'ಪುಷ್ಪ' ಇಷ್ಟವಾದ್ರೆ 'ಕಾಂತಾರ' ಇಷ್ಟವಾಗುತ್ತೆ; ನಾವು ಅವರಿಂದ ಕಲಿಬೇಕು ಎಂದ ಅಲ್ಲು ಅರ್ಜುನ್ ತಂದೆ ಅರವಿಂದ್!

ಕಳೆದ ತಿಂಗಳ ಅಂತಿಮ ದಿನದಂದು ಕನ್ನಡದಲ್ಲಿ ಬಿಡುಗಡೆಯಾದ ಕಾಂತಾರ ಚಿತ್ರ ಇಡೀ ಭಾರತ ಚಿತ್ರರಂಗದ ಸಿನಿ ಪ್ರೇಕ್ಷಕರ ಗಮನವನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪ್ಯಾನ್ ಇಂಡಿಯಾ ಚಿತ್ರ ಅಲ್ಲದೇ ಇದ್ದರೂ ಸಹ ತನ್ನ ಅತ್ಯಮೂಲ್ಯ ಕಂಟೆಂಟ್ ಮೂಲಕ ಸಿಕ್ಕಾಪಟ್ಟೆ ವೈರಲ್ ಆದ ಕಾಂತಾರ ಚಿತ್ರವನ್ನು ಕನ್ನಡ ಭಾಷೆಯಲ್ಲಿಯೇ ಪರರಾಜ್ಯದ ಸಿನಿ ರಸಿಕರು ನೋಡಲು ಆರಂಭಿಸಿದ್ದರು.

ಚಿತ್ರ ದಾಖಲೆಯ ವಿಮರ್ಶೆ ಪಡೆದುಕೊಳ್ಳುತ್ತಾ ಭರ್ಜರಿ ಕಲೆಕ್ಷನ್ ಮಾಡಲು ಆರಂಭಿಸಿದ ಬೆನ್ನಲ್ಲೇ ಇತರೆ ಭಾಷೆಯ ಸಿನಿಪ್ರೇಕ್ಷಕರು ಕಾಂತಾರ ಚಿತ್ರವನ್ನು ನಮ್ಮ ಭಾಷೆಗಳಿಗೂ ಡಬ್ ಮಾಡಿ ಬಿಡುಗಡೆ ಮಾಡಿ, ಇಲ್ಲಿನ ಪ್ರೇಕ್ಷಕರಿಗೂ ಸಹ ಇಂಥ ಒಳ್ಳೆಯ ಕಂಟೆಂಟ್ ಇರುವ ಚಿತ್ರ ತಲುಪಲಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಹೀಗೆ ಬೇರೆ ರಾಜ್ಯಗಳ ಸಿನಿ ರಸಿಕರಿಂದ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ತಡಮಾಡದ ಹೊಂಬಾಳೆ ಫಿಲ್ಮ್ಸ್ ಕಾಂತಾರ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಡಬ್ ಮಾಡಿ ಟ್ರೈಲರ್ ಬಿಡುಗಡೆಗೊಳಿಸಿದೆ.

ಈಗಾಗಲೇ ತೆಲುಗು ಹಾಗೂ ಹಿಂದಿ ಅವತರಣಿಕೆಯ ಬಿಡುಗಡೆಯ ದಿನಾಂಕವನ್ನು ಹೊಂಬಾಳೆ ಫಿಲ್ಮ್ಸ್ ಘೋಷಿಸಿದ್ದು, ಕಾಂತಾರ ಹಿಂದಿ 14ರಂದು ಬಿಡುಗಡೆಗೊಂಡರೆ, ಕಾಂತಾರ ತೆಲುಗು 15ರಂದು ತೆರೆಗೆ ಬರಲಿದೆ. ಕಾಂತಾರ ತೆಲುಗು ರಾಜ್ಯಗಳ ಬಿಡುಗಡೆಯ ವಿತರಣಾ ಹಕ್ಕನ್ನು ಗೀತಾ ಆರ್ಟ್ಸ್ ಸಂಸ್ಥೆಯ ಮಾಲೀಕ, ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಖರೀದಿಸಿದ್ದಾರೆ. ಹೀಗಾಗಿ ಕಾಂತಾರ ತೆಲುಗು ಪ್ರೆಸ್ ಮೀಟ್ ವೇಳೆ ಮಾತನಾಡಿದ ಅಲ್ಲು ಅರವಿಂದ್ ಚಿತ್ರವನ್ನು ಹಾಡಿ ಹೊಗಳಿದ್ದಾರೆ.

 'ಪುಷ್ಪ ಇಷ್ಟವಾದವರಿಗೆ ಕಾಂತಾರವೂ ಇಷ್ಟವಾಗುತ್ತೆ'

'ಪುಷ್ಪ ಇಷ್ಟವಾದವರಿಗೆ ಕಾಂತಾರವೂ ಇಷ್ಟವಾಗುತ್ತೆ'

ಕಾಂತಾರ ತೆಲುಗು ಪ್ರೆಸ್ ಮೀಟ್ ಕಾರ್ಯಕ್ರಮದಲ್ಲಿ ಮಾತನಾಡಲು ಆರಂಭಿಸಿದ ಅಲ್ಲು ಅರವಿಂದ್ ನಮ್ಮ ಪುಷ್ಪ ಚಿತ್ರ ಇಷ್ಟವಾದವರಿಗೆ ಕಾಂತಾರ ಚಿತ್ರವೂ ಸಹ ಇಷ್ಟವಾಗಲಿದೆ ಎಂದರು. ಎರಡೂ ಚಿತ್ರಗಳು ಕಾಡಿನಲ್ಲಿ ನಡೆಯುವ ಕತೆಗಳಾಗಿದ್ದು, ಕಾಂತಾರ ಚಿತ್ರದಲ್ಲಿ ಕಾಡಿನ ಕತೆಯ ಜತೆಗೆ ದೈವತ್ವವನ್ನು ಸೇರಿಸಿ ತುಂಬಾ ಅಚ್ಚುಕಟ್ಟಾಗಿ ಕತೆಯನ್ನು ಬರೆದಿದ್ದಾರೆ ಎಂದು ಅಲ್ಲು ಅರವಿಂದ್ ಹೊಗಳಿದರು.

 ಅವರಿಂದಲೂ ಸ್ವಲ್ಪ ಕಲಿಯಬೇಕಿದೆ ಎನಿಸಿತು

ಅವರಿಂದಲೂ ಸ್ವಲ್ಪ ಕಲಿಯಬೇಕಿದೆ ಎನಿಸಿತು

'ಕತೆಯನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ, ಅದನ್ನು ಅದ್ದೂರಿಯಾಗಿ ತೆರೆಮೇಲೆ ತರುವುದರಲ್ಲಿ ಅನೇಕ ಸಿನಿಮಾಗಳನ್ನು ನಿರ್ಮಿಸಿರುವ ನನಗೂ ಸಹ ಹೊಂಬಾಳೆ ಫಿಲ್ಮ್ಸ್ ನೋಡಿ ತುಸು ಕಲಿಯಬೇಕಿದೆ ಎನ್ನಿಸಿತು' ಎಂದು ಅಲ್ಲು ಅರವಿಂದ್ ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯನ್ನು ಹಾಡಿ ಹೊಗಳಿದರು.

 ಕೊನೆಯ 40 ನಿಮಿಷ ಅದ್ಭುತ ಎಂದ ಅಲ್ಲು ಅರವಿಂದ್

ಕೊನೆಯ 40 ನಿಮಿಷ ಅದ್ಭುತ ಎಂದ ಅಲ್ಲು ಅರವಿಂದ್

ಕಾಂತಾರ ಚಿತ್ರದ ಕೊನೆಯ ನಲವತ್ತು ನಿಮಿಷಗಳ ಬಗ್ಗೆ ವಿಶೇಷವಾಗಿ ಮಾತನಾಡಿದ ಅಲ್ಲು ಅರವಿಂದ್ ಆ ಭಾಗವನ್ನು ಉಸಿರು ಬಿಗಿಹಿಡಿದುಕೊಂಡು, ಸೀಟಿನ ಮುಂದಕ್ಕೆ ಬಂದು ನೋಡಿದೆ ಎಂದರು. ರಿಷಬ್ ಶೆಟ್ಟಿ ನಿರ್ದೇಶನವನ್ನು ನೋಡಿದ್ದೆ, ಬೆಲ್ ಬಾಟಮ್ ಚಿತ್ರದಲ್ಲಿ ಆತನ ನಟನೆಯನ್ನು ಕೂಡ ನೋಡಿದ್ದೆ, ಆದರೆ ಈ ಚಿತ್ರದಲ್ಲಿನ ಆತನ ನಟನೆ ಮಾತ್ರ ಅತ್ಯದ್ಭುತ ಎಂದು ಅಲ್ಲು ಅರವಿಂದ್ ಕೊಂಡಾಡಿದರು. ನಾನು ಹೇಗೆ ಚಿತ್ರವನ್ನು ನೋಡಿ ಎಂಜಾಯ್ ಮಾಡಿದೆ ಅದೇ ರೀತಿ ನೀವು ಕೂಡ ಚಿತ್ರವನ್ನು ನೋಡಿ ಇಷ್ಟ ಪಡುತ್ತೀರ ಎಂದು ಅಲ್ಲು ಅರವಿಂದ್ ಭರವಸೆ ವ್ಯಕ್ತಪಡಿಸಿದರು.

More from Filmibeat

English summary
I need to learn from Homable Films says Allu Aravind at Kantara Telugu press meet . Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X