ಮುಕುಂದನ ಸಿನಿಮಾಗೆ ಸಾಥ್ ಕೊಡ್ತಿದ್ದಾರೆ ಮುರಾರಿ
'ಐ ಲವ್ ಯೂ' ಚಿತ್ರ ಬಿಡುಗಡೆಯ ಸನಿಹದಲ್ಲಿ ಇದೆ. ಸಿನಿಮಾ ಜೂನ್ 14 ರಂದು ರಾಜ್ಯಾದಂತ್ಯ ರಿಲೀಸ್ ಆಗುತ್ತಿದೆ. ಬಿಡುಗಡೆಯ ದಿನ ಹತ್ತಿರಕ್ಕೆ ಬರುತ್ತಿದ್ದ ಹಾಗೆ ನಿರ್ದೇಶಕ ಆರ್ ಚಂದ್ರು ತಮ್ಮ ಸಿನಿಮಾವನ್ನು ಬೇರೆ ಬೇರೆ ಪ್ರಮೋಟ್ ಮಾಡುತ್ತಿದ್ದಾರೆ.
ಈಗ ಚಿತ್ರದ ಟ್ರೇಲರ್ ಅನ್ನು ನಟ ಕಿಚ್ಚ ಸುದೀಪ್ ರಿಂದ ಲಾಂಚ್ ಮಾಡಿಸುತ್ತಿದ್ದಾರೆ. ಈ ಹಿಂದೆ ಉಪೇಂದ್ರ ಜೊತೆಗೆ 'ಮುಕುಂದ ಮುರಾರಿ' ಸಿನಿಮಾ ಮಾಡಿದ್ದ ಸುದೀಪ್ ಈಗ ಅವರ ಸಿನಿಮಾಗೆ ಸಾಥ್ ನೀಡುತ್ತಿದ್ದಾರೆ.
'ಐ ಲವ್ ಯೂ' ಸಿನಿಮಾದ ಟ್ರೇಲರ್ ಅನ್ನು ಸುದೀಪ್ ಬಿಡುಗಡೆ ಮಾಡುತ್ತಿದೆ. ಮೇ 27 ರಂದು 5.30ಕ್ಕೆ ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ. ಸಿನಿಮಾದ ಹಾಡುಗಳು ಬಳಿಕ ಈಗ ಟ್ರೇಲರ್ ಅನ್ನು ಲಾಂಚ್ ಮಾಡಲಾಗುತ್ತಿದೆ.

ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಮತ್ತೊಂದು ಕಡೆ ಸಿನಿಮಾದ ತೆಲುಗು ಹಾಡುಗಳನ್ನು ಪ್ರಿನ್ಸ್ ಮಹೇಶ್ ಬಾಬು ಕೈ ನಲ್ಲಿ ಬಿಡುಗಡೆ ಮಾಡಿಸುವ ಪ್ಲಾನ್ ನಡೆಯುತ್ತಿದೆಯಂತೆ.
ಅಂದಹಾಗೆ, ರಚಿತಾ ರಾಮ್ ಹಾಗೂ ಸೋನು ಗೌಡ ಸಿನಿಮಾದ ನಾಯಕಿಯರಾಗಿದ್ದಾರೆ. ಮೊದಲ ಬಾರಿಗೆ ಉಪ್ಪಿಗೆ ರಚಿತಾ ಜೋಡಿಯಾಗಿದ್ದಾರೆ.
ಚಿತ್ರದ ಹಾಡುಗಳು ದೊಡ್ಡ ಮಟ್ಟದಲ್ಲಿ ಕ್ಲಿಕ್ ಆಗಲ್ಲ ಹಾಗಾಗಿ ಟ್ರೇಲರ್ ಹೇಗಿರುತ್ತದೆ ಎಂಬ ಪ್ರಶ್ನೆ ಮೂಡಿದೆ.


Click it and Unblock the Notifications











