ದಾವಣಗೆರೆ ಜನರಿಗೆ 'ಐ ಲವ್ ಯೂ' ಹೇಳ್ತಾರೆ ಉಪ್ಪಿ
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಐ ಲವ್ ಯೂ' ಸಿನಿಮಾದ ಟ್ರೇಲರ್ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಇದೀಗ ಈ ಚಿತ್ರದ ಹಾಡುಗಳ ಬಿಡುಗಡೆಗೆ ಸಮಯ ಬಂದಿದೆ. ಚಿತ್ರದ ಹಾಡುಗಳು ದಾವಣಗೆರೆಯಲ್ಲಿ ರಿಲೀಸ್ ಆಗಲಿವೆ.
ದಾವಣಗೆರೆಯಲ್ಲಿ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಎಲ್ಲ ತಯಾರಿ ಮಾಡಿಕೊಂಡಿದೆ. ಜನವರಿ 19 ರಂದು ಅದ್ದೂರಿ ಕಾರ್ಯಕ್ರಮದ ಮೂಲಕ ಹಾಡುಗಳು ಹೊರ ಬರಲಿವೆ. ದಾವಣಗೆರೆಯ ಸರ್ಕಾರಿ ಶಾಲೆಯ ಮೈದಾನದಲ್ಲಿ ಸಂಜೆ 7 ಗಂಟೆಗೆ ಕಾರ್ಯಕ್ರಮ ಶುರುವಾಗಲಿದೆ.

'ಐ ಲವ್ ಯೂ' ಸಿನಿಮಾವನ್ನು ಆರ್ ಚಂದ್ರು ನಿರ್ದೇಶನ ಮಾಡಿದ್ದಾರೆ. ಉಪ್ಪಿ ಮತ್ತು ಚಂದ್ರು ಕಾಂಬಿನೇಷನ್ ನ ಎರಡನೇ ಚಿತ್ರ ಇದಾಗಿದೆ. A+ ಉಪೇಂದ್ರ + ಪ್ರೀತ್ಸೆ ಎಂದು ಪೋಸ್ಟರ್ ಗಳಲ್ಲಿ ಬರೆದಿದ್ದು ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.
ಉಪೇಂದ್ರ ಹಾಗೂ ರಚಿತಾ ರಾಮ್ ಜೋಡಿಯ ಮೊದಲ ಸಿನಿಮಾ ಇದಾಗಿದೆ. ಚಿತ್ರದ ಕಥೆಯನ್ನು ಉಪ್ಪಿ ಹಾಗೂ ರಚಿತಾ ಬಹಳ ಮೆಚ್ಚಿಕೊಂಡಿದ್ದಾರೆ.
English summary
Actor Upendra and Rachita Ram' 'I love You' kannada movie songs will be releasing on January 19th in Davanagere.


Click it and Unblock the Notifications