'ಗೀತಾಗೋವಿಂದಂ' ಚಿತ್ರದಲ್ಲಿ ರಶ್ಮಿಕಾ ಪಾತ್ರ ಈ ನಟಿ ಮಾಡಬೇಕಿತ್ತು.!

By Bharath Kumar

ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು 'ಗೀತಾ ಗೋವಿಂದಂ' ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ.

'ಅರ್ಜುನ್ ರೆಡ್ಡಿ' ಖ್ಯಾತಿಯ ನಟ ವಿಜಯ ದೇವರಕೊಂಡ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದರು. ರಶ್ಮಿಕಾ ಮತ್ತು ದೇವರಕೊಂಡ ಜೋಡಿಯ ನೋಡಿದ ಪ್ರತಿಯೊಬ್ಬ ಪ್ರೇಕ್ಷಕ ಕೂಡ ಇವರಿಬ್ಬರ ಕಾಂಬಿನೇಷನ್ ಕಂಡು ಚಪ್ಪಾಳೆ ಹೊಡೆದಿದ್ದರು. 'ದಿ ಬೆಸ್ಟ್ ಪೇರ್' ಎಂದು ಹಾಡಿ ಹೊಗಳಿದ್ದರು.

ತೆಲುಗು ಇಂಡಸ್ಟ್ರಿಯಂತೂ ರಶ್ಮಿಕಾ ಮಂದಣ್ಣ ಅವರನ್ನ ತಲೆ ಮೇಲೆ ಕೂರಿಸಿಕೊಂಡಿದೆ. ಅಷ್ಟರ ಮಟ್ಟಿಗೆ ರಶ್ಮಿಕಾ ಮೋಡಿ ಮಾಡಿದ್ದಾರೆ. ಈ ಚಿತ್ರ ನೋಡಿ ಮತ್ತಷ್ಟು ತೆಲುಗು ಪ್ರೊಡ್ಯೂಸರ್ ಕಿರಿಕ್ ಚೆಲುವೆಗೆ ಆಫರ್ ನೀಡುತ್ತಿದ್ದಾರೆ. ಇಷ್ಟೆಲ್ಲಾ ಹವಾ ಮಾಡಿರುವ ರಶ್ಮಿಕಾ, ಈ ಪಾತ್ರಕ್ಕೆ ಆಯ್ಕೆಯಾಗಿದ್ದು ಅದೃಷ್ಟವೇ ಸರಿ. ಯಾಕಂದ್ರೆ, ರಶ್ಮಿಕಾಗೂ ಮೊದಲೇ ಈ ಸಿನಿಮಾ ಇನ್ನೊಬ್ಬ ನಟಿಗೆ ಹೋಗಿತ್ತು. ಯಾರು ಆ ನಟಿ.?

ರಶ್ಮಿಕಾ ಎರಡನೇ ಆಯ್ಕೆ

ರಶ್ಮಿಕಾ ಎರಡನೇ ಆಯ್ಕೆ

'ಗೀತಾ ಗೋವಿಂದಂ' ಚಿತ್ರಕ್ಕೆ ರಶ್ಮಿಕಾ ಎರಡನೇ ಆಯ್ಕೆಯಾಗಿದ್ದರು ಎಂಬುದು ಈಗ ಬಹಿರಂಗವಾಗಿದೆ. ಅದಕ್ಕೂ ಮುಂಚೆ ಮತ್ತೊಬ್ಬ ನಟಿಗೆ ಈ ಅವಕಾಶ ಹೋಗಿತ್ತು. ಆದ್ರೆ, ಆ ನಟಿ ಒಪ್ಪಿಕೊಂಡಿರಲಿಲ್ಲ. ನಂತರ ರಶ್ಮಿಕಾ ಅವರನ್ನ ನೋಡಿದ ನಿರ್ದೇಶಕ 'ಇವರೇ ನಮ್ಮ ಚಿತ್ರಕ್ಕೆ ನಾಯಕಿ' ಎಂದು ಫಿಕ್ಸ್ ಆದರಂತೆ.

ಇವರೇ ಆ ನಟಿ...

ಇವರೇ ಆ ನಟಿ...

ರಶ್ಮಿಕಾ ಮಂದಣ್ಣಗೂ ಮೊದಲ 'ಗೀತಾ ಗೋವಿಂದಂ' ಸಿನಿಮಾ ಮಾಡಬೇಕಿದ್ದ ನಟಿ ಅನು ಎಮ್ಮನ್ಯುಲ್. ಬಂದ ಅವಕಾಶವನ್ನ ದೂರ ಮಾಡಿಕೊಂಡಿದ್ದಕ್ಕೆ ಈಗ ಬೇಸರಗೊಂಡಿದ್ದಾರೆ. ಅಯ್ಯೂ ಎಂತಹ ಚಾನ್ಸ್ ಮಿಸ್ ಮಾಡಿಕೊಂಡ್ನಲ್ಲ ಅಂತ ಕೊರಗುತ್ತಿದ್ದಾರಂತೆ.

'ಗೀತಾಗೋವಿಂದಂ' ಯಾಕೆ ಒಪ್ಪಿಕೊಂಡಿಲ್ಲ

'ಗೀತಾಗೋವಿಂದಂ' ಯಾಕೆ ಒಪ್ಪಿಕೊಂಡಿಲ್ಲ

ಅನು ಎಮ್ಮನ್ಯುಲ್ ವಿಜಯ್ ದೇವರಕೊಂಡ ಅವರ ಗೀತಾಗೋವಿಂದ ಸಿನಿಮಾ ಒಪ್ಪಿಕೊಳ್ಳಲು ಕಾರಣ ಬ್ಯುಸಿ ಶೆಡ್ಯೂಲ್ ಅಂತೆ. ಈ ಸಿನಿಮಾ ಆಫರ್ ಬಂದಾಗ ಅಲ್ಲು ಅರ್ಜುನ್ ಅಭಿನಯದ 'ನಾ ಪೇರು ಸೂರ್ಯ ನಾ ಇಲ್ಲು ಪೇರು ಇಂಡಿಯಾ' ಸಿನಿಮಾ ಮಾಡ್ತಿದ್ದರಂತೆ. ಅದರ ಜೊತೆಗೆ 'ಶೈಲಜಾರೆಡ್ಡಿ ಅಲ್ಲುಡು' ಸಿನಿಮಾ ಬಂತಂತೆ.

ಕಥೆ ತುಂಬಾ ಇಷ್ಟ ಆಗಿತ್ತಂತೆ

ಕಥೆ ತುಂಬಾ ಇಷ್ಟ ಆಗಿತ್ತಂತೆ

ಗೀತಾಗೋವಿಂದಂ ಚಿತ್ರದ ಗೀತಾ ಪಾತ್ರ ಮತ್ತು ಇಡೀ ಸಿನಿಮಾ ಕಥೆ ಅನು ಎಮ್ಮನ್ಯುಲ್ ಗೆ ತುಂಬಾ ಇಷ್ಟ ಆಗಿತ್ತಂತೆ. ಸಿನಿಮಾ ಮಾಡಬೇಕೆಂಬ ಆಸೆಯಿತ್ತಂತೆ. ಅದು ಬೇರೆ 'ಅರ್ಜುನ್ ರೆಡ್ಡಿ' ಸಿನಿಮಾ ಇನ್ನು ಬಿಡುಗಡೆಯಾಗಿರಲಿಲ್ಲ ಎಂಬ ಭಾವನೆ ಬೇರೆ ಇತ್ತಂತೆ. ಹಾಗಾಗಿ, ಸಿನಿಮಾವನ್ನ ಒಪ್ಪಿಕೊಳ್ಳಲು ಆಗಿಲ್ಲ ಎಂದು ಹೇಳಿಕೊಂಡಿದ್ದಾರೆ ಅನು.

ಖಿನ್ನತೆಗೆ ಒಳಗಾಗಿದ್ದರು

ಖಿನ್ನತೆಗೆ ಒಳಗಾಗಿದ್ದರು

ಈ ಮಧ್ಯೆ ಅನು ಅಭಿನಯದ ಕೆಲವು ಚಿತ್ರಗಳು ಫ್ಲಾಫ್ ಆಗಿತ್ತು. ಪವನ್ ಕಲ್ಯಾಣ್ ಜೊತೆಯಲ್ಲಿ ಅಭಿನಯಿಸಿದ ಅಜ್ಞಾತವಾಸಿ ಅಂತಹ ದೊಡ್ಡ ಸಿನಿಮಾ ಮಕಾಡೆ ಮಲಗಿತ್ತು. ಇದು ಸಹಜವಾಗಿ ನನ್ನನ್ನು ಖಿನ್ನತೆಗೆ ಗುರಿ ಮಾಡಿತ್ತು ಎಂದು ನಟಿ ಅನು ಸಂದರ್ಶನದಲ್ಲಿ ಹೇಳಿದ್ದಾರೆ.

More from Filmibeat

English summary
Telugu actress Anu Emmanuel revealed on why she didn't play the lead in Geetha Govindam.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X