್ರೀಲೀಲಾ

ಶ್ರೀಲೀಲಾ 'ಪೆಲ್ಲಿ ಸಂದಡ್' ಮೂಲಕ ತೆಲುಗು ಸಿನಿಮಾ ರಂಗಕ್ಕೆ ಕಾಲಿರಿಸಿದರು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡದಿದ್ದರೂ, ಶ್ರೀಲೀಲಾ ಅವರ ಅಭಿನಯ, ನೃತ್ಯ ಪ್ರೇಕ್ಷಕರ ಗಮನವನ್ನು ಸೆಳೆಯಿತು. ಆದಾದ ನಂತರ 'ಧಮಾಕಾ'ದಲ್ಲಿ ಮಾಸ್ ಮಹಾರಾಜ ರವಿತೇಜಾ ಅವರ ಜೊತೆಗೆ ಕಾಣಿಸಿಕೊಂಡರು. ಇದು ಗಲ್ಲಾಪೆಟ್ಟಿಗೆಯ ಯಶಸ್ಸು ದಾಖಲಿಸಿ, ತೆಲುಗಿನಲ್ಲಿ ಶ್ರೀಲೀಲಾಗೆ ಭದ್ರ ಬುನಾದಿ ಹಾಕಿಕೊಟ್ಟಿದೆ. ಪವನ್ ಕಲ್ಯಾಣ್, ಮಹೇಶ್ ಬಾಬು, ರವಿತೇಜಾ ಮತ್ತು ಇತರ ಟಾಪ್ ಸ್ಟಾರ್‌ಗಳೊಂದಿಗೆ ಪರದೆ ಹಂಚಿಕೊಳ್ಳುತ್ತಿದ್ದಾರೆ. ಅವರ ಕೈಯಲ್ಲಿ ಹತ್ತು ಸಿನಿಮಾಗಳಿವೆ.

More from Filmibeat

English summary
I haven't got any proposal so far says actress Sreeleela.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X