'ಐ ಲವ್ ಯೂ' ಚಿತ್ರದ ವಿವಾದದ ಹಾಡಿನ ವಿಡಿಯೋ ಬಿಡುಗಡೆ
Recommended Video
ಸಿಕ್ಕಾಪಟ್ಟೆ ಹಾಟ್ ಆಗಿದೆ ರಚಿತಾ ರಾಮ್ ಈ ಹಾಡು..? | FILMIBEAT KANNADA
'ಐ ಲವ್ ಯೂ' ಸಿನಿಮಾದ ಒಂದು ಹಾಡು ದೊಡ್ಡ ಮಟ್ಟದ ವಿವಾದ ಸೃಷ್ಟಿ ಮಾಡಿತ್ತು. ಈಗ ಆ ಹಾಡಿನ ವಿಡಿಯೋ ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.
'ಮಾತನಾಡಿ ಮಾಯವಾದೆ...' ಎಂಬ ಹಾಡಿನಲ್ಲಿ ನಟಿ ರಚಿತಾ ರಾಮ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈ ಹಾಡನ್ನು ಉಪೇಂದ್ರ ನಿರ್ದೇಶನ ಮಾಡಿದ್ದಾರೆ ಎಂಬ ಹೇಳಿಕೆ ರಚಿತಾ ನೀಡಿದ್ದಾರೆ ಎಂದು ಪ್ರಿಯಾಂಕ ಉಪೇಂದ್ರ ಗರಂ ಆಗಿದ್ದರು.
ಸಿನಿಮಾ ಬಿಡುಗಡೆಗೆಯಾಗಿ 43 ದಿನಗಳ ನಂತರ ಈ ಹಾಡಿನ ವಿಡಿಯೋ ರಿಲೀಸ್ ಆಗಿದೆ. ಹಾಡು ಮಾಡಿದ್ದ ವಿವಾದದಿಂದ ಆ ಹಾಡಿನಲ್ಲಿ ಏನಿದೆ ಎಂದು ಚಿತ್ರಮಂದಿರಕ್ಕೆ ಹೋಗುತ್ತಿದ್ದವರ ಸಂಖ್ಯೆ ಜಾಸ್ತಿಯಾಗಿತ್ತು. ಹೀಗಾಗಿ, ಈ ಹಾಡಿನ ವಿಡಿಯೋವನ್ನು ಇಷ್ಟು ದಿನ ರಿಲೀಸ್ ಮಾಡಿರಲಿಲ್ಲ.

ಟೀ ಸೀರಿಸ್ ನಲ್ಲಿ ಹಾಡಿನ ವಿಡಿಯೋ ಬಿಡುಗಡೆಯಾಗಿದೆ. ಹಾಡು ಹೊರ ಬಂದ ಕೆಲವೇ ನಿಮಿಷಗಳಲ್ಲಿ 5 ಸಾವಿರಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡಿದೆ.
'ಮಾತನಾಡಿ ಮಾಯವಾದೆ...' ಹಾಡನ್ನು ಅರ್ಮನ್ ಮಲ್ಲಿಕ್ ಹಾಡಿದ್ದಾರೆ. ಸಂತೋಷ್ ನಾಯಕ್ ಸಾಹಿತ್ಯ ಬರೆದಿದ್ದಾರೆ.
ಹಾಡಿನ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
More from Filmibeat
English summary
Upendra and Rachita Ram's 'I Love you' movie controversy song video released.


Click it and Unblock the Notifications











