ಈ ಹೀರೊನಲ್ಲಿ ನಾನು ಅಪ್ಪುನ ನೋಡ್ತೀನಿ: ಆತನ ರೇಂಜಿಗೆ ನಾನು ಡ್ಯಾನ್ಸ್ ಮಾಡ್ಬೇಕು!
ಪುನೀತ್ ರಾಜ್‌ಕುಮಾರ್ ಹಾಗೂ ಶಿವರಾಜ್‌ಕುಮಾರ್ ಆತ್ಮೀಯ ಒಡನಾಟ ಹೇಗಿತ್ತು ಎನ್ನುವುದು ಗೊತ್ತೇಯಿದೆ. ಅಪ್ಪು ನಟನೆ, ಡ್ಯಾನ್ಸ್‌ನ ಶಿವಣ್ಣ ಸದಾ ಕೊಂಡಾಡುತ್ತಿದ್ದರು. ಇನ್ನು ಅಪ್ಪು ಕೂಡ ಶಿವಣ್ಣನೇ ನನಗೆ ರೋಲ್ ಮಾಡೆಲ್ ಎನ್ನುತ್ತಿದ್ದರು.
ಕನ್ನಡ ಚಿತ್ರರಂಗದ ನಂಬರ್ ವನ್ ಡ್ಯಾನ್ಸರ್ ಅಂದರೆ ಅದು ಶಿವಣ್ಣ ಮತ್ತು ಪುನೀತ್ ರಾಜ್‌ಕುಮಾರ್. ಇದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಅಪ್ಪು ಅಗಲಿಕೆಯ ನೋವು ಇನ್ನು ಕರಗುತ್ತಲೇ ಇಲ್ಲ. ಅಪ್ಪು ಬಾಲ್ಯದ ಫೋಟೊಗಳನ್ನು ನೋಡುತ್ತಿದ್ದರೆ ಶಿವಣ್ಣ ಕಣ್ಣಲ್ಲಿ ನೀರು ತುಂಬಿ ಕೊಳ್ಳುತ್ತಾರೆ. ಅಳಬಾರದು ಎಂದು ಪ್ರಯತ್ನಿಸಿದರೂ ಪದೇ ಪದೇ ಕಣ್ಣಾಲಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ. 'ವೇದ' ತೆಲುಗು ಪ್ರೀ ರಿಲೀಸ್ ಈವೆಂಟ್‌ನಲ್ಲಿ ಅಪ್ಪು ಎವಿ ನೋಡುತ್ತಾ ಶಿವಣ್ಣ ಭಾವುಕರಾದರು. ಪತ್ನಿ ಗೀತಾ ಹಾಗೂ ನಟ ಬಾಲಕೃಷ್ಣ ಸಮಾಧಾನ ಮಾಡಿದರು.
ಈ ವಾರ 'ವೇದ' ತೆಲುಗು ವರ್ಷನ್ ಆಂಧ್ರ, ತೆಲಂಗಾಣದಲ್ಲಿ ರಿಲೀಸ್ ಆಗ್ತಿದೆ. ಚಿತ್ರತಂಡ ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದೆ. ಶಿವಣ್ಣ ಕೂಡ ಸಾಕಷ್ಟು ಸಂದರ್ಶನಗಳಲ್ಲಿ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ.

ಅಲ್ಲು ಅರ್ಜುನ್‌ನಲ್ಲಿ ಅಪ್ಪುನ ನೋಡ್ತೀನಿ
"ಅಲ್ಲು ಅರ್ಜುನ್ ಡ್ಯಾನ್ಸ್ ಅಂದರೆ ಬಹಳ ಇಷ್ಟ. ನಾನು ಅವರಲ್ಲಿ ಪುನೀತ್ ರಾಜ್‌ಕುಮಾರ್‌ನ ನೋಡ್ತೀನಿ. ಪುನೀತ್, ಅಲ್ಲು ಅರ್ಜುನ್, ಜ್ಯೂ.ಎನ್‌ಟಿಆರ್ ಸೇಮ್ ಕ್ವಾಲಿಟಿ ಇದೆ. ಇವರು ಮೂರು ಜನ ಒಂದೇ ಎನಿಸುತ್ತಾರೆ. ಅಲ್ಲು ಅರ್ಜುನ್ ಡ್ಯಾನ್ಸ್ ನೋಡಿದಾಗಲೆಲ್ಲಾ ನನಗೆ ಪುನೀತ್ ಡ್ಯಾನ್ಸ್ ನೋಡಿದಂತೆ ಆಗುತ್ತದೆ. ಅವರಿಗೆ ಡ್ಯಾನ್ಸ್‌ನಲ್ಲಿ ಆ ಸ್ಟೈಲ್ ಇದೆ. ಅಲ್ಲು ಅರ್ಜುನ್ ಒಳ್ಳೆ ಡ್ಯಾನ್ಸ್, ಎನ್‌ಟಿಆರ್ ಕೂಡ ಒಳ್ಳೆ ಡ್ಯಾನ್ಸರ್. ಅಬ್ಬಬ್ಬಾ ಇಬ್ಬರು ಎಂತಹ ಡ್ಯಾನ್ಸರ್‌ಗಳು"

'ಬುಟ್ಟ ಬೊಮ್ಮ' ತರ ಡ್ಯಾನ್ಸ್ ಮಾಡ್ಬೇಕು
"ಅಲ್ಲು ಅರ್ಜುನ್ 'ಬುಟ್ಟ ಬೊಮ್ಮ' ಸಾಂಗ್ ನೋಡಿದಾಗ ಆ ತರ ಡ್ಯಾನ್ಸ್ ಮಾಡಬೇಕು ಎನಿಸುತ್ತದೆ. ಬಹಳ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ" ಎಂದು ಶಿವಣ್ಣ ಹೇಳಿದ್ದಾರೆ. 'ಅಲಾವೈಕುಂಠಪುರಂಲೋ' ಚಿತ್ರದ ಸೂಪರ್ ಹಿಟ್ ಸಾಂಗ್ ಇದು. ಅಲ್ಲು ಅರ್ಜುನ್- ಪೂಜಾ ಹೆಗ್ಡೆ ಕುಣಿದಿದ್ದ ಈ ಸಾಂಗ್ ಅಭಿಮಾನಿಗಳ ಫೇವರಿಟ್. ಜಾನಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಸಾಂಗ್ ಸಿಕ್ಕಾಪಟ್ಟೆ ಅದ್ಭುತವಾಗಿ ಮೂಡಿ ಬಂದಿತ್ತು. ಡ್ಯಾನ್ಸ್ ಅಂತೂ ಸಿಂಪ್ಲಿ ಸೂಪರ್. ಶಿವಣ್ಣ ಅದ್ಭುತ ಡ್ಯಾನ್ಸರ್ ಆದರೂ ಬೇರೆ ನಟರ ಡ್ಯಾನ್ಸ್ ಮೆಚ್ಚಿಕೊಳ್ಳುವುದು ಅಭಿಮಾನಿಗಳ ಮನಗೆದ್ದಿದೆ.

'ಶಿವ ವೇದ'ಗೆ ಬಾಲಕೃಷ್ಣ ಸಾಥ್
ಈ ವಾರ ಶಿವಣ್ಣ ನಟನೆಯ 'ವೇದ' ಸಿನಿಮಾ ತೆಲುಗಿಗೆ ಡಬ್ ಆಗಿ ರಿಲೀಸ್ ಆಗ್ತಿದೆ. ಹೈದರಾಬಾದ್‌ನಲ್ಲಿ ನಡೆದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ನಟಸಿಂಹ ಬಾಲಕೃಷ್ಣ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈಗಾಗಲೇ ಸಿನಿಮಾ ನೋಡಿರುವ ಬಾಲಯ್ಯ, ಎಲ್ಲರಿಗೂ ಸಿನಿಮಾ ಇಷ್ಟವಾಗುತ್ತದೆ ನೋಡಿ ಎಂದರು. ಬಾಲಕೃಷ್ಣ ಬೆಂಬಲಕ್ಕೆ ಶಿವಣ್ಣ ಕೂಡ ಧನ್ಯವಾದ ತಿಳಿಸಿದ್ದಾರೆ.

ಶುಕ್ರವಾರ ಓಟಿಟಿಯಲ್ಲಿ 'ವೇದ'
ಬಹಳ ಹಿಂದೆಯೇ 'ಶಿವ ವೇದ' ಸಿನಿಮಾ ತೆರೆಗೆ ಬರಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿದೆ. ನಾಳೆ(ಫೆಬ್ರವರಿ 9) 'ವೇದ' ತೆಲುಗು ವರ್ಷನ್ ಥಿಯೇಟರ್‌ಗಳಲ್ಲಿ ರಿಲೀಸ್ ಆಗುತ್ತಿದೆ. ಆದರೆ ಶುಕ್ರವಾರ ಕನ್ನಡ ವರ್ಷನ್ ಓಟಿಟಿಗೆ ಬರ್ತಿದೆ. ಹೌದು ಜೀ ಸ್ಟುಡಿಯೋಸ್ ಸಂಸ್ಥೆ ಫೆಬ್ರವರಿ 10ಕ್ಕೆ ಚಿತ್ರವನ್ನು ಓಟಿಟಿಯಲ್ಲಿ ರಿಲೀಸ್ ಮಾಡಲು ತೀರ್ಮಾನಿಸಿತ್ತು. ಅದರಲ್ಲಿ ತೆಲುಗಿನಲ್ಲಿ ಥಿಯೇಟರ್‌ಗೆ ಬಂದ ಮರುದಿನವೇ ಕನ್ನಡ ವರ್ಷನ್ ಡಿಜಿಟಲ್ ಸ್ಟ್ರೀಮಿಂಗ್ ಆಗಲಿದೆ.


Click it and Unblock the Notifications











