ಕೊನೆಗೂ 'ಐ ಲವ್ ಯೂ' ಬಿಡುಗಡೆ ದಿನ ಬಹಿರಂಗ

Recommended Video

ಪರದೆ ಮೇಲೆ ರಿಯಲ್ ಸ್ಟಾರ್ ಮೋಡಿ ನೋಡಲು ದಿನಗಣನೆ ಶುರು | FILMIBEAT KANNADA

ಎಲ್ಲ ಅಂದುಕೊಂಡಂತೆ ಆಗಿದ್ದರೇ ಕಳೆದ ವರ್ಷದ ಅಂತ್ಯದಲ್ಲೇ ಐ ಲವ್ ಯೂ ಸಿನಿಮಾ ತೆರೆಗೆ ಬರಬೇಕಿತ್ತು. ನಂತರ ಪ್ರೇಮಿಗಳ ದಿನಕ್ಕೆ ಬಿಡುಗಡೆಯಾಗುತ್ತೆ ಎನ್ನಲಾಗಿತ್ತು. ಆ ದಿನನೂ ಬರಲಿಲ್ಲ. ಆಮೇಲೆ ಲೋಕಸಭೆ ಚುನಾವಣೆ ದಿನಾಂಕ ಪ್ರಕಟ ಆಯಿತು. ಅಲ್ಲಿಗೆ ಉಪೇಂದ್ರ ಪಕ್ಷವೂ ಸ್ಪರ್ಧಿಸುತ್ತಿದ್ದರಿಂದ ನೀತಿ ಸಂಹಿತೆ ಮುಗಿಯವರೆಗೂ ಬರಲ್ಲ ಅನ್ನುವುದು ಖಚಿತವಾಗಿತ್ತು.

ಇದೀಗ, ಕರ್ನಾಟಕದಲ್ಲಿ ಎಲೆಕ್ಷನ್ ಮುಗಿದಿದೆ. ಅದೇ ರೀತಿ ಐ ಲವ್ ಯೂ ಚಿತ್ರದ ಬಿಡುಗಡೆ ದಿನಾಂಕವೂ ಪ್ರಕಟವಾಗಿದೆ. ಹೌದು, ಜೂನ್ 14 ರಂದು ಉಪ್ಪಿ ಐ ಲವ್ ಯೂ ಸಿನಿಮಾ ಚಿತ್ರಮಂದಿರಕ್ಕೆ ಬರುತ್ತಿದೆಯಂತೆ.

ಆರ್ ಚಂದ್ರು ನಿರ್ದೇಶನ ಮಾಡಿರುವ ಈ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಹಾಡು ಮತ್ತು ಟ್ರೈಲರ್ ಮೂಲಕ ಎರಡು ಭಾಷೆಯಲ್ಲೂ ದೊಡ್ಡ ಮಟ್ಟದ ಸದ್ದು ಮಾಡಿತ್ತು.

I Love U movie release date announced

ಇತ್ತೀಚಿಗಷ್ಟೆ ಸೆನ್ಸಾರ್ ಮುಗಿಸಿದ್ದ ಐ ಲವ್ ಯೂ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಅಲ್ಲಿಗೆ ಅಭಿಮಾನಿಗಳಲ್ಲಿದ್ದ ಆತಂಕ ಸ್ವಲ್ಪ ದೂರವಾಗಿದೆ. ಯಾಕಂದ್ರೆ, ಚಿತ್ರದ ಟ್ರೈಲರ್ ನಲ್ಲಿ ಕೆಲವು ರೋಮ್ಯಾಟಿಂಕ್ ದೃಶ್ಯಗಳಿದ್ದವು. ಆದ್ದರಿಂದ ಎ ಸರ್ಟಿಫಿಕೇಟ್ ಸಿಗಬಹುದು ಎಂದು ನಿರೀಕ್ಷೆ ಇತ್ತು.

ಇನ್ನುಳಿದಂತೆ ಉಪೇಂದ್ರ ಅವರ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಸದ್ಯ ವಿದೇಶದಲ್ಲಿ ಉಪ್ಪಿ ದಂಪತಿ ಸಮ್ಮರ್ ಹಾಲಿಡೇ ಎಂಜಾಯ್ ಮಾಡ್ತಿದ್ದು, ವಾಪಸ್ ಆದ ಬಳಿಕ ಐ ಲವ್ ಯೂ ಚಿತ್ರದ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ.

More from Filmibeat

English summary
Real star Upendra starrer 'I Love U' film got U/A certificate from the censor board. This movie is directed by R Chandru. now release date announced.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X