ಪ್ರೇಮಿಗಳ ದಿನಕ್ಕೆ 'ಐ ಲವ್ ಯೂ' ಹೇಳಲಿದ್ದಾರೆ ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷೆಯ ಚಿತ್ರ 'ಐ ಲವ್ ಯೂ' ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೇ ಇದೇ ವರ್ಷ ಸಿನಿಮಾ ತೆರೆಕಾಣಬೇಕಿತ್ತು. ಬಟ್, ಅಂತಿಮ ಕ್ಷಣದಲ್ಲಿ ಸಿನಿಮಾ ಮುಂದಕ್ಕೆ ಹೋಗಿತ್ತು.
ಇದೀಗ, 'ಐ ಲವ್ ಯೂ' ರಿಲೀಸ್ ದಿನಾಂಕ ಪಕ್ಕಾ ಆಗಿದ್ದು, ಮುಂದಿನ ವರ್ಷ ಪ್ರೇಮಿಗಳ ದಿನಕ್ಕೆ ಸಿನಿಮಾ ಬರ್ತಿದೆ. ಫೆಬ್ರವರಿ 14 ರಂದು ಉಪ್ಪಿಯ 'ಐ ಲವ್ ಯೂ' ಎರಡು ಭಾಷೆಯಲ್ಲಿ ನಿಮ್ಮ ಮುಂದೆ ಬರಲಿದೆ.

ಕನ್ನಡ ಮತ್ತು ತೆಲುಗು ಭಾಷೆಯಲ್ಲಿ 'ಐ ಲವ್ ಯೂ' ತಯಾರಾಗಿದ್ದು, ಜನವರಿಯಲ್ಲಿ ಚಿತ್ರದ ಆಡಿಯೋ ಬರಲಿದೆ. 'ಕನಕ' ಚಿತ್ರದ ನಂತರ ಆರ್ ಚಂದ್ರು ನಿರ್ದೇಶನ ಮಾಡ್ತಿರುವ ಸಿನಿಮಾ ಇದಾಗಿದ್ದು, ನಿರ್ದೇಶನದ ಜೊತೆ ಆರ್ ಚಂದ್ರು ಅವರೇ ನಿರ್ಮಾಣ ಕೂಡ ಮಾಡಿದ್ದಾರೆ.
ಉಪೇಂದ್ರ ನಟಿಸಿರುವ ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದು, ಸೋನು ಗೌಡ, ಬ್ರಹ್ಮಾನಂದಂ ಕಾಣಿಸಿಕೊಂಡಿದ್ದಾರೆ.
English summary
Real star upendra’s much awaited movie I Love You to release on 14th February 2019.


Click it and Unblock the Notifications