'KGF' ಗಿಂತ ಅಧಿಕ ಚಿತ್ರಮಂದಿರಗಳಲ್ಲಿ 'ಐ ಲವ್ ಯೂ'!
Recommended Video
ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ಐ ಲವ್ ಯೂ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದೀಗ ಚಿತ್ರದ ಬಿಡುಗಡೆಗೆ ಬಗ್ಗೆಯ ಒಂದು ವಿಷಯ ಅಚ್ಚರಿ ಉಂಟು ಮಾಡಿದೆ.
ಕನ್ನಡದ 'ಕೆಜಿಎಫ್' ಸಿನಿಮಾ ಇಡೀ ಭಾರತದ ತುಂಬ ಸದ್ದು ಮಾಡಿತ್ತು. ಸಿನಿಮಾ ಬಿಡುಗಡೆಗೆ ಮುಂಚೆ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಯಾಗಿತ್ತು. ಆ ಕಾರಣ ಚಿತ್ರದ ಬಿಡುಗಡೆಯ ಚಿತ್ರಮಂದಿರಗಳು ಕೂಡ ಹೆಚ್ಚಾಗಿತ್ತು.
ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿಯೂ ಸಿನಿಮಾದ ಬಿಡುಗಡೆಗೆ ಡಿಮ್ಯಾಂಡ್ ಇತ್ತು. ಆದರೆ, ಇದೀಗ, 'ಐ ಲವ್ ಯೂ' ಸಿನಿಮಾ 'ಕೆಜಿಎಫ್' ಚಿತ್ರವನ್ನು ಮೀರಿಸಿದೆ. ತೆಲುಗಿನಲ್ಲಿ ಸಿನಿಮಾ ದಾಖಲೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಅಂದಹಾಗೆ, ನಿರ್ದೇಶಕ ಆರ್ ಚಂದ್ರು ಮತ್ತೆ ಸಿನಿಮಾ ವಿತರಣೆಯಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಮುಂದೆ ಓದಿ...

600 ಚಿತ್ರಮಂದಿರಗಳಲ್ಲಿ 'ಐ ಲವ್ ಯೂ'
ಆಂಧ್ರ ಮತ್ತು ತೆಲಂಗಾಣದಲ್ಲಿ 'ಐ ಲವ್ ಯೂ' ಸಿನಿಮಾಗೆ ಬೇಡಿಕೆ ಜಾಸ್ತಿಯಾಗಿದೆ. ಹೀಗಾಗಿ, ಚಿತ್ರದ ಬಿಡುಗಡೆ ಕೂಡ ದೊಡ್ಡದಾಗಿ ಆಗುತ್ತಿದೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಚಿತ್ರ ರಿಲೀಸ್ ಮಾಡಲಾಗುತ್ತಿದೆ. ಸದ್ಯ, 600 ಚಿತ್ರಮಂದಿರದಲ್ಲಿ 'ಐ ಲವ್ ಯೂ' ಚಿತ್ರ ಬಿಡುಗಡೆಯಾಗಲಿದೆಯಂತೆ. 400 ಥಿಯೇಟರ್ ಗಳು ಈಗಾಗಲೇ ಸಿಕ್ಕಿದ್ದು, ದಿನದಿಂದ ದಿನಕ್ಕೆ ಚಿತ್ರಮಂದಿರಗಳ ಸಂಖ್ಯೆ ಜಾಸ್ತಿಯಾಗುತ್ತಿದೆಯಂತೆ.

350 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು 'ಕೆಜಿಎಫ್'
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 350 ಥಿಯೇಟರ್ ಗಳಲ್ಲಿ ತೆರೆಗೆ ಬಂದಿತ್ತು. ಸಿನಿಮಾದ ದೊಡ್ಡ ಕ್ರೇಜ್ ಹಾಗೂ ರಾಜಮೌಳಿ ಸಹಕಾರದೊಂದಿಗೆ ಸಿನಿಮಾಗೆ ಅಷ್ಟೊಂದು ಸ್ಕ್ರೀನ್ ಗಳು ಸಿಕ್ಕಿತ್ತು. ಈಗ 'ಐ ಲವ್ ಯೂ' ಸಿನಿಮಾ ಅದನ್ನು ಮೀರಿಸಿದೆ.

ತೆಲುಗಿನಲ್ಲಿ ರಿಯಲ್ ಸ್ಟಾರ್ ಹವಾ
ತೆಲುಗಿನಲ್ಲಿಯೂ ರಿಯಲ್ ಸ್ಟಾರ್ ಉಪೇಂದ್ರ ಒಳ್ಳೆಯ ಕ್ರೇಜ್ ಹೊಂದಿದ್ದಾರೆ. 'ಓಂ', 'ಎ', 'ಉಪೇಂದ್ರ', 'ಸೂಪರ್' ಸಿನಿಮಾಗಳಿಗೆ ಅಲ್ಲಿಯೂ ದೊಡ್ಡ ಅಭಿಮಾನಿ ಬಳಗ ಇದೆ. 'ಸನ್ ಆಫ್ ಸತ್ಯ ಮೂರ್ತಿ' ಸೇರಿದಂತೆ ಕೆಲ ಸಿನಿಮಾದಲ್ಲಿ ಉಪ್ಪಿ ನಟಿಸಿದ್ದಾರೆ. ಈ ಎಲ್ಲ ಅಂಶಗಳು ಚಿತ್ರಕ್ಕೆ ಸಹಾಯವಾಗಿದೆ.

ತ್ರಿವೇಣಿ ಚಿತ್ರಮಂದಿರ ಸಿಕ್ಕಿದೆ
ಬೆಂಗಳೂರಿನ ಗಾಂಧಿನಗರದಲ್ಲಿ 'ಐ ಲವ್ ಯೂ' ಸಿನಿಮಾಗೆ ತ್ರಿವೇಣಿ ಚಿತ್ರಮಂದಿರ ಸಿಕ್ಕಿದೆ. ಇದೇ ತಿಂಗಳ 14 ರಂದು ಸಿನಿಮಾ ರಾಜ್ಯಾದಂತ್ಯ ಬಿಡುಗಡೆಯಾಗಲಿದೆ. ಉಪೇಂದ್ರ, ರಚಿತಾ ರಾಮ್, ಸೋನು ಗೌಡ ಚಿತ್ರದಲ್ಲಿ ನಟಿಸಿದ್ದಾರೆ. ಆರ್ ಚಂದ್ರು ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ.


Click it and Unblock the Notifications











