For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಇಬ್ಬರಲ್ಲಿ ತಾನು ಯಾರಿಗೆ ಫ್ಯಾನ್ ಎಂದು ಬಿಚ್ಚಿಟ್ಟ ಝೈದ್ ಖಾನ್

  |

  ರಾಜಕಾರಣಿ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಬನಾರಸ್ ಎಂಬ ಪ್ಯಾನ್ ಇಂಡಿಯಾ ಚಿತ್ರದ ಮೂಲಕ ಸಿನಿ ಕ್ಷೇತ್ರಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇನ್ನು ಈ ಚಿತ್ರಕ್ಕೆ ಕೊನೆಯದಾಗಿ ಬೆಲ್ ಬಾಟಮ್ ರೀತಿಯ ಬ್ಲಾಕ್ ಬಸ್ಟರ್ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ಜಯತೀರ್ಥ ಆಕ್ಷನ್ ಕಟ್ ಹೇಳಿದ್ದು ಎನ್ ಕೆ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಚಿತ್ರದಲ್ಲಿ ರಾಬರ್ಟ್ ಹಾಗೂ ಪಂಚತಂತ್ರ ಖ್ಯಾತಿಯ ನಟಿ ಸೋನಲ್ ಮೊಂಟೆರೋ ನಾಯಕಿಯಾಗಿ ಅಭಿನಯಿಸಿದ್ದಾರೆ.

  ಇನ್ನು ನಿನ್ನೆಯಷ್ಟೇ ( ಸೆಪ್ಟೆಂಬರ್ 26 ) ಈ ಚಿತ್ರದ ಟ್ರೈಲರ್ ರಿಲೀಸ್ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ಬೆಂಗಳೂರಿನಲ್ಲಿ ನಡೆಯಿತು. ರವಿಚಂದ್ರನ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಈ ಕಾರ್ಯಕ್ರಮವೂ ಸಹ ಮನರಂಜನಾತ್ಮಕವಾಗಿತ್ತು. ಟ್ರೈಲರ್ ಬಿಡುಗಡೆಗೊಂಡ ನಂತರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಝೈದ್ ಖಾನ್ ಅವರಿಗೆ ಹಲವಾರು ಪ್ರಶ್ನೆಗಳ ಎದುರಾದವು. ಈ ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಕೂಡ ಅತಿಥಿಯಾಗಿ ಆಗಮಿಸಿದ್ದರು ಹಾಗೂ ಸಲ್ಮಾನ್ ಖಾನ್ ಕುರಿತಾದ ಪ್ರಶ್ನೆಯೂ ಸಹ ಝೈದ್ ಖಾನ್‌ಗೆ ಎದುರಾಯಿತು.

  ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಈ ಇಬ್ಬರಲ್ಲಿ ನೀವು ಯಾರನ್ನು ಹೆಚ್ಚಾಗಿ ಫಾಲೋ ಮಾಡ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ಝೈದ್ ಖಾನ್ ತಾನು ಇಬ್ಬರಿಗೂ ಅಭಿಮಾನಿ ಆದರೆ ಹೆಚ್ಚಾಗಿ ಸಲ್ಮಾನ್ ಖಾನ್ ಅವರನ್ನ ಫಾಲೋ ಮಾಡ್ತೀನಿ ಎಂದು ಉತ್ತರಿಸಿದರು. ಇನ್ನು ಬನಾರಸ್ ಚಿತ್ರದ ಟ್ರೈಲರ್ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ.

  ಈ ಚಿತ್ರದಲ್ಲಿ ಝೈದ್ ಖಾನ್ ಗಗನಯಾತ್ತಿ ಹಾಗೂ ಟೈಮ್ ಟ್ರಾವೆಲರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚಿತ್ರ ನವೆಂಬರ್ 4ಕ್ಕೆ ಬಿಡುಗಡೆಗೊಳ್ಳಲಿದೆ.

  English summary
  Zaid Khan revealed his favourite bollywoood actor. Read on
  Tuesday, September 27, 2022, 18:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X