For Quick Alerts
  ALLOW NOTIFICATIONS  
  For Daily Alerts

  ಯಾರೀ ಗಾಸಿಪ್ ಹಬ್ಬಿಸಿದ್ದು ಶ್ರಿಯಾ ಮದುವೆ ಆಗ್ತಾರೆ ಅಂತ.?!

  By Harshitha
  |

  ಸಿನಿ ಲೋಕದಲ್ಲಿ ನಿನ್ನೆ ಸಂಜೆಯಿಂದ ಒಂದೇ ಸುದ್ದಿ. ಟಾಲಿವುಡ್, ಕಾಲಿವುಡ್, ಬಾಲಿವುಡ್ ನಲ್ಲಿ ಫೇಮಸ್ ಆಗಿರುವ ಸ್ಯಾಂಡಲ್ ವುಡ್ ನಲ್ಲಿಯೂ ಗುರುತಿಸಿಕೊಂಡಿರುವ ನಟಿ ಶ್ರಿಯಾ ಸರಣ್ ಮದುವೆಯ ಸುದ್ದಿ ನಿನ್ನೆಯಿಂದ ಎಲ್ಲೆಲ್ಲೂ ಗಿರಕಿ ಹೊಡೆಯುತ್ತಿದೆ.

  ರಷಿಯನ್ ಬಾಯ್ ಫ್ರೆಂಡ್ ಜೊತೆ ಶ್ರಿಯಾ ಸರಣ್ ಮದುವೆ ನಡೆಯಲಿದೆ. ಮಾರ್ಚ್ ತಿಂಗಳಿನಲ್ಲಿ ರಾಜಸ್ಥಾನದ ಅರಮನೆಯಲ್ಲಿ ಶ್ರಿಯಾ ದಾಂಪತ್ಯ ಜೀವನಕ್ಕೆ ನಾಂದಿ ಹಾಡಲಿದ್ದಾರೆ ಅಂತೆಲ್ಲ ವರದಿಗಳು ಕೂಡ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಬಿತ್ತರವಾಯ್ತು.

  ಈಗ ಇದು ಶುದ್ಧ ಸುಳ್ಳು ಸುದ್ದಿ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಶ್ರಿಯಾ ಸರಣ್ ಮದುವೆ ಆಗುತ್ತಿಲ್ಲ ಎಂದು ಶ್ರಿಯಾ ತಾಯಿ ನೀರ್ಜಾ ಸ್ಪಷ್ಟ ಪಡಿಸಿದ್ದಾರೆ. ಮುಂದೆ ಓದಿರಿ....

  ಶ್ರಿಯಾ ಬಗ್ಗೆ ಗುಸು ಗುಸು

  ಶ್ರಿಯಾ ಬಗ್ಗೆ ಗುಸು ಗುಸು

  ಮದುವೆಯ ತಯಾರಿಯಲ್ಲಿ ತೊಡಗಿರುವ 35 ವರ್ಷದ ಶ್ರಿಯಾ ಸರಣ್, ಸದ್ಯ ತಮ್ಮ ಬಾಯ್ ಫ್ರೆಂಡ್ ಕುಟುಂಬವನ್ನು ಭೇಟಿ ಮಾಡಲು ರಷ್ಯಾಗೆ ತೆರಳಿದ್ದಾರೆ ಎಂಬ ಸುದ್ದಿ ನಿನ್ನೆ ಬ್ರೇಕ್ ಆಗಿತ್ತು. ಆದ್ರೆ, ಇದೆಲ್ಲವೂ ಸುಳ್ಳಂತೆ.

  ಓಹೋ... 'ಚಂದ್ರ' ಚಕೋರಿ ಶ್ರಿಯಾಗೆ ಮದುವೆ ಅಂತೆ! ಹುಡುಗ ಯಾರಂತೆ?ಓಹೋ... 'ಚಂದ್ರ' ಚಕೋರಿ ಶ್ರಿಯಾಗೆ ಮದುವೆ ಅಂತೆ! ಹುಡುಗ ಯಾರಂತೆ?

  ಶ್ರಿಯಾ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ

  ಶ್ರಿಯಾ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ

  ''ಇದು ಸುಳ್ಳು ಸುದ್ದಿ. ನಾನು ಮದುವೆ ಆಗುತ್ತಿಲ್ಲ'' ಎಂದು ಶ್ರಿಯಾ ಸ್ಪಷ್ಟ ಪಡಿಸಿದ್ದಾರೆ. ಜೊತೆಗೆ, ''ಮಾರ್ಚ್ ನಲ್ಲಿ ರಾಜಸ್ಥಾನದಲ್ಲಿ ನಡೆಯುವ ಸ್ನೇಹಿತರೊಬ್ಬರ ಮದುವೆಯಲ್ಲಿ ಪಾಲ್ಗೊಳ್ಳಲು ಶ್ರಿಯಾ ಒಡವೆ-ವಸ್ತ್ರ ಆರ್ಡರ್ ಮಾಡಿದ್ದಾಳೆ. ಇದರಿಂದ ಸುದ್ದಿ ಬೇರೆ ರೂಪ ಪಡೆದುಕೊಂಡಿರಬಹುದು'' ಎಂದು ಶ್ರಿಯಾ ತಾಯಿ ನೀರ್ಜಾ ಕೂಡ ಕ್ಲಾರಿಟಿ ಕೊಟ್ಟಿದ್ದಾರೆ. ಅಲ್ಲಿಗೆ, ಶ್ರಿಯಾ ಮದುವೆ ಸುದ್ದಿ ಸಂಪೂರ್ಣ ಸುಳ್ಳು ಎಂಬಂತೆ ಲೆಕ್ಕ.

  ಶ್ರಿಯಾ ನಟಿಸಿದ ಸಿನಿಮಾಗಳು ಯಾವುವು.?

  ಶ್ರಿಯಾ ನಟಿಸಿದ ಸಿನಿಮಾಗಳು ಯಾವುವು.?

  'ಇಷ್ಟಂ', 'ಸಂತೋಷಂ', 'ನುವ್ವೆ ನುವ್ವೆ', 'ಟ್ಯಾಗೋರ್' ಮುಂತಾದ ತೆಲುಗಿನ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ ಶ್ರಿಯಾ, ತಮಿಳಿನ 'ಶಿವಾಜಿ', 'ಕಂದಸ್ವಾಮಿ' ಚಿತ್ರಗಳಲ್ಲಿ ನಟಿಸುವ ಮೂಲಕ ಕಾಲಿವುಡ್ ನಲ್ಲೂ ಜನಪ್ರಿಯತೆ ಪಡೆದರು. 'ಆವಾರಾಪನ್', 'ಮಿಷನ್ ಇಸ್ತಾನ್ ಬುಲ್' ಸಿನಿಮಾಗಳಿಂದಾಗಿ ಬಾಲಿವುಡ್ ನಲ್ಲೂ ಬಹು ಬೇಡಿಕೆ ಕಂಡುಕೊಂಡರು ಶ್ರಿಯಾ.

  ಶ್ರಿಯಾ ಕನ್ನಡದ ನಂಟು

  ಶ್ರಿಯಾ ಕನ್ನಡದ ನಂಟು

  ಪುನೀತ್ ರಾಜ್ ಕುಮಾರ್ ಅಭಿನಯದ 'ಅರಸು' ಸಿನಿಮಾದಲ್ಲಿ ಹೀಗೆ ಬಂದು ಹಾಗೆ ಹೋದ ಶ್ರಿಯಾ, ರೂಪಾ ಅಯ್ಯರ್ ನಿರ್ದೇಶನದ 'ಚಂದ್ರ' ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿ ಆಗಿ ಮಿಂಚಿದರು. ಹೀಗಾಗಿ ಕನ್ನಡಿಗರಿಗೂ ಶ್ರಿಯಾ ಪರಿಚಯ ಇದೆ.

  English summary
  Actress Shriya Saran has responded to her marriage news and says, 'It's false, I'm not getting married''.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X