ದಾವಣಗೆರೆಗೆ ಬರ್ತಿದ್ದಾರೆ ಉಪೇಂದ್ರ ಮತ್ತು ರಚಿತಾ ರಾಮ್
ರಿಯಲ್ ಸ್ಟಾರ್ ಉಪೇಂದ್ರ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ 'ಐ ಲವ್ ಯೂ' ಸಿನಿಮಾದ ಆಡಿಯೋ ಲಾಂಚ್ ಇದೇ ಭಾನುವಾರ ನಡೆಯಲಿದೆ.
ಫೆಬ್ರವರಿ 3 ರಂದು ದಾವಣಗೆರೆಯಲ್ಲಿ ಉಪ್ಪಿ ಚಿತ್ರದ ಧ್ವನಿಸುರಳಿ ಬಿಡುಗಡೆ ಸಮಾರಂಭ ಆಯೋಜನೆಯಾಗಿದೆ. ಅದಕ್ಕಾಗಿ ದಾವಣಗೆರೆಯಲ್ಲಿ ಭಾರಿ ತಯಾರಿ ನಡೆದಿದ್ದು, ಅದ್ಧೂರಿ ವೇದಿಕೆ ಸಿದ್ದವಾಗಿದೆ. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನ ಸ್ಟಾರ್ ನಟ-ನಟಿಯರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಸಂಗೀತ ನಿರ್ದೇಶಕ ಗುರು ಕಿರಣ್ ತಂಡದಿಂದ ರಸಮಂಜರಿ ಹಾಗೂ ಮೋಹನ್ ತಂಡದಿಂದ ಡ್ಯಾನ್ಸ್ ಕಾರ್ಯಕ್ರಮ ಕೂಡ ಇದೆ. ಜೊತೆಗೆ ಮಜಾಭಾರತದ ಸ್ಪರ್ಧಿಗಳು ಕಾಮಿಡಿ ಸ್ಕಿಟ್ ಕೂಡ ಮಾಡಲಿದ್ದಾರೆ.

ಆರ್.ಚಂದ್ರು ನಿರ್ದೇಶಿಸಿ, ನಿರ್ಮಿಸಿರುವ ಐ ಲವ್ ಯೂ ಸಿನಿಮಾ ಹಲವು ವಿಷ್ಯಗಳಿಗೆ ವಿಶೇಷವಾಗಿದೆ. ಉಪೇಂದ್ರ ಅವರ 'ಎ', 'ಉಪೇಂದ್ರ', 'ಪ್ರೀತ್ಸೆ' ಚಿತ್ರಗಳಂತೆ ಈ ಚಿತ್ರವೂ ಸದ್ದು ಮಾಡಲಿದೆ ಎಂಬ ಭರವಸೆ ಮೂಡಿಸಿದ್ದಾರೆ.
ಅದಕ್ಕೆ ತಕ್ಕಂತೆ ಟ್ರೈಲರ್ ಕಟ್ ಮಾಡಿದ್ದು, ಉಪ್ಪಿ ಸ್ಟೈಲ್ ಎದ್ದು ಕಾಣ್ತಿದೆ. ಅಂದ್ಹಾಗೆ, ಈ ಚಿತ್ರಕ್ಕೆ ಡಾ.ಕಿರಣ್ ಸಂಗೀತ ಸಂಯೋಜಿಸಿದ್ದಾರೆ. ಸದ್ಯ, ಬಹುತೇಕ ಚಿತ್ರೀಕರಣ ಮುಗಿಸಿರುವ ಐ ಲವ್ ಯೂ ಚಿತ್ರತಂಡ ಒಂದು ಹಾಡನ್ನ ಬಾಕಿ ಉಳಿಸಿಕೊಂಡಿದೆಯಂತೆ.
ಈ ಆಡಿಯೋ ಬಿಡುಗಡೆ ಸಮಾರಂಭವಾಗುತ್ತಿದ್ದಂತೆ ಮಲೇಷಿಯಾಗೆ ಹೋಗಿ ಸಾಂಗ್ ಶೂಟಿಂಗ್ ಮಾಡಲಿದೆಯಂತೆ. ಅದಾದ ಬಳಿಕ ಸಿನಿಮಾ ರಿಲೀಸ್ ದಿನಾಂಕವನ್ನ ಅಧಿಕೃತವಾಗಿ ಪ್ರಕಟ ಮಾಡಲಿದೆ.


Click it and Unblock the Notifications











