ಸಾಯುವ ಮುನ್ನಾ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟ ಜಯಶ್ರೀ

ನಟಿ, ಬಿಗ್‌ಬಾಸ್ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ ನಿನ್ನೆ ಆತ್ಮಹತ್ಯೆ ಮಾಡಿಕೊಂಡು ಮರಣ ಹೊಂದಿದ್ದಾರೆ. ಜಯಶ್ರೀ ಸಾವಿಗೆ ಅವರ ಮಾನಸಿಕ ಖಿನ್ನತೆಯೇ ಕಾರಣ ಎನ್ನಲಾಗುತ್ತಿದೆ.

Recommended Video

Jayasree ಮತ್ತು ತಾಯಿಯನ್ನು ಮಳೆಯಲ್ಲಿ ಮನೆಯಿಂದ ಹೊರಗೆ ದಬ್ಬಿದ್ದ ಮಾವ | Oneindia Kannada

ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಜಯಶ್ರೀ ಅವರ ಡೈರಿ ದೊರೆತಿದ್ದು, ಡೈರಿಯಲ್ಲಿ ಜಯಶ್ರೀ ಅವರ ಬದುಕಿದೆ ಸಂಬಂಧಿಸಿದ, ಅವರ ಮಾನಸಿಕ ಸಮಸ್ಯೆಗಳಿಗೆ ಉದಾಹರಣೆ ಆಗಬಹುದಾದ ಹಲವು ಅಂಶಗಳು ಇವೆ.

ಜಯಶ್ರೀ ಬರೆದಿದ್ದಾರೆ ಎನ್ನಲಾಗುತ್ತಿರುವ ಪತ್ರವೊಂದರಲ್ಲಿ ಜಯಶ್ರಿ ತಾವು ಮಾಡಿದ ತಪ್ಪಿಗಾಗಿ ಬಹುವಾಗಿ ಪಶ್ಚತ್ತಾಪ ಪಟ್ಟಿದ್ದು ಗೊತ್ತಾಗುತ್ತಿದೆ.

ನನ್ನ ಮಾವನ ಬಗ್ಗೆ ಮಾಧ್ಯಮಗಳಿಗೆ ಸುಳ್ಳು ಹೇಳಿದ್ದೆ: ಜಯಶ್ರೀ

ನನ್ನ ಮಾವನ ಬಗ್ಗೆ ಮಾಧ್ಯಮಗಳಿಗೆ ಸುಳ್ಳು ಹೇಳಿದ್ದೆ: ಜಯಶ್ರೀ

'ನನ್ನ ಮಾವ ಗಿರೀಶ್‌ಗೆ ನಾನು ಸಾಕಷ್ಟು ತೊಂದರೆ ಕೊಟ್ಟಿದ್ದೇನೆ. ನಾನು ಅವರ ಮೇಲೆ ಹಲವು ಸುಳ್ಳು ಆರೋಪಗಳನ್ನು ಮಾಡಿದ್ದೇನೆ. ನನ್ನ ಮಾವ ಹಾಗೂ ಕುಟುಂಬದ ಸಲಹೆಗಳನ್ನು ನಾನು ಸ್ವೀಕರಿಸಲಿಲ್ಲ. ನನ್ನ ಮಾವನ ಬಗ್ಗೆ ಮಾಧ್ಯಮಗಳ ಬಳಿ ಸುಳ್ಳು ಹೇಳಿದೆ. ನನ್ನ ಮಾವನನ್ನು ಸಂಕಷ್ಟಕ್ಕೆ ದೂಡಿದೆ. ಅವರ ಹಸರು ಕೆಡಿಸಲು ಹೋಗಿ ನಾನೇ ಹೆಸರು ಕೆಡಿಸಿಕೊಂಡೆ' ಎಂದು ಬರೆದಿದ್ದಾರೆ ಜಯಶ್ರೀ.

ನನ್ನ ಸಮಸ್ಯೆಗಳಿಗೆ ಮಾವ ಗಿರೀಶ್ ಕಾರಣವಲ್ಲ: ಜಯಶ್ರೀ

ನನ್ನ ಸಮಸ್ಯೆಗಳಿಗೆ ಮಾವ ಗಿರೀಶ್ ಕಾರಣವಲ್ಲ: ಜಯಶ್ರೀ

'ನನ್ನ ಸಮಸ್ಯೆಗಳಿಗೆ ನಮ್ಮ ಮಾವ ಗಿರೀಶ್ ಎಂದಿಗೂ ಕಾರಣರಲ್ಲ. ನನ್ನ ಸಮಸ್ಯೆಗಳಿಗೆ ನಾನೇ ಕಾರಣ. ನಾನು ಖಿನ್ನತೆಯಿಂದ ಹೊರಗೆ ಬರಲು ಮತ್ತೆ ಅವರು ಸಹಾಯ ಮಾಡುತ್ತಿದ್ದಾರೆ. ನನ್ನ ಕೋಪ, ಹತಾಶ ಭಾವ, ಅತಿಯಾದ ಯೋಚನೆಗಳಿಂದಾಗಿ ನಾನು ಖಿನ್ನತೆಗೆ ಒಳಗಾದೆ. ನನ್ನ ವೈಫಲ್ಯಗಳಿಗೆ ನಾನೇ ಕಾರಣ, ಕ್ಷಮಿಸಿಬಿಡಿ' ಎಂದು ಬರೆದುಕೊಂಡಿದ್ದಾರೆ ಜಯಶ್ರೀ.

2019 ರಲ್ಲಿ ಮಾವ ಗಿರೀಶ್ ವಿರುದ್ಧ ದೂರು ದಾಖಲಿಸಿದ್ದರು

2019 ರಲ್ಲಿ ಮಾವ ಗಿರೀಶ್ ವಿರುದ್ಧ ದೂರು ದಾಖಲಿಸಿದ್ದರು

2019 ರಲ್ಲಿ ಜಯಶ್ರೀ ತಮ್ಮ ಮಾವ ಗಿರೀಶ್‌ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆಸ್ತಿಗಾಗಿ ನನ್ನನ್ನು ನನ್ನ ತಾಯಿಯನ್ನು ಮನೆಯಿಂದ ಹೊರಗೆ ಹಾಕಿದ್ದಾರೆ. ನನ್ನ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ನಮ್ಮ ಮಾವನೊಬ್ಬ ಹುಚ್ಚ ಎಂದೆಲ್ಲಾ ಆರೋಪ ಮಾಡಿದ್ದರು. ಆದರೆ ಈಗ ಅದೆಲ್ಲವೂ ಸುಳ್ಳು ಎಂದು ಡೈರಿಯಲ್ಲಿ ಬರೆದಿರುವುದು ಗೊತ್ತಾಗಿದೆ.

ಗಿರೀಶ್ ಅವರೇ ಚಿಕಿತ್ಸೆ ಕೊಡಿಸುತ್ತಿದ್ದರು

ಗಿರೀಶ್ ಅವರೇ ಚಿಕಿತ್ಸೆ ಕೊಡಿಸುತ್ತಿದ್ದರು

ಬಿಗ್‌ ಬಾಸ್ 3 ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಜಯಶ್ರೀ ರಾಮಯ್ಯ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅವರನ್ನು ಗಿರೀಶ್ ಅವರೇ ಸಂಧ್ಯಾಕಿರಣ ಪುನರ್ವಸತಿ ಕೇಂದ್ರದಲ್ಲಿ ಕೌನ್ಸಲಿಂಗ್‌ಗೆ ಸೇರಿಸಿದ್ದರು. ಜಯಶ್ರೀ ಮಾತ್ರವಲ್ಲದೆ ಆಕೆಯ ತಾಯಿಯನ್ನು ಸಹ ಕೌನ್ಸಲಿಂಗ್‌ಗೆ ಸೇರಿಸಿದ್ದರಂತೆ. ಆದರೆ ಜಯಶ್ರೀ ಸಂಧ್ಯಾಕಿರಣ ಪುನರ್ವಸತಿ ಕೇಂದ್ರದಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

More from Filmibeat

English summary
Jayashree Ramaiah confess in her dairy that she lied about her mother's brother Girish to media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X