'ಕಬ್ಜ' ಚಿತ್ರಕ್ಕೆ ಕಾಜಲ್ ಅಗರ್ವಾಲ್ ಬರಲ್ಲ.! ಇದು ಪಕ್ಕಾ.!
Recommended Video
'ಐ ಲವ್ ಯೂ' ಸಿನಿಮಾದ ಯಶಸ್ಸಿನ ಬಳಿಕ ನಿರ್ದೇಶಕ ಆರ್.ಚಂದ್ರು ಮತ್ತು ರಿಯಲ್ ಸ್ಟಾರ್ ಉಪೇಂದ್ರ ಒಂದಾಗಿರುವುದು 'ಕಬ್ಜ' ಚಿತ್ರದಲ್ಲಿ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ.. ಏಳು ಭಾಷೆಗಳಲ್ಲಿ 'ಕಬ್ಜ' ತಯಾರಾಗಲಿದೆ. ಈಗಾಗಲೇ ಚಿತ್ರದ ಮುಹೂರ್ತ ಸಮಾರಂಭ ಮುಗಿದಿದೆ.
'ಕಬ್ಜ' ಚಿತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ನಟಿಸುತ್ತಾರೆ ಎಂದು ಈ ಹಿಂದೆ ಸುದ್ದಿ ಆಗಿತ್ತು. ಹಾಗ್ನೋಡಿದ್ರೆ, ಕಾಜಲ್ ಅಗರ್ವಾಲ್ ಜೊತೆಗೆ ನಿರ್ದೇಶಕ ಕಮ್ ನಿರ್ಮಾಪಕ ಆರ್.ಚಂದ್ರು 'ಕಬ್ಜ' ಚಿತ್ರದ ಕುರಿತು ಮಾತುಕತೆ ನಡೆಸಿದ್ದು ನಿಜ. 'ಕಬ್ಜ' ಚಿತ್ರದ ಕಥೆ ಕೇಳಿ ಕಾಜಲ್ ಅಗರ್ವಾಲ್ ಖುಷಿ ಪಟ್ಟಿದ್ದು ಕೂಡ ಸತ್ಯ. ಆದ್ರೆ, 'ಕಬ್ಜ' ಚಿತ್ರದಲ್ಲಿ ಕಾಜಲ್ ಅಗರ್ವಾಲ್ ನಟಿಸುತ್ತಿಲ್ಲ ಎಂಬುದು ವಾಸ್ತವ.
''ನಾನು 'ಕಬ್ಜ' ಚಿತ್ರದಲ್ಲಿ ನಟಿಸುತ್ತಿಲ್ಲ'' ಎಂದು ನಟಿ ಕಾಜಲ್ ಅಗರ್ವಾಲ್ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಎಲ್ಲಾ ಊಹಾಪೋಹ, ಅಂತೆ-ಕಂತೆಗಳಿಗೆ ಕಾಜಲ್ ಅಗರ್ವಾಲ್ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಡೇಟ್ಸ್ ಮ್ಯಾಚ್ ಆಗದ ಕಾರಣ ಕಾಜಲ್ ಅಗರ್ವಾಲ್ ಒಪ್ಪಿಕೊಂಡಿಲ್ಲ ಅನ್ನೋದು ಮೂಲಗಳ ಮಾಹಿತಿ. ಡಿಸೆಂಬರ್ ಹೊತ್ತಿಗೆ ಡೇಟ್ಸ್ ಬೇಕು ಅಂತ ಆರ್.ಚಂದ್ರು ಕೇಳಿದ್ರಂತೆ. ಆದರೆ ಏಪ್ರಿಲ್ ನಲ್ಲಿ ಡೇಟ್ಸ್ ಕೊಡುವೆ ಅಂತ ಕಾಜಲ್ ಹೇಳಿದ್ರಂತೆ. ಕಾಲ್ ಶೀಟ್ ನಲ್ಲಿ ಕ್ಲಾಶ್ ಆಗುತ್ತಿದ್ದ ಪರಿಣಾಮ 'ಕಬ್ಜ' ಚಿತ್ರತಂಡಕ್ಕೆ ಕಾಜಲ್ ಅಗರ್ವಾಲ್ ಸೇರಿಕೊಂಡಿಲ್ಲ ಎನ್ನಲಾಗಿದೆ.
ಅಂದ್ಹಾಗೆ, 'ಕಬ್ಜ' ಸಿನಿಮಾ 80 ರ ದಶಕದ ಓರ್ವ ಅಂಡರ್ ವರ್ಲ್ಡ್ ಡಾನ್ ಕಥೆ. ಇದರಲ್ಲಿ ವಿವಿಧ ಭಾಷೆಯ ಏಳು ಖಳನಟರು ಮಿಂಚಲಿದ್ದಾರೆ. ಏಳು ಭಾಷೆಗಳಲ್ಲಿ ಉಪೇಂದ್ರ ಜೊತೆಗೆ ಮಿಂಚುವ ನಾಯಕಿ ಯಾರಾಗ್ತಾರೆ ಅನ್ನೋದು ಸದ್ಯಕ್ಕೆ ಸಸ್ಪೆನ್ಸ್.


Click it and Unblock the Notifications











